2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತಕ್ಕೆ 40ನೇ ಸ್ಥಾನ

ವಿಶ್ವ ಆರ್ಥಿಕ ವೇದಿಕೆ ಹೊರತಂದಿರುವ 2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ 40ನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಒಟ್ಟು 136 ರಾಷ್ಟ್ರಗಳನ್ನು ಸಮೀಕ್ಷೆಗೆ ಒಳಪಡಿಸಿಲಾಗಿತ್ತು.  2015ನೇ ವರ್ಷದ ಸೂಚ್ಯಂಕದಲ್ಲಿ ಭಾರತ 52ನೇ ಸ್ಥಾನದಲ್ಲಿತ್ತು. ಈ ಬಾರಿ 12 ಸ್ಥಾನಗಳನ್ನು ಜಿಗಿಯುವ ಮೂಲಕ 40ನೇ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಮುಖಾಂಶಗಳು:

  • ಟಾಪ್ 10 ರಾಷ್ಟ್ರಗಳು: ಸ್ಪೇನ್ (1), ಫ್ರಾನ್ಸ್ (2), ಜರ್ಮನಿ (3), ನೆದರ್ಲ್ಯಾಂಡ್ (4), ಯುಕೆ (5), ಅಮೆರಿಕ (6), ಆಸ್ಟ್ರೇಲಿಯಾ (7), ಇಟಲಿ (8), ಕೆನಡಾ (9) ಮತ್ತು ಚೀನಾ (10).
  • ಜಾಗತಿಕವಾಗಿ ಆರ್ಥಿಕವಾಗಿ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿವೆ. ಟಾಪ್ 15 ರಾಷ್ಟ್ರಗಳಲ್ಲಿ 12 ರಾಷ್ಟ್ರಗಳು ಆರ್ಥಿಕವಾಗಿ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಾಗಿವೆ.
  • ಪ್ರವಾಸೋಧ್ಯಮಕ್ಕೆ ಏಷ್ಯಾ ಅಚ್ಚುಮೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಆದರೆ ಭದ್ರತೆ, ಸಾಂಸ್ಕೃತಿಕ ಪರಂಪರೆ ಉತ್ತೇಜನ, ದೃಡವಾದ ವೀಸಾ ನೀತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಏಷ್ಯಾ ರಾಷ್ಟ್ರಗಳು ಸಾಕಷ್ಟು ಸುಧಾರಿಸಬೇಕಿದೆ.
  • ವಿಶ್ವದ ವಾರ್ಷಿಕ ಜಿಡಿಪಿ ಪಾಲಿನಲ್ಲಿ ಪ್ರವಾಸೋಧ್ಯಮದ ಪಾಲು ಶೇ 10% ರಷ್ಟಿದೆ. ಸ್ಥಿರ ಆರ್ಥಿಕತೆ ಅನೇಕ ರಾಷ್ಟ್ರಗಳಲ್ಲಿ ಇದು ಪ್ರಮುಖ ವ್ಯವಹಾರವೆನಿಸಿದೆ.
  • ಭಾರತ ಸರ್ಕಾರ ಕೈಗೊಂಡಿರುವ ವೀಸಾ ನೀತಿ, ಇ-ವೀಸಾ ಸೌಲಭ್ಯ, ಸ್ಥಳೀಯ ಸಾರಿಗೆ ವ್ಯವಸ್ಥೆ ಸುಧಾರಣೆಯಿಂದಾಗಿ ಸೂಚ್ಯಂಕದಲ್ಲಿ ಭಾರತ ಜಿಗಿತ ಕಾಣಲು ನೆರವಾಗಿದೆ.
  • ಅಲ್ಲದೇ ಭಾರತದ ವಿಸ್ತಾರವಾದ ಸಾಂಸ್ಕೃತಿಕ ಹಾಗೂ ನೈಸರ್ಗಿಕ ತಾಣಗಳು ವಿದೇಶಿ ಪ್ರವಾಸಿಗರನ್ನು ಸೆಳೆಯಲು ನೆರವಾಗಿವೆ.

ಸೂಚ್ಯಂಕದ ಬಗ್ಗೆ:

  • ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆ ಹೊರತರುತ್ತಿದೆ. ಒಟ್ಟು 14 ಆಯಾಮಗಳನ್ನು ಪರಿಗಣಿಸಿ ಸೂಚ್ಯಂಕವನ್ನು ಹೊರತರಲಾಗುತ್ತಿದೆ.

ಶುಕ್ರ ಗ್ರಹವನ್ನು ಹೋಲುವ ಗ್ರಹವನ್ನು ಪತ್ತೆಹಚ್ಚಿರುವ ಖಗೋಳಶಾಸ್ತ್ರಜ್ಞರು

ನಾಸಾದ ಕೆಪ್ಲರ್ ಬಾಹ್ಯಕಾಶ ದೂರದರ್ಶಕವನ್ನು ಬಳಸಿ ಶುಕ್ರ ಗ್ರಹವನ್ನು ಹೋಲುವ ಹೊಸ ಗ್ರಹವನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಈ ಹೊಸ ಗ್ರಹವು ಮಬ್ಬು ಬೆಳಕು ಹೊರಸೂಸುವ ಕೆಪ್ಲರ್-1649 ಎಂಬ ನಕ್ಷತ್ರದ ಸುತ್ತ ಸುತ್ತುತ್ತಿದೆ. ಈ ಹೊಸ ಗ್ರಹವು ಸೂರ್ಯನ ಸುತ್ತಳತೆಯಲ್ಲಿ 1/5 ರಷ್ಟಿದ್ದು, ಭೂಮಿಗಿಂತ ಸ್ವಲ್ಪ ದೊಡ್ಡದಾಗಿದೆ ಹಾಗೂ ಭೂಮಿಯಿಂದ 219 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿದೆ.

ಪ್ರಮುಖಾಂಶಗಳು:

  • ಶುಕ್ರ ಗ್ರಹವನ್ನು ಹೋಲುವ ಈ ಹೊಸ ಗ್ರಹವು ಕೆಪ್ಲರ್-1649 ಅನ್ನು ಪ್ರತಿ ಒಂಬತ್ತು ದಿನಗೊಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತಿದೆ.
  • ಹೊಸ ಸಂಶೋಧನೆಯು M Dwarf Stars ನ ಪ್ರದಕ್ಷಿಣೆ ಹಾಕುವ ಗ್ರಹಗಳ ಸ್ವಭಾವವನ್ನು ಅರಿಯಲು ಹಾಗೂ ಸಂಶೋಧಿಸಲು ಅತ್ಯಂತ ಸಹಾಯಕಾರಿ ಆಗಲಿದೆ.

ಶುಕ್ರ ಗ್ರಹದ ಬಗ್ಗೆ:

  • ಶುಕ್ರ ಗ್ರಹವು ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹ. ಈ ಗ್ರಹವು ಸೂರ್ಯನನ್ನು 224.7 ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತಿದೆ.
  • 4.6 ಗೋಚರ ಪ್ರಮಾಣವಿರುವ ಶುಕ್ರವು, ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. 47.8° ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ/ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ. ಇದನ್ನು “ಹಗಲು ನಕ್ಷತ್ರ” ಮತ್ತು “ಸಂಜೆ ನಕ್ಷತ್ರ” ಎಂದೂ ಕರೆಯಲಾಗುತ್ತದೆ.
  • ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ.ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.
  • ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ “ಸಹೋದರ ಗ್ರಹ”ವೆಂದೂ ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.
  • ಶುಕ್ರದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 20 ವರ್ಷಗಳಾಲ್ಲಿ ಮಾತ್ರ ತಯಾರಿಸಲಾಗಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು.

ಏಪ್ರಿಲ್ 10: ವಿಶ್ವ ಹೊಮಿಯೊಪಥಿ ದಿನ

ವಿಶ್ವ ಹೊಮಿಯೊಪಥಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುತ್ತಿದೆ. ಹೊಮಿಯೊಪಥಿ ವೈದ್ಯಕೀಯ ಚಿಕಿತ್ಸಾ ಪದ್ದತಿಯ ಪಿತಾಮಹ ಡಾ. ಕ್ರಿಸ್ಚಿಯನ್ ಫ್ರೆಡರಿಕ್ ಸಮ್ಯುಯೆಲ್ ಹಹ್ನೆಮನ್ ಅವರಿಗೆ ಗೌರವ ಸಲ್ಲಿಸುವ ಪ್ರತೀಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಫ್ರೆಡರಿಕ್ ಅವರ 262ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೊಮಿಯೊಪಥಿ ಚಿಕಿತ್ಸಾ ಪದ್ದತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಯ ಈ ದಿನದ ಉದ್ದೇಶವಾಗಿದೆ.

ಹೊಮಿಯೊಪಥಿ:

  • ಹೊಮಿಯೊಪಥಿ ಒಂದು ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದೆ. ಡಾ. ಕ್ರಿಸ್ಚಿಯನ್ ಫ್ರೆಡರಿಕ್ ಸಮ್ಯುಯೆಲ್ ಹಹ್ನೆಮನ್ ಅವರು ಈ ವಿಧಾನವನ್ನು ಅಭಿವೃದ್ದಿಪಡಿಸಿದ ಮೊದಲಿಗರು. ಇಂದು ಹೊಮಿಯೊಪಥಿ ಪ್ರಸಿದ್ದ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದ್ದು, ವಿಶ್ವದ ಅನೇಕ ವೈದ್ಯರು ಇದನ್ನು ಅಳವಡಿಸಿಕೊಂಡಿದ್ದಾರೆ.
  • ವಿಶ್ವದಾದ್ಯಂತ ಅಳವಡಿಸಿಕೊಂಡಿರುವ ಎರಡನೇ ಅತಿ ದೊಡ್ಡ ವೈದ್ಯಕೀಯ ಚಿಕಿತ್ಸಾ ವಿಧಾನ ಇದಾಗಿದೆ. ದೇಹದ ಸ್ವಂತ ಗುಣಪಡಿಸುವ ಶಕ್ತಿಯನ್ನು ಉತ್ತೇಜಿಸಿ ಕಾಯಿಲೆ ವಾಸಿ ಮಾಡುವುದು ಹೊಮಿಯೊಪಥಿ ಚಿಕಿತ್ಸೆಯ ಮುಖ್ಯ ಲಕ್ಷಣ.

Leave a Comment

This site uses Akismet to reduce spam. Learn how your comment data is processed.