ಅಮೆರಿಕದ ಎರಡು ಪ್ರಮುಖ ಹುದ್ದೆಗಳಿಗೆ ಭಾರತೀಯರು ನೇಮಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎರಡು ಪ್ರಮುಖ ಹುದ್ದೆಗಳಿಗೆ ಇಬ್ಬರು ಭಾರತ ಸಂಜಾತರನ್ನು ನೇಮಕ ಮಾಡಿದ್ದಾರೆ. ನಿಯೋಮಿ ರಾವ್‌ ಅವರನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ತಮ್ಮ ಫೆಡರಲ್‌ ರೆಗ್ಯುಲೇಶನ್ಸ್‌ ತಜ್ಞರನ್ನಾಗಿ ನೇಮಿಸಿಕೊಂಡಿದ್ದಾರೆ.

  • ಫೆಡರಲ್‌ ರೆಗ್ಯುಲೇಶನ್ಸ್‌ ವಿಭಾಗದಲ್ಲಿ ಶೇ. 75 ರಷ್ಟು ಯೋಜನೆಗಳನ್ನು ತೆಗೆದುಹಾಕಲು ಅಧ್ಯಕ್ಷ ಟ್ರಂಪ್ ಅವರು ನಿರ್ಧರಿಸಿದ್ದು, ನಿಯೋಮಿ ರಾವ್‌ ಅವರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
  • ಇನ್ನು ಮುಂದೆ, ಅಮೆರಿಕದ ಅಧ್ಯಕ್ಷರ ಶ್ವೇತಭವನದಲ್ಲಿ ಕಾರ್ಯಕಾರಿ ಕಚೇರಿಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ನಿಯೋಮಿ ರಾವ್‌ ಅವರು ಪ್ರಸ್ತುತ ವಿಶ್ವವಿದ್ಯಾಲಯವೊಂದರಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಫಾರಮೇಶನ್ ಅಂಡ್ ರೆಗ್ಯುಲೇಟರಿ ವಿಭಾಗದಲ್ಲಿ ಆಡಳಿತಾಧಿಕಾರಿಯಾಗಲಿದ್ದಾರೆ.
  • ಅಧ್ಯಕ್ಷರ ಧ್ಯೇಯೋದ್ದೇಶಗಳಿಗೆ ಪೂರಕವಾಗಿರದಿದ್ದಲ್ಲಿ ಈ ವಿಭಾಗವು ತಿರಸ್ಕರಿಸುವ ಅಧಿಕಾರವನ್ನು ಹೊಂದಿದೆ. ನಿಯೋಮಿ ರಾವ್‌ ಅವರು ಜಾರ್ಜ್ ಡಬ್ಲ್ಯು ಬುಷ್ ಆಡಳಿತದಿಂದಲೂ ಶ್ವೇತಭವನದಲ್ಲಿ ಅಧಿಕಾರದಲ್ಲಿದ್ದರು. ನಿಯೋಮಿ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ವಿಶಾಲ್ ಅಮಿನ್

  • ಬೌದ್ಧಿಕ ಆಸ್ತಿ ಜಾರಿ ಸಂಯೋಜಕರಾಗಿ ವಿಶಾಲ್‌ ಅಮಿನ್‌ ಅವರನ್ನು ಹಾಗೂ ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿ (ಒಐಆರ್‌ಎ) ಆಡಳಿತಾಧಿಕಾರಿಯಾಗಿ ನಿಯೋಮಿ ರಾವ್‌ ಅವರನ್ನು ನೇಮಿಸಲಾಗಿದೆ.
  • ಸಂಸತ್‌ನ ನ್ಯಾಯಾಂಗ ಸಮಿತಿಯ ಹಿರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಮಿನ್‌ ಅವರು, ಜಾರ್ಜ್‌ ಬುಷ್‌ ಅಧ್ಯಕ್ಷರಾಗಿದ್ದಾಗ ದೇಶೀಯ ನೀತಿ ಹಾಗೂ ವಾಣಿಜ್ಯ ಇಲಾಖೆಯ ಸಹ ನಿರ್ದೇಶಕರಾಗಿದ್ದರು.

ಸುಧಾರಿತ ಕ್ಷಿಪಣಿ ವ್ಯವಸ್ಥೆ ಪೂರೈಕೆಗೆ ಇಸ್ರೇಲ್-ಭಾರತ ಒಪ್ಪಂದ

ಸುಧಾರಿತ ಮಧ್ಯಮ ವ್ಯಾಪ್ತಿಯ ಮೇಲ್ಮೆಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ (Medium Range Surface to air Missile System (MRSMS)) ಪೂರೈಸುವ ಸಂಬಂಧ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದ ಅನ್ವಯ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿಯು ಭಾರತಕ್ಕೆ ಎಂಟು ಬರಾಕ್-8 ಸುಧಾರಿತ MRSMS ಕ್ಷಿಪಣಿಗಳನ್ನು ಪೂರೈಸಲಿದೆ.

MRSMS:

  • ಎಂಆರ್ಎಸ್ಎಂಎಸ್ ಒಂದು ಅತ್ಯಂತ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದ್ದು, ಶತ್ರು ವಿಮಾನ, ಡ್ರೋಣ್ ಹಾಗೂ ಕ್ಷಿಪಣಿಗಳನ್ನು ಒಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಹಾಗೂ ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ ಇದನ್ನು ಅಭಿವೃದ್ದಿಪಡಿಸಿವೆ. ಬಿಇಎಲ್, ಬಿಹೆಚ್ಇಎಲ್, ಎಲ್ &  ಟಿ ಇತರೆ ಪಾಲುದಾರಿಕೆ ಸಂಸ್ಥೆಗಳಾಗಿವೆ.
  • ಈಗಾಗಲೇ ಭಾರತೀಯ ವಾಯುದಳ ಹಾಗೂ ಭಾರತೀಯ ನೌಕ ಪಡೆ ಹಾಗೂ ಇಸ್ರೇಲ್ ರಕ್ಷಣಾ ದಳದಲ್ಲಿ ಈ ಕ್ಷಿಪಣಿಗಳನ್ನು ಬಳಸಬಹುದಾಗಿದೆ. ಇವುಗಳ ಸೇರ್ಪಡೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಅಧಿಕ ಬಲ ಬರಲಿದೆ.

ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ನಾಲ್ಕನೇ ಅತಿದೊಡ್ಡ ರಾಷ್ಟ್ರ ಇಸ್ರೇಲ್. ಅಮೆರಿಕ, ರಷ್ಯಾ ಮತ್ತು ಫ್ರಾನ್ಸ್ ಮೊದಲ ಮೂರು ಸ್ಥಾನದಲ್ಲಿವೆ. ಈ ಒಪ್ಪಂದದಿಂದಾಗಿ ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತುಷ್ಟು ಸುಧಾರಣೆ ಆಗಲಿದೆ.

64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಮರಾಠಿ ಚಿತ್ರ ಕಸಾವ್ಗೆ ಶ್ರೇಷ್ಠ ಕಥಾಚಿತ್ರ ಪ್ರಶಸ್ತಿ ದೊರೆತಿದೆ. ಕನ್ನಡದ ಅಲ್ಲಮ್ಮ ಸೇರಿದಂತೆ ಎರಡು ಚಿತ್ರಗಳು ಪ್ರಶಸ್ತಿ ಪಡೆದಿವೆ. ರಿಸರ್ವೇಷನ್ ಹಾಗೂ ಅಲ್ಲಮ್ಮ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಇದೇ ಮೊದಲ ಬಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ.

ಪ್ರಮುಖ ಪ್ರಶಸ್ತಿಗಳ ವಿವರ:

ಅತ್ಯುತ್ತಮ ಕನ್ನಡ ಚಿತ್ರ : ರಿಸರ್ವೇಷನ್

ಅತ್ಯುತ್ತಮ ಹಿಂದಿ ಚಿತ್ರ : ನಿರ್ಜಾ

ಅತ್ಯುತ್ತಮ ತಮಿಳು ಚಿತ್ರ : ಜೋಕರ್

ಅತ್ಯುತ್ತಮ ನಟ: ಅಕ್ಷಯ್ ಕುಮಾರ್ ( ರುಸ್ತುಂ)

ಅತ್ಯುತ್ತಮ ನಟಿ : ಮಲಯಾಳಂನ ಸುರಭಿ ಲಕ್ಷ್ಮಿ

ವಿಶೇಷ ಎಫೆಕ್ಟ್ ಚಿತ್ರ : ಶಿವಾಯ್

ತೀರ್ಪುಗಾರರ ಪ್ರಶಸ್ತಿ: ಮೋಹನ್ ಲಾಲ್

ಅತ್ಯುತ್ತಮ ಪೋಷಕ ನಟಿ : ಜಾಯಿರಾ ವಸೀಮ್

ಮೋಸ್ಟ್ ಫಿಲ್ಮ್ ಫ್ರೆಂಡ್ಲಿ ಸ್ಟೇಟ್: ಉತ್ತರ ಪ್ರದೇಶ  ‘

ಅತ್ಯುತ್ತಮ ಆಕ್ಷನ್ ನಿರ್ದೇಶಕ : ಪುಲಿ ಮುರುಗನ್

ಶ್ರೇಷ್ಠ ಬಾಲ ನಟ: ಮನೋಹರ್ ಕೆ (ಕನ್ನಡ- ರೈಲ್ವೆ ಚಿಲ್ಡ್ರನ್) ಆದೀಶ್ ಪ್ರವೀಣ್ (ಮಲೆಯಾಳಂ ಸಿನಿಮಾ ಕುಂಜು ದೈವಂ).

ಚೂರು ಪಾರು:

  • ಮುಂಬೈನಲ್ಲಿ NBAದ ಮೊದಲ ಶಾಲೆ: ಅಮೆರಿಕ ಮೂಲದ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಭಾರತದಲ್ಲಿ ತನ್ನ ಮೊದಲ ತರಭೇತಿ ಶಾಲೆಯನ್ನು ಮುಂಬೈನಲ್ಲಿ ಸ್ಥಾಪಿಸಿದೆ. NBAದ ಪ್ರಸ್ತುತ ಹಾಗೂ ಮಾಜಿ ತರಭೇತುದಾರರ ಅನುಭವದಂತೆ ಪಠ್ಯಕ್ರಮವನ್ನು ಸಿದ್ದಪಡಿಸಲಾಗುವುದು.
  • ವಿಶ್ವಸಂಸ್ಥೆಯ ಶಾಂತಿ ದೂತೆಯಾಗಿ ಮಲಾಲ ನೇಮಕ: ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನ ಮೂಲದ ಮಾನವ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಜಾಯಿ ಅವರನ್ನು ವಿಶ್ವಸಂಸ್ಥೆಯ ಶಾಂತಿ ದೂತೆಯನ್ನಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರು ನೇಮಕ ಮಾಡಿದ್ದಾರೆ. ಆ ಮೂಲಕ ವಿಶ್ವಸಂಸ್ಥೆಯ ಅತ್ಯಂತ ಕಿರಿಯ ಶಾಂತಿ ದೂತೆ ಎಂಬ ಖ್ಯಾತಿಗೆ ಮಲಾಲ ಪಾತ್ರರಾಗಿದ್ದಾರೆ.
  • ಥಾಯ್ಲೆಂಟ್ ಇಂಟರ್ನ್ಯಾಷನಲ್ ನಲ್ಲಿ ಚಿನ್ನ ಗೆದ್ದ ಬಾಕ್ಸರ್ ಶ್ಯಾಮ್ ಕುಮಾರ್: ಭಾರತದ ಬಾಕ್ಸರ್ ಶ್ಯಾಮ್ ಕುಮಾರ್ ಅವರು ಥಾಯ್ಲೆಂಡ್ ಇಂಟರ್ನ್ಯಾಷನಲ್ ಟೂರ್ನಮೆಂಟ್ ನಲ್ಲಿ 49 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಶ್ಯಾಮ್ ಕುಮಾರ್ ಅವರಿಗೆ ಇದು ಎರಡನೇ ಚಿನ್ನದ ಪದಕ. ಈ ಹಿಂದೆ 2015ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.
  • ಹರಿಯಾಣದಲ್ಲಿ ಏರಿಕೆ ಕಂಡ ಲಿಂಗಾನುಪಾತ: ಹರಿಯಾಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತ 950ಕ್ಕೆ ಏರಿಕೆಯಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಅವರು ಈ ವಿಷಯವನ್ನು ದೃಡಿಕರಿಸಿದೆ. “ಬೇಟಿ ಬಚಾವೋ ಬೇಟಿ ಪಡವೋ” ಕಾರ್ಯಕ್ರಮದಿಂದ ಲಿಂಗಾನುಪಾತ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
  • ಬರೇಲಿಯಲ್ಲಿ ಉತ್ತರ ಭಾರತದ ಮೊದಲ ವನ್ಯಜೀವಿ ಡಿಎನ್ಎ ಬ್ಯಾಂಕ್: ಉತ್ತರ ಭಾರತದ ಮೊದಲ ವನ್ಯಜೀವಿ ಡಿಎನ್ಎ ಬ್ಯಾಂಕ್ ಭಾರತೀಯ ಪಶು ಸಂಶೋಧನಾ ಸಂಸ್ಥೆ (IVRI)ಯಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ವನ್ಯಜೀವಿಗಳ ಡಿಎನ್ಎ ಯನ್ನು ಇಲ್ಲಿ ಸಂಗ್ರಹಿಸಿಡಲಾಗುವುದು. ಕಳ್ಳಭೇಟಿ ತಡೆಯಲು ಹಾಗೂ ವನ್ಯಜೀವಿಗಳ ಬಗ್ಗೆ ಸಂಶೋಧನೆ ನಡೆಸಲು ಇದರಿಂದ ಅನುಕೂಲವಾಗಲಿದೆ.

 

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,8,2017”

  1. Sir april and may full current events with explanation realise please

Leave a Comment

This site uses Akismet to reduce spam. Learn how your comment data is processed.