ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,2,2017

Question 1

1. ಈ ಕೆಳಗಿನ ಯಾರಿಗೆ 2017 ಹಾರ್ವರ್ಡ್ ವರ್ಷದ ಮಾನಮೀಯ ಪ್ರಶಸ್ತಿ ಲಭಿಸಿದೆ?

A
ಬರಾಕ್ ಒಬಾಮ
B
ಎಲ್ ಕೆ ಅಡ್ವಾಣಿ
C
ರಾಬಿನ್ ರಿಹಾನ್ನಾ ಫೆಂಟಿ
D
ಪೋಫ್ ಫ್ರಾನ್ಸಿಸ್
Question 1 Explanation: 
ರಾಬಿನ್ ರಿಹಾನ್ನಾ ಫೆಂಟಿ

ಬರ್ಬೋಡದ ಪ್ರಸಿದ್ದ ಗಾಯಕ ಹಾಗೂ ಗೀತ ರಚನೆಗಾರಿ ರಾಬಿನ್ ರಿಹಾನ್ನಾ ಫೆಂಟಿ ಅವರಿಗೆ 2017 ಹಾರ್ವರ್ಡ್ ವರ್ಷದ ಮಾನಮೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಫೆಂಟಿ ಅವರು ತಮ್ಮ ಸ್ವದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಉತ್ತಮಪಡಿಸಲು ನೀಡಿರುವ ಕೊಡುಗೆ ಹಾಗೂ ಕ್ಯಾರೆಬಿಯನ್ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನವನ್ನು ಆರಂಭಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Question 2

2. ವಿಶ್ವ ವ್ಯಾಪಾರ ಸಂಸ್ಥೆ (WTO)ದ ಭಾರತದ ಖಾಯಂ ಪ್ರತಿನಿಧಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಜೆ ಎಸ್ ದೀಪಕ್
B
ಅರುಣ್ ಜೈನ್
C
ಕುಶಾಲ್ ಭಾರಧ್ವಜ್
D
ಸುಧೀಂದ್ರ ಚೆಂಗಪ್ಪ
Question 2 Explanation: 
ಜೆ ಎಸ್ ದೀಪಕ್

ದೂರಸಂಪರ್ಕ ಕಾರ್ಯದರ್ಶಿ ಜೆ ಎಸ್ ದೀಪಕ್ ಅವರು ವಿಶ್ವ ವ್ಯಾಪಾರ ಸಂಸ್ಥೆ (WTO)ದ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಜೂನ್ 1, 2017 ರಿಂದ ಅಧಿಕೃತವಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ.

Question 3

3. 2017 ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಚೆಸ್ ಆಟಗಾರ್ತಿ ಯಾರು?

A
ಪದ್ಮನಿ ರೌವತ್
B
ಎಸ್ ವಿಜಯಲಕ್ಷೀ
C
ಹರಿಕಾ ದ್ರೋಣವಳ್ಳಿ
D
ಕೊನೆರು ಹಂಪಿ
Question 3 Explanation: 
ಹರಿಕಾ ದ್ರೋಣವಳ್ಳಿ

ಭಾರತದ ಚೆಸ್ ಆಟಗಾರ್ತಿ ಹರಿಕಾ ದ್ರೋಣವಳ್ಳಿ ಅವರು 2017 ಮಹಿಳಾ ವಿಶ್ವ ಚೆಸ್ ಚಾಂಪಿಯನ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು. ದ್ರೋಣವಳ್ಳಿ ಅವರಿಗೆ ಇದು ವಿಶ್ವ ಚೆಸ್ ಚಾಂಪಿಯನ್ ನಲ್ಲಿ ಮೂರನೇ ಕಂಚಿನ ಪದಕವಾಗಿದೆ.

Question 4

4. ಈ ಕೆಳಗಿನ ಯಾರು ರಿಪಬ್ಲಿಕ್ ಆಫ್ ಸೂಡಾನ್ ನ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?

A
ಮಹಮ್ಮದ್ ಯೂನಿಸ್ ಖಾನ್
B
ಸೈಯದ್ ಶೇಕ್ ಅಬ್ದುಲ್ಲಾ
C
ಬಕ್ರಿ ಹಸ್ಸನ್ ಸಲೆಹ್
D
ಮಹಮ್ಮದ್ ಅಹ್ಮದ್
Question 4 Explanation: 
ಬಕ್ರಿ ಹಸ್ಸನ್ ಸಲೆಹ್

ಸೂಡಾನ್ ನ ರಾಷ್ಟ್ರಧ್ಯಕ್ಷರಾದ ಒಮರ್ ಅಲ್ ಬಷೀರ್ ಅವರು ಬಕ್ರಿ ಹಸ್ಸನ್ ಸಲೆಹ್ ಅವರನ್ನು ಸೂಡಾನ್ ನ ನೂತನ ಪ್ರಧಾನಿಯಾಗಿ ನೇಮಕಮಾಡಿದ್ದಾರೆ. 1989 ರಿಂದ ಪ್ರಧಾನಿ ಹುದ್ದೆಯನ್ನು ರದ್ದುಗೊಳಿಸಲಾಗಿತ್ತು. ಪ್ರಧಾನಿ ಹುದ್ದೆಯನ್ನು ಮರು ಸೃಷ್ಟಿಸಲಾಗಿದ್ದು, ಸೀಮಿತ ಅಧಿಕಾರವನ್ನು ಮಾತ್ರ ನೀಡಲಾಗಿದ್ದು, ರಾಷ್ಟ್ರಪತಿ ಅವರು ಹೆಚ್ಚಿನ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

Question 5

5. “2017 ಶೂನ್ಯ ತಾರತಮ್ಯ ದಿನ (2017 Zero Discrimination Day (ZDD)”ದ ಧ್ಯೇಯವಾಕ್ಯ ___________?

A
Make Some Noise for Zero Discrimination
B
No Discrimination
C
Stand Out to Fight for Discrimination
D
Sure No Discrimination
Question 5 Explanation: 
Make Some Noise for Zero Discrimination

“2017 ಶೂನ್ಯ ತಾರತಮ್ಯ ದಿನ (2017 Zero Discrimination Day (ZDD)”ವನ್ನು ಪ್ರತಿ ವರ್ಷ ಮಾರ್ಚ್ 1 ರಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ Make Some Noise for Zero Discrimination.

Question 6

6. ಭಾರತದಲ್ಲಿ ಯಾವ ದಿನದಂದು “ಸಿವಿಲ್ ಅಕೌಂಟ್ಸ್ ದಿನ (Civil Accounts Day)”ವನ್ನು ಆಚರಿಸಲಾಗುತ್ತದೆ?

A
ಮಾರ್ಚ್ 1
B
ಮಾರ್ಚ್ 2
C
ಫೆಬ್ರವರಿ 28
D
ಫೆಬ್ರವರಿ 27
Question 6 Explanation: 
ಮಾರ್ಚ್ 1

ಪ್ರತಿ ವರ್ಷ ಮಾರ್ಚ್ 1 ರಂದು ಸಿವಿಲ್ ಅಕೌಂಟ್ಸ್ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಇಂಡಿಯನ್ ಸಿವಿಲ್ ಅಕೌಂಟ್ಸ್ ಸೇವೆಯನ್ನು ಮಾರ್ಚ್ 1, 1976ರಲ್ಲಿ ಸ್ಥಾಪಿಸಲಾದ ಸ್ಮರಣಾರ್ಥ ಮಾರ್ಚ್ 1 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

Question 7

7. ವಿಸಿಟರ್ಸ್ ಆವಾರ್ಡ್ 2017 ಅತ್ಯುತ್ತಮ ವಿಶ್ವವಿದ್ಯಾಲಯ ಗೌರವಕ್ಕೆ ಪಾತ್ರವಾದ ವಿಶ್ವವಿದ್ಯಾಲಯ ಯಾವುದು?

A
ಬನರಸ ಹಿಂದು ವಿಶ್ವವಿದ್ಯಾಲಯ
B
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ
C
ಬೆಂಗಳೂರು ವಿಶ್ವವಿದ್ಯಾಲಯ
D
ತೇಜ್ಪುರ ವಿಶ್ವವಿದ್ಯಾಲಯ
Question 7 Explanation: 
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ
Question 8

8. ಯಾವ ಸಮಿತಿ ಇತ್ತೀಚೆಗೆ ವಲಸಿಗರ ಹಿತಾಸಕ್ತಿ ಸಂಬಂಧಿಸಿದಂತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು?

A
ಪಾರ್ಥ ಮುಖೋಪದಾಯ್ ಸಮಿತಿ
B
ಚಿರಂಜೀವಿ ಸಿಂಗ್ ಸಮಿತಿ
C
ಮನೀಷ್ ತಿವಾರಿ ಸಮಿತಿ
D
ಸುರೇಶ್ ಮೊಟ್ವಾನಿ ಸಮಿತಿ
Question 8 Explanation: 
ಪಾರ್ಥ ಮುಖೋಪದಾಯ್ ಸಮಿತಿ

ಪಾರ್ಥ ಮುಖೋಪದಾಯ್ ಸಮಿತಿ ನೇತೃತ್ವದ ವಲಸಿಗರಿಗೆ ಸಂಬಂಧಿಸಿದಂತೆ ಕಾರ್ಯಪಡೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಸಮಿತಿಯನ್ನು ಕೇಂದ್ರ ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ 2015ರಲ್ಲಿ ರಚಿಸಿತ್ತು.

Question 9

9. “Mr and Mrs Jinnah: The Marriage that Shook India” ಪುಸ್ತಕದ ಲೇಖಕರು________?

A
ಶೀಲಾ ರೆಡ್ಡಿ
B
ಶೋಭಾ ಡೆ
C
ಶಶಿ ತರೂರು
D
ಮದನ್ ಭಾಟಿಯ
Question 9 Explanation: 
ಶೀಲಾ ರೆಡ್ಡಿ

ಖ್ಯಾತ ಪತ್ರಕರ್ತೆ ಶೀಲಾ ರೆಡ್ಡಿ “Mr and Mrs Jinnah: The Marriage that Shook India” ಪುಸ್ತಕದ ಲೇಖಕರು. ಪುಸ್ತಕದಲ್ಲಿ ಜಿನ್ನಾ ಹಾಗೂ ಅವರ ಮದುವೆಯ ಅವಧಿ ಇತಿಹಾಸದ ಬಗ್ಗೆ ಬಣ್ಣಿಸಲಾಗಿದೆ.

Question 10

10. ಯಾವ ರಾಜ್ಯ 8ನೇ ತರಗತಿ ವರೆಗೆ ಸಂಸ್ಕತಿಯನ್ನು ಕಡ್ಡಾಯಗೊಳಿಸಿದೆ?

A
ಅಸ್ಸಾಂ
B
ತಮಿಳುನಾಡು
C
ಅರುಣಾಚಲ ಪ್ರದೇಶ
D
ಜಾರ್ಖಂಡ್
Question 10 Explanation: 
ಅಸ್ಸಾಂ

ಅಸ್ಸಾಂ ಸರ್ಕಾರ ರಾಜ್ಯದ 8ನೇ ತರಗತಿ ವರೆಗೆ ಸಂಸ್ಕೃತಿ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಅಲ್ಲದೇ ಸ್ವಚ್ಚ ಭಾರತ ಅಭಿಯಾನದಡಿ ಶಾಲೆಗಳಲ್ಲಿ ನೈರ್ಮಲ್ಯತೆಯನ್ನು ಕಾಪಾಡುವ ಸಲುವಾಗಿ ಹೊಸದಾಗಿ ಹುದ್ದೆಗಳನ್ನು ಸೃಜನೆಮಾಡಿದೆ.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್22017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,2,2017”

  1. Gud work..It’s help full to all stds

Leave a Comment

This site uses Akismet to reduce spam. Learn how your comment data is processed.