ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,5,6,2017

Question 1

1. ‘ಜಲ ಕ್ರಾಂತಿ ಅಭಿಯಾನ’ದ ರಾಷ್ಟ್ರೀಯ ಸಮ್ಮೇಳನ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ದೆಹಲಿ
B
ವಾರಣಾಸಿ
C
ಭೋಪಾಲ್
D
ಅಲಹಾಬಾದ್
Question 1 Explanation: 
ದೆಹಲಿ

‘ಜಲ ಕ್ರಾಂತಿ ಅಭಿಯಾನ’ದ ರಾಷ್ಟ್ರೀಯ ಸಮ್ಮೇಳನ ದೆಹಲಿಯಲ್ಲಿ ಆಯೋಜನೆಗೊಂಡಿತ್ತು. ಈ ಸಮ್ಮೇಳನದಲ್ಲಿ ರೈತರು, ಪಂಚಾಯಿತಿ ಸದಸ್ಯರು, ಸರ್ಕಾರೇತರ ಸಂಸ್ಥೆಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಲಾನಯನ ಬಳಕೆ ಮತ್ತು ನಿರ್ವಹಣೆಯನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸುವ ಉದ್ದೇಶದಿಂದ ಈ ಸಮ್ಮೇಳನದಲ್ಲಿ ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು.

Question 2

2. ಭಾರತದ ನಗರ ವ್ಯವಸ್ಥೆಯ ವಾರ್ಷಿಕ ಸಮೀಕ್ಷೆ-2016 ರ ನಗರ ಸರ್ಕಾರ ಶ್ರೇಣಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನಗರ ಯಾವುದು?

A
ಬೆಂಗಳೂರು
B
ಕೋಲ್ಕತ್ತ
C
ಪುಣೆ
D
ತಿರುವನಾಂತಪುರಂ
Question 2 Explanation: 
ತಿರುವನಾಂತಪುರಂ

ಜನಾಗ್ರಹ ಸಂಸ್ಥೆ ಕೈಗೊಂಡ ಭಾರತದ ನಗರ ವ್ಯವಸ್ಥೆಯ ವಾರ್ಷಿಕ ಸಮೀಕ್ಷೆ-2016 ರ ನಾಲ್ಕನೇ ಆವೃತ್ತಿಯ ನಗರ ಸರ್ಕಾರ ಶ್ರೇಣಿಯಲ್ಲಿ ಕೇರಳದ ತಿರುವನಾಂತಪುರಂ ಪ್ರಥಮ ಸ್ಥಾನವನ್ನು ಪಡೆದಿದೆ. ದೇಶದ 18 ರಾಜ್ಯಗಳ 21 ನಗರಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯಂತೆ ಪುಣೆ 2ನೇ ಸ್ಥಾನದಲ್ಲಿ, ಕೋಲ್ಕತ್ತ, ಮುಂಬೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳನ್ನು ಪಡೆದಿದೆ. ಸಾರ್ವಜನಿಕ ಸೇವೆ ನೀಡುವಲ್ಲಿ ಎದುರಾಗಬಹುದಾದಂತ ಎಡರು-ತೊಡರುಗಳನ್ನು ಈ ಸಮೀಕ್ಷೆ ಉಲ್ಲೇಖಿಸಿದೆ ಜೊತೆಗೆ ಸ್ಥಳೀಯ ಸರ್ಕಾರಗಳು ಕೈಗೊಳ್ಳಬಹುದಾದ ಬದಲಾವಣೆಗಳನ್ನು ಸಹ ಈ ಸಮೀಕ್ಷೆಯಲ್ಲಿ ನೀಡಿದೆ.

Question 3

3. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಅಧಿಕೃತ ಪ್ರಯೋಜಕತ್ವವನ್ನು ಯಾವ ಕಂಪನಿ ವಹಿಸಿಕೊಂಡಿದೆ?

A
ಒಪ್ಪೋ
B
ವಿವೋ
C
ರಿಲಯನ್ಸ್
D
ಮೈಕ್ರೋಮ್ಯಾಕ್ಸ್
Question 3 Explanation: 
ಒಪ್ಪೋ

ಮೊಬೈಲ್ ಉತ್ಪಾದಕ ಕಂಪನಿ ಒಪ್ಪೋ ಮೊಬೈಲ್ ಇಂಡಿಯಾ ಪ್ರೈ.ಲಿ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಅಧಿಕೃತ ಪ್ರಯೋಜಕತ್ವವನ್ನು ಮುಂದಿನ 5 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ. ಇದರನ್ವಯ ಪ್ರಯೋಜಕರ ಲಾಂಛನವನ್ನು ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಕಿಟ್ ಗಳಲ್ಲಿ ಅಳವಡಿಸಲಾಗುವುದು.)

Question 4

4. “ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಇ-ಗವರ್ನೆನ್ಸ್” 2017 ನ್ನು ಈ ಕೆಳಕಂಡ ಯಾವ ನಗರದಲ್ಲಿ ಅಯೋಜಿಸಲಾಗಿತ್ತು?

A
ಬೆಂಗಳೂರು
B
ದೆಹಲಿ
C
ಮುಂಬೈ
D
ಚೆನ್ನೈ
Question 4 Explanation: 
ದೆಹಲಿ
Question 5

5. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I. ಭಾರತ ಮತ್ತು ಒಮನ್ ದೇಶಗಳ ಜಂಟಿ ಮಿಲಿಟರಿ ಸಮರಾಭ್ಯಾಸ ‘ ಎ1 ನಗಾಹ್-II ‘ ಒಮನ್ ನಲ್ಲಿ ನಡೆಯಿತು

II. ಭಾರತ ಮತ್ತು ನೇಪಾಳ ದೇಶಗಳ ಜಂಟಿ ಮಿಲಿಟರಿ ಸಮರಾಭ್ಯಾಸ ‘ಸೂರ್ಯ ಕಿರಣ್-XI’ ಉತ್ತರಾಖಂಡದಲ್ಲಿ ನಡೆಯಿತು

A
ಹೇಳಿಕೆ I ಸರಿಯಾಗಿದೆ
B
ಹೇಳಿಕೆ II ಸರಿಯಾಗಿದೆ
C
ಹೇಳಿಕೆ I ಮತ್ತು II ಸರಿಯಾಗಿದೆ
D
ಹೇಳಿಕೆ I ಮತ್ತು II ತಪ್ಪಾಗಿದೆ
Question 5 Explanation: 
ಹೇಳಿಕೆ I ಮತ್ತು II ಸರಿಯಾಗಿದೆ

ಭಾರತ ಮತ್ತು ಒಮನ್ ದೇಶಗಳ ಜಂಟಿ ಮಿಲಿಟರಿ ಸಮರಾಭ್ಯಾಸ ‘ ಎ1 ನಗಾಹ್-II ‘ ಒಮನ್ ನಲ್ಲಿ ನಡೆಯಿತು. ಭಾರತ ಮತ್ತು ನೇಪಾಳ ದೇಶಗಳ ಜಂಟಿ ಮಿಲಿಟರಿ ಸಮರಾಭ್ಯಾಸ ‘ಸೂರ್ಯ ಕಿರಣ್-XI’ ಉತ್ತರಾಖಂಡದಲ್ಲಿ ನಡೆಯಿತು

Question 6

6. ಟೈಮ್ಸ್ ಹೈಯರ್ ಎಜುಕೇಷನ್ 2017 ರ “ವಿಶ್ವದ ಅತ್ಯುತ್ತಮ ಚಿಕ್ಕ ವಿಶ್ವವಿದ್ಯಾಲಯ” ಪಟ್ಟಿಯಲ್ಲಿ ಹತ್ತರೊಳಗಿನ ಸ್ಥಾನ ಪಡೆದ ವಿಶ್ವವಿದ್ಯಾಲಯ ಯಾವುದು?

A
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
B
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೌಹಾಟಿ
C
ಸಾವಿತ್ರಿ ಬಾಯಿ ಫೂಲೆ ಪುಣೆ ವಿಶ್ವವಿದ್ಯಾಲಯ
D
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ
Question 6 Explanation: 
ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯವು ಟೈಮ್ಸ್ ಹೈಯರ್ ಎಜುಕೇಷನ್ 2017 ರ “ವಿಶ್ವದ ಅತ್ಯುತ್ತಮ ಚಿಕ್ಕ ವಿಶ್ವವಿದ್ಯಾಲಯ” ಟಾಪ್ 10 ರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ. ಕ್ಯಾಲಿಫೋರ್ನಿಯ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. 5000 ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ವಿಶ್ವವಿದ್ಯಾಲಯಗಳನ್ನು ಈ ಸಮೀಕ್ಷೆಯಲ್ಲಿ ಗಣನೆಗೆ ತೆಗೆದುಕೊಂಡಿತ್ತು.

Question 7

7. ಹಿರಿಯ ನಾಗರಿಕರಿಗಾಗಿ “ತೀರ್ಥ ದರ್ಶನ” ಎಂಬ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಉತ್ತರಪ್ರದೇಶ
B
ಉತ್ತರಾಖಂಡ
C
ರಾಜಸ್ಥಾನ
D
ಹರಿಯಾಣ
Question 7 Explanation: 
ಹರಿಯಾಣ

ತನ್ನ ರಾಜ್ಯದ ಹಿರಿಯ ನಾಗರಿಕರಿಗಾಗಿ “ತೀರ್ಥ ದರ್ಶನ” ಎಂಬ ಯೋಜನೆಯನ್ನು ಹರಿಯಾಣ ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ತೀರ್ಥಯಾತ್ರೆ ಕೈಗೊಳ್ಳಲು ರಾಜ್ಯ ಸರ್ಕಾರ ವೆಚ್ಚ ಭರಿಸಲಿದೆ. ಬಿ ಪಿ ಎಲ್ ಕುಟುಂಬದವರು ಈ ಯೋಜನೆಯಡಿ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. ದೇಶದ ಸುಮಾರು 400 ತೀರ್ಥ ಕ್ಷೇತ್ರಗಳ ದರ್ಶನವನ್ನು ಮಾಡಲು ಸರ್ಕಾರ ಲಾಟರಿ ಮೂಲಕ ಆಯ್ಕೆಗೊಳಿಸಲಾಗುತ್ತದೆ.

Question 8

8. ಗ್ರಾಹಕ ಸೇವೆಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಬ್ಯಾಕಿಂಗ್ (Artificial Intelligence) ವ್ಯವಸ್ಥೆ “ಎಲೆಕ್ಟ್ರಾನಿಕ್ ವರ್ಚುಯಲ್ ಅಸಿಸ್ಟಂಟ್” (EVA) ನ್ನು ಯಾವ ಬ್ಯಾಂಕ್ ಪ್ರಾರಂಭಿಸಿದೆ?

A
ಭಾರತೀಯ ಸ್ಟೇಟ್ ಬ್ಯಾಂಕ್
B
ಹೆಚ್.ಡಿ.ಎಫ್.ಸಿ. ಬ್ಯಾಂಕ್
C
ಸಿಟಿ ಬ್ಯಾಂಕ್
D
ಕೆನರಾ ಬ್ಯಾಂಕ್
Question 8 Explanation: 
ಹೆಚ್.ಡಿ.ಎಫ್.ಸಿ ಬ್ಯಾಂಕ್

ಗ್ರಾಹಕ ಸೇವೆಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಬ್ಯಾಕಿಂಗ್ (Artificial Intelligence) ವ್ಯವಸ್ಥೆ “ಎಲೆಕ್ಟ್ರಾನಿಕ್ ವರ್ಚುಯಲ್ ಅಸಿಸ್ಟಂಟ್” (EVA) ನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಪ್ರಾರಂಭಿಸಿದೆ. EVA ಏಕಕಾಲದಲ್ಲಿ ಮಿಲಿಯನ್ ಗ್ರಾಹಕ ಪ್ರಶ್ನೆಗಳಿಗೆ 0.4 ಸೆಕೆಂಡ್ ಗಳಲ್ಲಿ ಉತ್ತರಿಸಲಿದೆ. EVA ಸಾವಿರಾರು ಮೂಲಗಳಿಂದ ಬುದ್ಧಿಮತ್ತೆ ಪಡೆದಿದ್ದು ಗ್ರಾಹಕರಿಗೆ ಸರಳ ಭಾಷೆಯಲ್ಲಿ ಉತ್ತರಿಸಲಿದೆ.

Question 9

9. “Numbers Do Lie: 61 Hidden Cricket Stories” ಪುಸ್ತಕದ ಲೇಖಕರು _______?

A
ಗೌತಮ್ ಗಂಭೀರ್
B
ಆಕಾಶ್ ಚೋಪ್ರ
C
ಸುನೀಲ್ ಗವಾಸ್ಕರ್
D
ವಿರೇಂದ್ರ ಸೆಹ್ವಾಗ್
Question 9 Explanation: 
ಆಕಾಶ್ ಚೋಪ್ರ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರ ಅವರು “Numbers Do Lie: 61 Hidden Cricket Stories” ಪುಸ್ತಕವನ್ನು ಬರೆದಿದ್ದಾರೆ.

Question 10

10. 2017 ಮೆಕ್ಸಿಕೋ ಓಪನ್ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

A
ರೋಜರ್ ಫೆಡರರ್
B
ರಫೆಲ್ ನಡಾಲ್
C
ಸ್ಯಾಮ್ ಕ್ವೆರ್ರಿ
D
ನೊವಾಕ್ ಜೊಕೊವಿಕ್
Question 10 Explanation: 
ಸ್ಯಾಮ್ ಕ್ವೆರ್ರಿ

ಅಮೆರಿಕದ ವೃತ್ತಿಪರ ಟೆನ್ನಿಸ್ ಆಟಗಾರ್ ಸ್ಯಾಮ್ ಕ್ವೆರ್ರಿ ಅವರು ರಫೆಲ್ ನಡಾಲ್ ಅವರನ್ನು 6-3, 7-6 ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್562017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.