ಫ್ರಾನ್ಸ್ ಗಣಿತಶಾಸ್ತ್ರಜ್ಞ ವ್ಯಾಸ್ ಮೆಯೇರ್ ಗೆ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ

ಫ್ರಾನ್ಸ್ ನ ಪ್ರಖ್ಯಾತ ಗಣಿತಶಾಸ್ತ್ರಜ್ಞ ವ್ಯಾಸ್ ಮೆಯೇರ್ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ ಲಭಿಸಿದೆ. ಅಬೆಲ್ ಅವರ ಸಣ್ಣ ತರಂಗ ಹಾಗೂ ಅಲೆಗಳ ಗಣಿತಶಾಸ್ತ್ರೀಯ ಸಿದ್ದಾಂತಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಬೆಲ್ ಅವರ ಈ ಸಿದ್ದಾಂತ ಚಿತ್ರಗಳನ್ನು ಸಂಕುಚಿತಗೊಳಿಸುವ ಹಾಗೂ ಗುರತ್ವಾಕರ್ಷಣ ಅಲೆಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿದೆ.

ಅಬೆಲ್ ಪ್ರಶಸ್ತಿ:

  • ನಾರ್ವೆನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಲೆಟರ್ಸ್ ಈ ಪ್ರಶಸ್ತಿಯನ್ನು ಪ್ರತಿ ವರ್ಷ ಖ್ಯಾತ ಗಣಿತಶಾಸ್ತ್ರಜ್ಞರಿಗೆ ನೀಡುತ್ತಿದೆ. ನಾರ್ವೆಯ ಖ್ಯಾತ ಗಣಿತಶಾಸ್ತ್ರಜ್ಞ ನೀಲ್ಸ್ ಹೆನ್ರಿಕ್ ಅಬೆಲ್ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
  • ನಾರ್ವೆ ಸರ್ಕಾರ ಈ ಪ್ರಶಸ್ತಿಯನ್ನು 2001 ರಲ್ಲಿ ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಗಣಿತಶಾಸ್ತ್ರದ ನೊಬೆಲ್ ಎಂದೇ ಪರಿಗಣಿಸಲಾಗಿದೆ.
  • ಪ್ರಶಸ್ತಿಯು 6 ಮಿಲಿಯನ್ ನಾರ್ವೆಯನ್ ಕ್ರೊನರ್ (600,000 ಯುರೋ) ನಗದು ಒಳಗೊಂಡಿದೆ.
  • ಭಾರತೀಯ ಅಮೆರಿಕ ಮೂಲದ ಗಣಿತಶಾಸ್ತ್ರಜ್ಞ ಆರ್ ಶ್ರೀನಿವಾಸನ್ ವರಧನ್ ಅವರಿಗೆ 2007 ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ವರಧನ್ ಅವರ ಸಂಭವನೀಯ ಸಿದ್ದಾಂತಕ್ಕೆ ಪ್ರಶಸ್ತಿ ಲಭಿಸಿದೆ.

ಮಾರ್ಚ್ 24: ವಿಶ್ವ ಕ್ಷಯರೋಗ ದಿನ

ವಿಶ್ವದಾದ್ಯಂತ ಮಾರ್ಚ್ 24 ರಂದು “ವಿಶ್ವ ಕ್ಷಯ ರೋಗ ದಿನ” ಎಂದು ಆಚರಿಸಲಾಗುತ್ತಿದೆ. ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ ಕ್ಷಯ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 1982 ರಿಂದ ಆಚರಿಸಲಾಗುತ್ತಿದೆ. 1882ನೇ ಇಸವಿಯಲ್ಲಿ ಮಾರ್ಚ್ 24ರಂದು ಡಾ| ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟಿರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಅದರ ಸ್ಮರಣಾರ್ಥ ಪ್ರತಿ ವರ್ಷ 24 ರಂದು ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ.

ಪ್ರಮುಖಾಂಶಗಳು:

  • ಈ ವರ್ಷದ ಧ್ಯೇಯವಾಕ್ಯ: “United to End TB.

ಕ್ಷಯರೋಗ:

  • ಕ್ಷಯ ಮಾನವನಿಗೆ ಮೈಕೊಬ್ಯಾಕ್ಟೀರಿಯಂ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುವ ಮಾರಕ ರೋಗ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.
  • ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 2015 ರಲ್ಲಿ 10.4 ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗಿದ್ದು, 1.8 ಮಿಲಿಯನ್ ಜನರು ಮರಣ ಹೊಂದಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಶೇ 0.1 ರಷ್ಟು ಇಳಿಕೆ

ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಗೆ ಶೇ 0.1ರಷ್ಟು ಇಳಿಕೆ ಮಾಡಿದೆ. ಪಿಪಿಎಫ್, ಕಿಸಾನ್ ವಿಕಾಸ್ ಪತ್ರ ಮತ್ತು ಸುಕನ್ಯ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಗೆ ಅನುಗುಣವಾಗಿ ಶೇ. 0.1ರಷ್ಟು ಬಡ್ಡಿದರವನ್ನು ಕಡಿಮೆ ಮಾಡಲಾಗಿದೆ. ಅಂಚೆ ಉಳಿತಾಯ ಖಾತೆಗೆ ಇದು ಅನ್ವಯಿಸುವುದಿಲ್ಲ.

ಪ್ರಮುಖಾಂಶಗಳು:

  • ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯ ವಾರ್ಷಿಕ ಬಡ್ಡಿದರ 8% ಬದಲಿಗೆ 7.9% ಇರಲಿದೆ.
  • ಐದು ವರ್ಷದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿದರ ಸಹ ಶೇ 7.9% ತಗುಲಲಿದೆ.
  • ಕಿಸಾನ್ ವಿಕಾಸ್ ಪತ್ರ ಪರಿಷ್ಕೃತ ದರ ಶೇ 7.6% ರಷ್ಟಿರಲಿದೆ.
  • ಸುಕನ್ಯ ಸಮೃದ್ದಿ ಯೋಜನೆ ಬಡ್ಡಿದರ ಶೇ 8.5% ಬದಲು ಶೇ 8.4% ರಷ್ಟಿರಲಿದೆ.
  • ಹಿರಿಯ ನಾಗರಿಕರ ಉಳಿತಾಯ ಯೋಜನೆ ಐದು ವರ್ಷದ ಅವಧಿಗೆ ಶೇ 8.4% ಇರಲಿದೆ.

ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರ ಕಡಿತ ಮಾಡಲು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರಿ ಬಾಂಡ್‌ಗಳ ಗಳಿಕೆ ಆಧರಿಸಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ನಿಗದಿ ಮಾಡಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.