ಮಧ್ಯಪ್ರದೇಶ ಸರ್ಕಾರದಿಂದ ದೀನ್ ದಯಾಳ್ ರಸೋಯಿ ಯೋಜನೆಗೆ ಚಾಲನೆ

ಬಡವರಿಗೆ ಸಬ್ಸಿಡಿ ದರದಲ್ಲಿ ಊಟ ವಿತರಿಸುವ ದೀನ್ ದಯಾಳ್ ರಸೋಯಿ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಚಾಲನೆ ನೀಡಿದೆ. ಬಿಜೆಪಿಯ ಧುರೀಣ ದೀನ್ ದಯಾಳ್ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಯೋಜನೆಯ ಮೊದಲ ಹಂತಕ್ಕೆ ರಾಜ್ಯದ 49 ಜಿಲ್ಲಾ ಕೇಂದ್ರಗಳಲ್ಲಿ ಚಾಲನೆ ನೀಡಿದರು. ಆ ಮೂಲಕ ಜನಪ್ರಿಯ ಸಬ್ಸಿಡಿ ಆಹಾರ ವಿತರಣೆ ಕಾರ್ಯಕ್ರಮವನ್ನು ಚಾಲನೆ ನೀಡಿದ ಮೂರನೇ ರಾಜ್ಯ ಎಂಬ ಖ್ಯಾತಿಗೆ ಮಧ್ಯಪ್ರದೇಶ ಒಳಗಾಗಿದೆ. ಈಗಾಗಲೇ ತಮಿಳುನಾಡು ಹಾಗೂ ರಾಜಸ್ತಾನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಪ್ರಮುಖಾಂಶಗಳು:

  • ಯೋಜನೆಯಡಿ ಬಡ ಜನರು, ಬಡ ಕುಟುಂಬಗಳು ಹಾಗೂ ಅಂತಹ ಕುಟುಂಬಗಳ ಸದಸ್ಯರಿಗೆ ರೂ 5ಕ್ಕೆ ಪೌಷ್ಠಿಕ ಭರಿತ ಊಟವನ್ನು ನೀಡಲಾಗುವುದು.
  • ಯೋಜನೆಯನ್ನು ಯಶಸ್ವಿಗೊಳಿಸಲು ಜಿಲ್ಲಾ ಮಟ್ಟದಲ್ಲಿ ಕ್ಯಾಂಟೀನ್ ಗಳನ್ನು ತೆರೆಯಲಾಗುವುದು. ದೊಡ್ಡ ಜಿಲ್ಲೆಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ಯಾಂಟೀನ್ ಗಳನ್ನು ಬೇಡಿಕೆಗೆ ಅನುಗುಣವಾಗಿ ತೆರೆಯಲಾಗುವುದು.
  • ಈ ಕ್ಯಾಂಟೀನ್ ಗಳು ಪ್ರತಿ ದಿನ ಸುಮಾರು 2000 ಜನರಿಗೆ ರುಚಿ ಹಾಗೂ ಶುಚಿಯಾದ ಊಟದ ವ್ಯವಸ್ಥೆ ಕಲ್ಪಿಸಲಿವೆ.

ದ್ವೈಮಾಸಿಕ ಹಣಕಾಸು ಪರಾಮರ್ಶೆ ವರದಿ: ರೆಪೊ ದರ ಯಥಾಸ್ಥಿತಿ

ಭಾರತೀಯ ರಿಸರ್ವ್‌ ಬ್ಯಾಂಕ್‌, 2017–18ನೆ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ಪರಾಮರ್ಶೆ ವರದಿಯನ್ನು ಪ್ರಕಟಿಸಿದೆ.  ರೆಪೊ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿದೆ ಯಥಾಸ್ಥಿತಿಯನ್ನು ಕಾಪಾಡಲಾಗಿದೆ.

ಪ್ರಮುಖಾಂಶಗಳು:

  • ರಿವರ್ಸ್ ರಿಪೊ ದರವನ್ನು ಶೇ.5.75 ರಿಂದ ಶೇ.6ಕ್ಕೆ ಏರಿಕೆ ಮಾಡಲಾಗಿದೆ. ಸಾಲ ನೀಡಲು ಅವಕಾಶವಿಲ್ಲದೇ ಇರುವ ಬ್ಯಾಂಕುಗಳಲ್ಲಿ ಹಣದ ಸಂಗ್ರಹ ಜಾಸ್ತಿಯಾದರೆ ಆರ್‌ಬಿಐ ಅದನ್ನು ಠೇವಣಿಯಾಗಿ ಸ್ವೀಕರಿಸುತ್ತದೆ ಇದಕ್ಕಾಗಿ ಆರ್‌ಬಿಐ ಬ್ಯಾಂಕುಗಳಿಗೆ ಬಡ್ಡಿಯನ್ನು ನೀಡುತ್ತದೆ ಈ ದರವನ್ನು ರಿವರ್ಸ್ ರಿಪೊ ದರ ಎನ್ನಲಾಗುತ್ತದೆ.
  • ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಹಣದುಬ್ಬರ ದರದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದ್ದರಿಂದ ಶೇ.6.25ರಷ್ಟಿದ್ದ ರಿಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ ಬಿಐ ತೀರ್ಮಾನಿಸಿದೆ.

ರೆಪೊ ದರ: ಬ್ಯಾಂಕ್‍ಗಳು ವಹಿವಾಟು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ವಿಧಿಸುವ ಬಡ್ಡಿದರವಾಗಿದೆ.

ನಾಸ್ಕಾಂನ ನೂತನ ಅಧ್ಯಕ್ಷರಾಗಿ ರಮಣ್ ರಾಯ್ ನೇಮಕ

ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ ವೇರ್ ಅಂಡ್ ಸರ್ವೀಸ್ ಅಸೋಸಿಯೇಷನ್ (ನಾಸ್ಕಾಂ)ನ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ರಮಣ್ ರಾಯ್ ಅವರು ನೇಮಕಗೊಂಡಿದ್ದಾರೆ.

  • ಟೆಕ್ ಮಹೀಂದ್ರಾ ಸಿಇಓ ಮತ್ತು ಎಂಡಿ ಆಗಿರುವ ಸಿಪಿ ಗುರ್ನಾಣಿ ಅವರ ಉತ್ತರಾಧಿಕಾರಿಯಾಗಿ ರಮಣ್ ರಾಯ್ ನೇಮಕಗೊಂಡಿದ್ದಾರೆ.
  • ರಾಯ್ ಅವರು ಭಾರತ ಬಿಪಿಓ (ಬ್ಯುಸಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್) ವ್ಯವಹಾರದ ಅಭಿವೃದ್ದಿಗೆ ಶ್ರಮಿಸಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.
  • ರಾಯ್ ಅವರು ನಾಸ್ಕಾಂನ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ 2016-17ನೇ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Leave a Comment

This site uses Akismet to reduce spam. Learn how your comment data is processed.