ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,23,2017

Question 1

1. ಸಾರ್ವಜನಿಕ ವಲಯದ ಯಾವ ಬ್ಯಾಂಕ್ ಡಿಜಿಟಲ್ ಪಾವತಿಗೋಸ್ಕರ “Bataua” ಹೆಸರಿನ ಮೊಬೈಲ್ ವ್ಯಾಲೆಟ್ ಬಿಡುಗಡೆಗೊಳಿಸಿದೆ?

A
ಪಂಜಾಬ್ ನ್ಯಾಷನಲ್ ಬ್ಯಾಂಕ್
B
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
C
ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
D
ಭಾರತೀಯ ಸ್ಟೇಟ್ ಬ್ಯಾಂಕ್
Question 1 Explanation: 
ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ತನ್ನ ಗ್ರಾಹಕರಿಗೆ 75ನೇ ಸಂಸ್ಥಾಪನ ದಿನದ ಅಂಗವಾಗಿ Bataua ಮೊಬೈಲ್ ವ್ಯಾಲೆಟ್ ಬಿಡುಗಡೆಗೊಳಿಸಿದೆ.

Question 2

2. “ವಿಶ್ವಸಂಸ್ಥೆಯ ವಿಶ್ವ ಸಾಮಾಜಿಕ ನ್ಯಾಯ ದಿನ”ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಫೆಬ್ರವರಿ 19
B
ಫೆಬ್ರವರಿ 20
C
ಫೆಬ್ರವರಿ 21
D
ಫೆಬ್ರವರಿ 22
Question 2 Explanation: 
ಫೆಬ್ರವರಿ 20

ವಿಶ್ವಸಂಸ್ಥೆಯ ವಿಶ್ವ ಸಾಮಾಜಿಕ ನ್ಯಾಯ ದಿನ”ವನ್ನು ಪ್ರತಿವರ್ಷ ಫೆಬ್ರವರಿ 20 ರಂದು ಆಚರಿಸಲಾಗುತ್ತದೆ. “Preventing conflict and sustaining peace through decent work” ಇದು ಈ ವರ್ಷದ ಧ್ಯೇಯವಾಕ್ಯ.

Question 3

3. ಇತ್ತೀಚೆಗೆ ನಿಧನರಾದ “ಬನಶ್ರೀ ಸೇನ್ ಗುಪ್ತ”ಯಾವ ರಾಜ್ಯದ ಪ್ರಸಿದ್ದ ಗಾಯಕಿ?

A
ಓಡಿಶಾ
B
ಕೇರಳ
C
ಪಶ್ಚಿಮ ಬಂಗಾಳ
D
ಜಾರ್ಖಂಡ್
Question 3 Explanation: 
ಪಶ್ಚಿಮ ಬಂಗಾಳ

ಬಂಗಾಳಿ ಭಾಷೆಯ ಪ್ರಸಿದ್ದ ಗಾಯಕ ಬನಶ್ರೀ ಸೇನ್ ಗುಪ್ತ ಅವರು ಕಲ್ಕತ್ತಾದಲ್ಲಿ ನಿಧನರಾದರು. ಬನಶ್ರೀ ಅವರು ತಮ್ಮ ಮಧುರ ಕಂಠದಿಂದ ಜನಪ್ರಿಯರಾಗಿದ್ದರು. ಬೆಂಗಾಳಿ, ಹಿಂದಿ, ಅಸ್ಸಾಮಿ ಮತ್ತು ಒಡಿಯಾ ಸಿನಿಮಾಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದರು.

Question 4

4. 2017 ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಆರ್ಟ್ ಸಿನಿಮಾ (CICAE)” ಪ್ರಶಸ್ತಿಯನನ್ನು ಪಡೆದುಕೊಂಡ ಭಾರತೀಯ ಸಿನಿಮಾ ಯಾವುದು?

A
ತಿಥಿ
B
ನ್ಯೂಟನ್
C
ಜಲ್
D
ಅಲ್ಲಮ
Question 4 Explanation: 
ನ್ಯೂಟನ್

ರಾಜಕೀಯ ವಿಡಂಬನಾತ್ಮಕ ಸಿನಿಮಾ “ನ್ಯೂಟನ್”ಗೆ 2017 ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಆರ್ಟ್ ಸಿನಿಮಾ (CICAE)” ಪ್ರಶಸ್ತಿ ಲಭಿಸಿದೆ.

Question 5

5. “2017 ರಾಷ್ಟ್ರೀಯ ಜೀವವೈವಿಧ್ಯ ಕಾಂಗ್ರೆಸ್ (National Biodiversity Congress)” ಯಾವ ರಾಜ್ಯದಲ್ಲಿ ನಡೆಯಲಿದೆ?

A
ಗೋವಾ
B
ಕೇರಳ
C
ಹರಿಯಾಣ
D
ಕರ್ನಾಟಕ
Question 5 Explanation: 
ಕೇರಳ

“2017 ರಾಷ್ಟ್ರೀಯ ಜೀವವೈವಿಧ್ಯ ಕಾಂಗ್ರೆಸ್” ಕೇರಳದ ತಿರುವನಂತಪುರಂನಲ್ಲಿ ಫೆಬ್ರವರಿ 22 ರಿಂದ ನಡೆಯಲಿದೆ. ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿ ಈ ಕಾಂಗ್ರೆಸ್ ಅನ್ನು ಆಯೋಜಿಸುತ್ತಿದೆ.

Question 6

6. 2017 ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಗೋಲ್ಡನ್ ಬೇರ್ (Golden Bear)” ಪ್ರಶಸ್ತಿಯನ್ನು ಗೆದ್ದುಕೊಂಡ ಸಿನಿಮಾ ಯಾವುದು?

A
ಬ್ರೈಟ್ ನೈಟ್ಸ್
B
ಆನ್ ಬಾಡಿ ಅಂಡ್ ಸೋಲ್
C
ಕ್ಲೋಸ್ ನಿಟ್
D
ದಿ ಅದರ್ ಸೈಡ್ ಆಫ್ ಹೋಪ್
Question 6 Explanation: 
ಆನ್ ಬಾಡಿ ಅಂಡ್ ಸೋಲ್

ಹಂಗೇರಿಯ “ಆನ್ ಬಾಡಿ ಅಂಡ್ ಸೋಲ್” ಸಿನಿಮಾಗೆ ಗೋಲ್ಡನ್ ಬೇರ್ ಪ್ರಶಸ್ತಿ ಲಭಿಸಿದೆ. ಅಲ್ಲದೇ ಇನ್ನಿತರ ಎರಡು ಪ್ರಶಸ್ತಿಗಳು ಸಹ ಈ ಸಿನಿಮಾಗೆ ನೀಡಲಾಗಿದೆ.

Question 7

7. _______ ರಂದು “ಕೇಂದ್ರ ಅಬಕಾರಿ ದಿನ (Central Excise Day)”ವನ್ನು ಆಚರಿಸಲಾಗುತ್ತದೆ?

A
ಫೆಬ್ರವರಿ 22
B
ಫೆಬ್ರವರಿ 23
C
ಫೆಬ್ರವರಿ 24
D
ಫೆಬ್ರವರಿ 25
Question 7 Explanation: 

ಫೆಬ್ರವರಿ 23 ರಂದು ಕೇಂದ್ರ ಅಬಕಾರಿ ದಿನವನ್ನು ಆಚರಿಸಲಾಗುವುದು. ಕೇಂದ್ರ ಅಬಕಾರಿ ಮತ್ತು ಉಪ್ಪು, ಕಾಯಿದೆ-1944 ರಲ್ಲಿ ಜಾರಿಗೆ ಬಂದ ದಿನವನ್ನು ಕೇಂದ್ರ ಅಬಕಾರಿ ದಿನವೆಂದು ಆಚರಿಸಲಾಗುತ್ತದೆ.

Question 8

8. ಯಾವ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ವಿರೋಧಿ ತರಭೇತಿಯನ್ನು ಕಡ್ಡಾಯಗೊಳಿಸಲಿದೆ?

A
ಕೇರಳ
B
ಮಧ್ಯ ಪ್ರದೇಶ
C
ರಾಜಸ್ತಾನ
D
ಗುಜರಾತ್
Question 8 Explanation: 
ಕೇರಳ

ಕೇರಳ ಸರ್ಕಾರ ತನ್ನ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಆರು ದಿನಗಳ ಭ್ರಷ್ಟಾಚಾರ ವಿರೋಧಿ ತರಭೇತಿಯನ್ನು ಕಡ್ಡಾಯಗೊಳಿಸಲಿದೆ. ದೇಶದಲ್ಲೆ ಇದೆ ಮೊದಲ ಬಾರಿಗೆ ಇಂತಹ ತರಭೇತಿಯನ್ನು ಜಾರಿಗೆ ತರಲಾಗುತ್ತಿದೆ.

Question 9

9. 2016-17 ಇಂಟರ್ನ್ಯಾಷನಲ್ ಮರ್ಕ್ಯೂರಿ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತೀಯ ಸಂಸ್ಥೆ ಯಾವುದು?

A
ಎಂಟರ್ಪ್ರೆನರ್ಶಿಪ್ ಡೆವೆಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
B
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
C
ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್
D
ಸೆಂಟ್ರಲ್ ಸೈಂಟಿಫಿಕ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್
Question 9 Explanation: 
ಎಂಟರ್ಪ್ರೆನರ್ಶಿಪ್ ಡೆವೆಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

ಅಹಮದಬಾದ್ ಮೂಲದ ಎಂಟರ್ಪ್ರೆನರ್ಶಿಪ್ ಡೆವೆಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಗೆ 2016-17 ಇಂಟರ್ನ್ಯಾಷನಲ್ ಮರ್ಕ್ಯೂರಿ ಪ್ರಶಸ್ತಿಯನ್ನು ನೀಡಲಾಗಿದೆ.

Question 10

10. 13ನೇ “ರಾಷ್ಟ್ರೀಯ ಕೃಷಿ ವಿಜ್ಞಾನ ಸಮಾವೇಶ (National Agriculture Science Congress)” ಅತಿಥ್ಯವಹಿಸಲಿರುವ ರಾಜ್ಯ ಯಾವುದು?

A
ಕರ್ನಾಟಕ
B
ತಮಿಳುನಾಡು
C
ಮಹಾರಾಷ್ಟ್ರ
D
ಹಿಮಾಚಲ ಪ್ರದೇಶ
Question 10 Explanation: 
ಕರ್ನಾಟಕ

13ನೇ ರಾಷ್ಟ್ರೀಯ ಕೃಷಿ ವಿಜ್ಞಾನ ಸಮಾವೇಶ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 22 ರಂದು ಆರಂಭಗೊಂಡಿತು. ನಾಲ್ಕು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಐಸಿಎಆರ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸ್ ಜಂಟಿಯಾಗಿ ಆಯೋಜಿಸುತ್ತಿವೆ. “Climate Smart Agriculture” ಸಮಾವೇಶದ ಧ್ಯೇಯವಾಕ್ಯವಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.