ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,9,10,2017

Question 1

1. 2016ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆಮಾಡಲಾಗಿದೆ?

A
ಮಹಾಬಲೇಶ್ವರ ಸೈಲ್
B
ಸರೋಜ ದೇವಿ
C
ಸರ್ಜಿತ್ ಪತ್ತರ್
D
ಪದ್ಮ ಸಚ್ದೇವ್
Question 1 Explanation: 
ಮಹಾಬಲೇಶ್ವರ ಸೈಲ್

2016ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ಕೊಂಕಣಿ ಲೇಖಕ ಮಹಾಬಲೇಶ್ವರ ಸೈಲ್ ಅವರಿಗೆ ಲಭಿಸಿದೆ. ಕಳೆದ ನಾಲ್ಕೂವರೆ ದಶಕಗಳಿಂದ ಸಾಹಿತ್ಯ ರಚನೆ ಮಾಡುತ್ತಿರುವ ಮಹಾಬಲೇಶ್ವರ ಸೈಲ್ ಕೊಂಕಣಿಯಲ್ಲಿ ಇದು ತನಕ ‘ಪೆಲ್ತಾಡ್ಚ್ಯೊ ತಾರು’, ‘ತರಂಗಾನ್’ ‘ಬಾಯನಾತ್ ಫೈಟಿಂಗ್’, ‘ನಿಮನೊ ಅಶ್ವತ್ಥಾಮ’ ಮತ್ತು ‘ದೋನ್ ಮೂಳ್ಯಾಾಂಚೊ ಝಾಡ’ ಎಂಬ ಐದು ಕಥಾ ಸಂಕಲನಗಳನ್ನು ತಂದಿದ್ದಾರೆ. 1993 ರಲ್ಲಿ ಅವರ ‘ತರಂಗಾನ್’ ಕಥಾ ಸಂಕಲನಕ್ಕೆ ಕೇಂದ್ರಸಾಹಿತ್ಯ ಪ್ರಶಸ್ತಿ ದೊರಕಿತ್ತು. ಅವರು ಏಳು ಕೊಂಕಣಿ ಕಾದಂಬರಿಗಳನ್ನು ಬರೆದಿದ್ದು ಅವು ಕ್ರಮವಾಗಿ ‘ಕಾಳಿಗಂಗಾ’, ‘ಅದೃಷ್ಟ’, ‘ಅರಣ್ಯಕಾಂಡ’, ‘ಯುಗಸಂಹಾರ’, ‘ಖೋಲ್ ಖೋಲ್ ಮೂಳಾ’, ‘ಹಾಂವ್ಠಾಣ್’, ‘ವಿಖಾರ್ ವ್ಹಿಳ್ಕೊ’ ಮತ್ತು ‘ಮಾಟಿ ಆಣಿ ಮಾಳಾಬ್’. ಅವರ ‘ಕಾಳಿಗಂಗಾ’ ಒಬ್ಬ ಹಳ್ಳಿಯ ಹೆಣ್ಣು ಮಗಳ ದಾರುಣ ಕತೆ.

Question 2

2. ಈ ಕೆಳಗಿನ ಯಾರು “ಯುರೋಪ್ ಮಂಡಳಿ (European Council)”ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಡೋನಾಲ್ಡ್ ಟಸ್ಕ್
B
ಮೈಕಲ್ ಜೇಮ್ಸ್
C
ಕ್ರಿಸ್ಟೋಫರ್ ಕೆರ್ನ್
D
ಡೇವಿಡ್ ಮಾರ್ಷಲ್
Question 2 Explanation: 
ಡೋನಾಲ್ಡ್ ಟಸ್ಕ್

ಪೋಲ್ಯಾಂಡ್ ಮೂಲದ ಡೋನಾಲ್ಡ್ ಟಸ್ಕ್ ಅವರು ಯುರೋಪಿಯನ್ ಕೌನ್ಸಿಲ್ ನ ಅಧ್ಯಕ್ಷರಾಗಿ ಮರು ನೇಮಕಗೊಂಡಿದ್ದಾರೆ. ನವೆಂಬರ್, 2019 ರವರೆಗೆ ಇವರು ಅಧಿಕಾರದಲ್ಲಿ ಇರಲಿದ್ದಾರೆ. ಯುರೋಪ್ ಮಂಡಳಿ ಯುರೋಪ್ ಒಕ್ಕೂಟದ ಸಂಸ್ಥೆಯಾಗಿದ್ದು, ಒಕ್ಕೂಟಕ್ಕೆ ಸಂಬಂಧಿಸಿದ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

Question 3

ಮಾತೃತ್ವ ಅನುಕೂಲ ಮಸೂದೆ-2016 ರಂತೆ ಸಂಭಾವನೆ ಸಹಿತ 12 ವಾರಗಳಷ್ಟೇ ಇದ್ದ ಮಾತೃತ್ವ ರಜೆಯನ್ನು ಎಷ್ಟು ವಾರಗಳಿಗೆ ವಿಸ್ತರಿಸಲಾಗಿದೆ?

A
24
B
26
C
18
D
22
Question 3 Explanation: 
26

ಮಾತೃತ್ವ ಅನುಕೂಲ ಮಸೂದೆ-2016 ಸಂಸತ್ತಿನಲ್ಲಿ ಅಂಗೀಕರಗೊಂಡಿದೆ. ಈ ಮಸೂದೆಯಲ್ಲಿ ಇದುವರೆಗೂ ಸಂಭಾವನೆ ಸಹಿತ 12 ವಾರಗಳಷ್ಟೇ ಇದ್ದ ಮಾತೃತ್ವ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಗಿದೆ. ಆ ಮೂಲಕ ಕೆನಡಾ ಮತ್ತು ನಾರ್ವೆ ನಂತರ ಅತಿ ಹೆಚ್ಚು ಮಾತೃತ್ವ ರಜೆಯನ್ನು ನೀಡುತ್ತಿರುವ ರಾಷ್ಟ್ರ ಭಾರತ.

Question 4

4. ಯೂನಿಸೆಫ್ ಹಾಗೂ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವ ಕಪ್ನ ರಾಯಭಾರಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

A
ರಾಹುಲ್ ದ್ರಾವಿಡ್
B
ಸಚಿನ್ ತೆಂಡುಲ್ಕರ್
C
ವಿವಿಎಸ್ ಲಕ್ಷಣ್
D
ಸೌರವ್ ಗಂಗೂಲಿ
Question 4 Explanation: 
ಸಚಿನ್ ತೆಂಡುಲ್ಕರ್

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಯೂನಿಸೆಫ್ ಹಾಗೂ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವ ಕಪ್ನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮಹಿಳಾ ಕ್ರಿಕೆಟ್ ವಿಶ್ವಕಪ್ ಜೂನ್ 2017 ರಿಂದ ಬ್ರಿಟನ್ ನಲ್ಲಿ ನಡೆಯಲಿದೆ.

Question 5

5. ಕೇಂದ್ರ ಜಲ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ನರೇಂದ್ರ ಕುಮಾರ್
B
ಅಶಿಶ್ ಚಟರ್ಜಿ
C
ಮುರಳಿ ಮುಖರ್ಜಿ
D
ಸಂತೋಷ್ ನಾಯಕ್
Question 5 Explanation: 
ನರೇಂದ್ರ ಕುಮಾರ್

ಸೆಂಟ್ರಲ್ ವಾಟರ್ ಎಂಜನಿಯರಿಂಗ್ ಸರ್ವೀಸ್ ನ 1979ನೇ ಬ್ಯಾಚ್ ನ ಅಧಿಕಾರಿ ನರೇಂದ್ರ ಕುಮಾರ್ ಅವರು ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಜಲ ಆಯೋಗವನ್ನು 1945ರಲ್ಲಿ ಸ್ಥಾಪಿಸಲಾಗಿದೆ.

Question 6

6. ಇತ್ತೀಚೆಗೆ ನಿಧನರಾದ “ಅರವಿಂದ್ ಪದ್ಮನಾಭನ್” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಕಲೆ
B
ಪತ್ರಿಕೋದ್ಯಮ
C
ವಿಜ್ಞಾನ
D
ಸಿನಿಮಾ
Question 6 Explanation: 
ಪತ್ರಿಕೋದ್ಯಮ

ಹಿರಿಯ ಪತ್ರಕರ್ತ ಹಾಗೂ ಇಂಡೋ-ಏಷಿಯನ್ ನ್ಯೂಸ್ ಸರ್ವೀಸ್ (IANS)ನ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಅರವಿಂದ್ ಪದ್ಮನಾಭನ್ ನಿಧನರಾದರು. ಅರವಿಂದ್ ಅವರು ಟೈಮ್ಸ್ ಆಫ್ ಇಂಡಿಯಾ, ಟಿವಿ18 ಹಾಗೂ ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸೇವೆಸಲ್ಲಿಸಿದ್ದರು.

Question 7

7. ಯಾವ ರಾಜ್ಯ ಉದ್ಯೋಗ ಆಕಾಂಕ್ಷಿಗಳಿಗೆ “ಮೇರಾ ಹೂನರ್ (Mera Hunar)” ಮೊಬೈಲ್ ಅಪ್ಲಿಕೇಷನ್ ಜಾರಿಗೆ ತಂದಿದೆ?

A
ಹಿಮಾಚಲ ಪ್ರದೇಶ
B
ಮಧ್ಯ ಪ್ರದೇಶ
C
ಒಡಿಶಾ
D
ರಾಜಸ್ತಾನ
Question 7 Explanation: 
ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ “ಮೇರಾ ಹೂನರ್” ಮೊಬೈಲ್ ಅಪ್ಲಿಕೇಷನ್ ಜಾರಿಗೆ ತಂದಿದೆ. ದೇಶದಲ್ಲೆ ಇದೊಂದು ವಿನೂತನ ವ್ಯವಸ್ಥೆಯಾಗಿದೆ. ಕೌಶಲ್ಯ, ಅರೆ ಕೌಶಲ್ಯ ಉದ್ಯೋಗ ಆಕಾಂಕ್ಷಿಗಳು ಈ ಆಪ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Question 8

8. “ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾ (National Archive of India)”ದ ಕೇಂದ್ರ ಕಚೇರಿ ಎಲ್ಲಿದೆ?

A
ನವ ದೆಹಲಿ
B
ಪುಣೆ
C
ಮುಂಬೈ
D
ಬೆಂಗಳೂರು
Question 8 Explanation: 
ನವ ದೆಹಲಿ

ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾ ನವದೆಹಲಿಯಲ್ಲಿದೆ. ಮಾರ್ಚ್ 11, 2017 ರಂದು ಇದರ 127ನೇ ಸಂಸ್ಥಾಪನ ದಿನಾಚರಣೆ.

Question 9

9. ಸೈನ್ಸ್ ಅಂಡ್ ಎಂಜನಿಯರಿಂಗ್ ರಿಸರ್ಚ್ ಬೋರ್ಡ್ ನ “SERB Distinguished Award” ಪ್ರಶಸ್ತಿ ಯಾರಿಗೆ ಲಭಿಸಿದೆ?

A
ಸುಧೀರ್ ದರ್ಪಣ್
B
ರಮಣ್ ಚೌಧರಿ
C
ಲಾಲ್ಜಿ ಸಿಂಗ್
D
ಹಿಮಾಂಶು ಸಿಂಗ್
Question 9 Explanation: 
ಲಾಲ್ಜಿ ಸಿಂಗ್

ಸೆಂಟರ್ ಫಾರ್ ಸೆಲ್ಯೂಲಾರ್ ಅಂಡ್ ಮಾಲಿಕ್ಯೂಲರ್ ಬಯಾಲಾಜಿ ಮಾಜಿ ನಿರ್ದೇಶಕ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಲಾಲ್ಜಿ ಸಿಂಗ್ ಅವರಿಗೆ ಸೈನ್ಸ್ ಅಂಡ್ ಎಂಜನಿಯರಿಂಗ್ ರಿಸರ್ಚ್ ಬೋರ್ಡ್ ನ “SERB Distinguished Award” ಪ್ರಶಸ್ತಿ ಲಭಿಸಿದೆ. ಲಾಲ್ಜಿ ಸಿಂಗ್ ಅವರು ಪ್ರಸ್ತುತ ಹೈದ್ರಾಬಾದಿನಲ್ಲಿ “ಜಿನೋಮ್ ಫೌಂಡೇಷನ್” ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Question 10

10. “From Inside the Steel Frame: The Memoirs of an Administrator” ಪುಸ್ತಕದ ಲೇಖಕರು ________?

A
ಅಶೋಕ್ ಪಾಂಡೆ
B
ಗಿರೀಶ್ ಚಂದ್ರ
C
ಚಂದ್ರ ಮೋಹನ್
D
ಅರುಣ್ ಸಾಗರ್
Question 10 Explanation: 
ಅಶೋಕ್ ಪಾಂಡೆ

ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಪಾಂಡೆ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಬಿಹಾರದ ಸಣ್ಣ ಹಳ್ಳಿಯಿಂದ ದೆಹಲಿಯಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆಯುವ ವರೆಗೆ ತಮ್ಮ ಪ್ರಯಾಣವನ್ನು ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್9102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,9,10,2017”

  1. usg

    pls give some examoles of essay about exise inpectorexams

Leave a Comment

This site uses Akismet to reduce spam. Learn how your comment data is processed.