ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,25,26,2017

Question 1
1. ಯಾವ ರಾಜ್ಯದಲ್ಲಿ ದೇಶದಲ್ಲೆ ಪ್ರಥಮ ಬಾರಿಗೆ ಲೈಂಗಿಕ ಅಪರಾಧಿಗಳ ರಿಜಿಸ್ಟರ್ ಅನ್ನು ಆರಂಭಿಸಲಾಗುವುದು?
A
ಕೇರಳ
B
ಮಧ್ಯ ಪ್ರದೇಶ
C
ಮಹಾರಾಷ್ಟ್ರ
D
ಕರ್ನಾಟಕ
Question 1 Explanation: 
ಕೇರಳ

ದೇಶದಲ್ಲೇ ಮೊದಲ ಬಾರಿಗೆ ಕೇರಳ ಸರಕಾರ ಲೈಂಗಿಕ ಅಪರಾಧಿಗಳ ದಾಖಲಾತಿ ಪುಸ್ತಕವನ್ನು (ರಿಜಿಸ್ಟ್ರಿ)ಯನ್ನು ಆರಂಭಿಸಲಿದೆ. ಲೈಂಗಿಕ ಅಪರಾಧಿಗಳ ಈ ರಿಜಿಸ್ಟ್ರಿಯ ಲೈಂಗಿಕ ಅಪರಾಧ ಎಸಗಿದವರ ಎಲ್ಲ ಗುರುತು, ಮಾಹಿತಿ, ವಿವರಗಳನ್ನು ಒಳಗೊಳ್ಳಲಿದೆ ಮತ್ತು ಇದನ್ನು ಸಾರ್ವಜನಿಕ ಅವಲೋಕನಕ್ಕೆ ಉಪಲಬ್ದಗೊಳಿಸ ಲಾಗುವುದು. ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮ ಎನಿಸಲಿದೆ ಮತ್ತು ಇದು ದೇಶದಲ್ಲೇ ಮೊತ್ತ ಮೊದಲನೇಯದ್ದಾಗಲಿದೆ.

Question 2

2. ವಿಶಾಖಪಟ್ಟಣಂ ನಗರವನ್ನು ದೇಶದ ಮೊದಲ ನಗದು ರಹಿತ ನಗರವನ್ನಾಗಿಸಲು ಆಂಧ್ರ ಪ್ರದೇಶ ಸರ್ಕಾರ ಯಾವ ಪೇಮೆಂಟ್ ನೆಟ್ವರ್ಕ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ?

A
ವೀಸಾ
B
ಮಾಸ್ಟರ್ ಕಾರ್ಡ್
C
ಅಮೆರಿಕನ್ ಎಕ್ಸಪ್ರೆಸ್
D
ಪೇಟಿಎಮ್
Question 2 Explanation: 
ವೀಸಾ

ಆಂಧ್ರ ಪ್ರದೇಶ ಸರ್ಕಾರ ವಿಶಾಖಪಟ್ಟಣಂ ನಗರವನ್ನು ದೇಶದ ಮೊದಲ ನಗದು ರಹಿತ ನಗರವನ್ನಾಗಿಸಲು ವೀಸಾ ಪೇಮೆಂಟ್ ನೆಟ್ವರ್ಕ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಆ ಮೂಲಕ ವಿಶಾಖಪಟ್ಟಣವನ್ನು ದೇಶದ ಫಿನ್ ಟೆಕ್ ನಗರವನ್ನಾಗಿ ಪರಿವರ್ತಿಸಲಾಗುವುದು.

Question 3

3. ಪೂಜಾ ಘಟ್ಕರ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಕ್ರಿಕೆಟ್
B
ವಾಲಿ ಬಾಲ್
C
ಶೂಟಿಂಗ್
D
ಟೆನ್ನಿಸ್
Question 3 Explanation: 
ಶೂಟಿಂಗ್

ಭಾರತದ ಪೂಜಾ ಘಟ್ಕರ್ ಅವರು ಡಾ. ಕರಣಿ ಸಿಂಗ್ ಶೂಟಿಂಗ್ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ, ೨೨೮.೮ ಅಂಕಗಳೊಂದಿಗೆ ಕಂಚನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದ ಬಂಗಾರವನ್ನು ಮೆಂಗ್ಯೊ ಶಿ (೨೫೨.೧) ಪಡೆದುಕೊಂಡರೆ, ದಂಗ್ ಲಿಜೆ (೨೪೮.೯) ಬೆಳ್ಳಿ ಪಡೆದು ಬೀಗಿದ್ದಾರೆ.

Question 4

4. ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ “ಸಾಥಿಯ ರಿಸೋರ್ಸ್ ಕಿಟ್ (Saathiya Resource Kit)” ಉದ್ದೇಶ ___________?

A
ಜಿಎಸ್ ಟಿ ತೆರಿಗೆ ಸಂಬಂಧಿಸಿದ ಮಾಹಿತಿ ನೀಡುವುದು
B
ವಯಸ್ಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವುದು
C
ಶೈಕ್ಷಣಿಕ ಕೋರ್ಸ್ ಗಳಿಗೆ ಸಂಬಂಧಿಸಿದ ಮಾಹಿತಿ ನೀಡುವುದು
D
ವಿಮೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು
Question 4 Explanation: 
ವಯಸ್ಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವುದು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ “ಸಾಥಿಯ ರಿಸೋರ್ಸ್ ಕಿಟ್” ಹಾಗೂ “ಸಾಥಿಯಾ ಸಲಹ್” ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದೆ. ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ ಯೋಜನೆಯಡಿ ಈ ಆ್ಯಪ್ ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಹದಿಹರೆಯದವರ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿಯನ್ನು ಈ ಕಿಟ್ ಒದಗಿಸಲಿದೆ.

Question 5

5. “Kohinoor: The Story of the World’s Most Infamous Diamond” ಪುಸ್ತಕದ ಲೇಖಕರು ________?

A
ರಮೇಶ್ ಮುಖರ್ಜಿ
B
ವೀರಪ್ಪ ಮೊಹ್ಲಿ
C
ವಿಲಿಯಂ ಡಾರ್ಲಿಂಪಲ್
D
ಖುಷಿ ಸಿಂಗ್
Question 5 Explanation: 
ವಿಲಿಯಂ ಡಾರ್ಲಿಂಪಲ್

ಪ್ರಖ್ಯಾತ ಇತಿಹಾಸಗಾರ ಹಾಗೂ ಪ್ರಶಸ್ತಿ ವಿಜೇತ ಲೇಖಕ “ವಿಲಿಯಂ ಡಾರ್ಲಿಂಪಲ್ ಅವರು ಪುಸ್ತಕದ ಲೇಖಕರು. ಪುಸ್ತಕದಲ್ಲಿ ಭಾರತದ ಪ್ರಸಿದ್ದ ವಜ್ರ ಕೊಹಿನೂರ್ ಬಗ್ಗೆ ವಿವರಿಸಲಾಗಿದೆ.

Question 6

6. ಅರ್ನ್ಸ್ಟ್ & ಯಂಗ್ ಸಂಸ್ಥೆ ನೀಡುವ 2016ನೇ ವರ್ಷದ ಭಾರತೀಯ ಉದ್ಯಮಿ ಪ್ರಶಸ್ತಿ ಯಾರಿಗೆ ಲಭಿಸಿದೆ?

A
ಮುಖೇಶ್ ಅಂಬಾನಿ
B
ಪಿಯುಷ್ ಗೋಯೆಲ್
C
ವಿವೇಕ್ ಚಾಂದ್ ಸೆಹ್ಗಲ್
D
ನಾರಾಯಣ ಮೂರ್ತಿ
Question 6 Explanation: 
ವಿವೇಕ್ ಚಾಂದ್ ಸೆಹ್ಗಲ್

ಆಟೊ ಬಿಡಿ ಭಾಗ ತಯಾರಿಕ ಸಂಸ್ಥೆ ಮದರ್ಸನ್ ಸುಮಿ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ವಿವೇಕ್ ಚಾಂದ್ ಸೆಹ್ಗಲ್ ಅವರಿಗೆ ಅರ್ನ್ಸ್ಟ್ & ಯಂಗ್ ಸಂಸ್ಥೆ ನೀಡುವ 2016ನೇ ವರ್ಷದ ಭಾರತೀಯ ಉದ್ಯಮಿ ಪ್ರಶಸ್ತಿ ಲಭಿಸಿದೆ. ಆಧಾರ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ ನಂದನ್ ನೀಲಖೇಣಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ.

Question 7

7. ವಿಶ್ವ ಪ್ರಸಿದ್ದ “ರುಮ್ಟೆಕ್ ಬೌದ್ಧ ಚಕ್ರ ವಿಹಾರ” ಯಾವ ರಾಜ್ಯದಲ್ಲಿದೆ?

A
ಸಿಕ್ಕಿಂ
B
ಜಮ್ಮು ಮತ್ತು ಕಾಶ್ಮೀರ
C
ತ್ರಿಪುರ
D
ಮೀಜೋರಾಂ
Question 7 Explanation: 
ಸಿಕ್ಕಿಂ

“ರುಮ್ಟೆಕ್ ಬೌದ್ಧ ಚಕ್ರ ವಿಹಾರ ಸಿಕ್ಕಿಂನ ರಾಜಧಾನಿ ಗ್ಯಾಂಟಕ್ ಸಮೀಪದಲ್ಲಿದೆ. ಇದು ಭಾರತದ ಬೌದ್ಧ ವಿಹಾರಗಳಲ್ಲೇ ಅತಿ ಶ್ರೀಮಂತವಾದದ್ದು.

Question 8

8. “ಅಂತಾರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟ (International Air Transport Association)”ದ ಕೇಂದ್ರ ಕಚೇರಿ ಎಲ್ಲಿದೆ?

A
ಬ್ರೆಜಿಲ್
B
ಕೆನಡಾ
C
ಸ್ವಿಟ್ಜರ್ಲ್ಯಾಂಡ್
D
ಆಸ್ಟ್ರೇಲಿಯಾ
Question 8 Explanation: 
ಕೆನಡಾ

ಅಂತಾರಾಷ್ಟ್ರೀಯ ವಾಯು ಸಾರಿಗೆ ಒಕ್ಕೂಟದ ಕೇಂದ್ರ ಕಚೇರಿ ಕೆನಡಾದ ಮಾಂಟ್ರಿಯಲ್ ನಲ್ಲಿದೆ.

Question 9

9. ಯಾವ ರಾಜ್ಯ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆದೇಶ ಹೊರಡಿಸಿದೆ?

A
ರಾಜಸ್ತಾನ
B
ಹರಿಯಾಣ
C
ಮಧ್ಯ ಪ್ರದೇಶ
D
ಜಾರ್ಖಂಡ್
Question 9 Explanation: 
ಹರಿಯಾಣ

ಹರಿಯಾಣ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಪ್ರತಿ ಕಿಲೋ ವ್ಯಾಟಿಗೆ ರೂ 20,000 ಪ್ರೋತ್ಸಾಹ ಧನವನ್ನು ಶಾಲೆಗಳಿಗೆ ನೀಡಲಾಗುವುದು. ಜೂನ್ ಮತ್ತು ಜುಲೈ ಅವಧಿಯಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ ಅನ್ನು ಗ್ರಿಡ್ ಗಳಿಗೆ ಸಂಪರ್ಕ ನೀಡಲಾಗುವುದು.

Question 10

10. ಈ ಕೆಳಗಿನ ಯಾರು “ಸ್ವಚ್ಚ ಭಾರತ ಅಭಿಯಾನ”ದ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?

A
ಶಿಲ್ಪಾ ಶೆಟ್ಟಿ
B
ಮಾಧುರಿ ದೀಕ್ಷಿತ್
C
ದೀಪಿಕಾ ಪಡುಕೋಣೆ
D
ಕಂಗಾನ ರಾವತ್
Question 10 Explanation: 
ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಸ್ವಚ್ಚ ಭಾರತ ಅಭಿಯಾನದ ನೂತನ ರಾಯಭಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ರಸ್ತೆಗಳಲ್ಲಿ ಉಗುಳದಂತೆ ಟಿವಿ ಮತ್ತು ರೇಡಿಯೊ ಮೂಲಕ ಪ್ರಚಾರ ನಡೆಸಲಿದ್ದಾರೆ. ಅಮಿತಾಬ್ ಬಚ್ಚನ್, ಶಂಕರ್ ಮಹದೇವನ್, ಸಚಿನ್ ತೆಂಡುಲ್ಕರ್ ಮತ್ತು ಸಲ್ಮಾನ್ ಖಾನ್ ಅಭಿಯಾನದ ರಾಯಭಾರಿಗಳಾಗಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-25262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.