ಸೌರ ವಿದ್ಯುತ್ ನೀತಿ 2014-2021ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಒಪ್ಪಿಗೆ

ರಾಜ್ಯ ಸರ್ಕಾರ ಸೌರ ವಿದ್ಯುತ್ ನೀತಿ 2014-2021ಕ್ಕೆ ತಿದ್ದುಪಡಿ ತರಲು ಸಮ್ಮತಿ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿದೆ.

ತಿದ್ದುಪಡಿಯ ಪ್ರಮುಖಾಂಶಗಳು:

  • ಈಗಿರುವ 2 ಸಾವಿರ ಮೆಗಾವಾಟ್ ಗುರಿಯನ್ನು 6 ಸಾವಿರ ಮೆಗಾವಾಟ್ಗೆ ಹೆಚ್ಚಿಸಲು ನೀತಿಯಡಿ ಆದ್ಯತೆ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 24,700 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ಇದರ ಉದ್ದೇಶ.
  • ಸೌರ ಮೇಲ್ಛಾವಣಿ ಯೋಜನೆ ಹೊರತುಪಡಿಸಿ ಒಂದು ತಾಲ್ಲೂಕಿಗೆ ಗರಿಷ್ಠ 200 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಘಟಕಗಳಿಗೆ ಮಾತ್ರ ಒಪ್ಪಿಗೆ.
  • ಘಟಕ ಸ್ಥಾಪನೆಗೆ ಖಾಸಗಿಯವರಿಗೆ ಭೂಮಿ ಒದಗಿಸಲು ಖಾಸಗಿ ಭೂ ಬ್ಯಾಂಕ್ ಸ್ಥಾಪನೆ ಮಾಡಲು ಹಿಂದೆ ನಿರ್ಧರಿಸಲಾಗಿತ್ತು. ರೈತರು, ರೈತರ ಗುಂಪು ಭೂಮಿ ಬ್ಯಾಂಕ್ ಮಾಡಿ 30 ವರ್ಷ ಗುತ್ತಿಗೆ ಆಧಾರದ ಮೇಲೆ ನೀಡಲು ಅವಕಾಶ ನೀಡಲಾಗಿತ್ತು. ತಿದ್ದುಪಡಿ ನೀತಿಯಲ್ಲಿ ಭೂಮಿ ಬ್ಯಾಂಕ್ ಯೋಜನೆ ಕೈಬಿಡಲಾಗಿದೆ.
  • ಕೋಲಾರ, ತುಮಕೂರಿಗೆ ಅಲ್ಲದೇ, ಎಲ್ಲಾ ತಾಲ್ಲೂಕುಗಳಲ್ಲಿಯೂ ಸೌರವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರೋತ್ಸಾಹ.
  • ‘ಸೋಲಾರ್ ಎನರ್ಜಿ ಸೆಂಟರ್ ಆಫ್ ಎಕ್ಸಲೆನ್ಸ್ ಅಂಡ್ ಇನ್ಕ್ಯುಬೇಶನ್ ಸೆಂಟರ್’ ಸ್ಥಾಪಿಸಲು ಒಪ್ಪಿಗೆ. ಈ ಕೇಂದ್ರದ ಮೂಲಕ ಸೌರವಿದ್ಯುತ್ ಕ್ಷೇತ್ರದ ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ಸಂಶೋಧನೆ ಪ್ರೋತ್ಸಾಹಿಸಲಾಗುವುದು.
  • 100 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಮಾಡುವವರಿಗೆ ₹1 ಕೋಟಿ ಹಣಕಾಸು ನೆರವು ನೀಡುವ ಯೋಜನೆಯನ್ನು ಸರ್ಕಾರ ವಾಪಸು ಪಡೆಯಲು ನಿರ್ಧಾರ.
  • ಸೌರಶಕ್ತಿ ಪಾರ್ಕ್ ಆರಂಭಿಸಲು ಅರ್ಜಿ ಶುಲ್ಕ ₹1 ಲಕ್ಷ, ಸೌಲಭ್ಯ ಒದಗಿಸಲು 1 ಮೆಗಾವಾಟ್ಗೆ ₹25 ಸಾವಿರ ಶುಲ್ಕ ವಿಧಿಸಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೊಲಗದ್ದೆಗಳಲ್ಲಿ ಸೌರವಿದ್ಯುತ್ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಕೈಬಿಡಲಾಗಿದೆ.

ಐದು ಸಾಹಿತಿಗಳಿಗೆ 2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಐವರು ಸಾಹಿತಿಗಳನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಗಯು ತಲಾ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿಗೆ ಆಯ್ಕೆಯಾದವರು:

  • ಡಾ. ನಾಗೇಶ್ ಹೆಗ್ಗಡೆ (ವಿಜ್ಞಾನ ಸಾಹಿತ್ಯ)
  • ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ (ವಿಮರ್ಶಕ)
  • ಡಾ.ಎಚ್.ಎಸ್. ಶ್ರೀಮತಿ (ವಿಮರ್ಶಕರು)
  • ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ,
  • ಕಥೆಗಾರ ಬಸವರಾಜು ಕುಕ್ಕರಹಳ್ಳಿ,
  • ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ

ಚೂರು-ಪಾರು ಸುದ್ದಿ:

  • ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಕಲಾವಿದ ವನ್ನಾಡಿಲ್‌ ಪುದಿಯವೀಟಿಲ್‌ ಧನಂಜಯನ್‌ ರವರನ್ನು ಪ್ರಸ್ತಕ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡದೆ. ಜನವರಿ 13ರಂದು ನಡೆಯುವ ವಿರಾಸತ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
  • ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಎಂಬ ಶ್ರೇಯಕ್ಕೆ ಹುಬ್ಬಳ್ಳಿಯ ಶೆರೆವಾಡ ಪಾತ್ರವಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಧಾರವಾಡ ಜಿಲ್ಲೆಯಲ್ಲಿ ಒಂಬತ್ತು ಹಳ್ಳಿಗಳನ್ನು ಡಿಜಿಟಲ್ ಆಗಿ ಮಾರ್ಪಡಿಸುವ ಉದ್ದೇಶ ಹೊಂದಿದೆ. ಅದರ ಭಾಗವಾಗಿ ಹಳ್ಳಿಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಶೆರೆವಾಡ ಗ್ರಾಮದಲ್ಲಿ 4415 ಜನಸಂಖ್ಯೆ ಇದ್ದರೆ, 4003 ಮಂದಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ಹೊಂದಿದ್ದಾರೆ. ಈ ಪೈಕಿ 3964 ಖಾತೆಗಳನ್ನು ಆಧಾರ್ ಜೊತೆಗೆ ಜೋಡಣೆ ಸಹ ಮಾಡಲಾಗಿದೆ. ಇನ್ನು 3803 ರುಪೇ ಕಾರ್ಡ್ ಹಾಗೂ 25 ಕಿಸಾನ್ ಕಾರ್ಡ್ ಸಹ ವಿತರಿಸಲಾಗಿದೆ.
  • ನಾಲ್ಕನೇ ಅಂತಾರಾಷ್ಟ್ರೀಯ ಕಿವುಡ ಸಿನಿಮೋತ್ಸವ ಬೆಂಗಳೂರಿನಲ್ಲಿ ಆಂಭಗೊಂಡಿತು. ಮೂರು ದಿನಗಳ ಈ ಉತ್ಸವದಲ್ಲಿ ಕಿವುಡರೇ ರೂಪಿಸಿದ 35 ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿವಿಧ ಪ್ರಕಾರದ ಸಿನಿಮಾ ಪ್ರದರ್ಶನವಾಗಲಿದೆ. ಈ ಬಾರಿ ಕಿವಿ ಕೇಳುವವರು ನಿರ್ಮಿಸಿದ ಮೂಕಿ ಚಿತ್ರವನ್ನೂ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಕಿವುಡ ವ್ಯಕ್ತಿಗಳು ಅನುಭವಿಸುವ ತೊಂದರೆಗಳು, ಎಲ್ಲರೊಂದಿಗೆ ಒಳಗೊಳ್ಳಲು ಸಾಧ್ಯವಾಗದ ಸಂದರ್ಭಗಳನ್ನು ಈ ಸಿನಿಮಾಗಳಲ್ಲಿ ಕಾಣಬಹುದು. ಬ್ರಿಟನ್, ಹಾಂಕಾಂಗ್, ಇಟಲಿ, ಶ್ರೀಲಂಕಾ ಮತ್ತು ಭಾರತದ ವಿವಿಧ ಭಾಗಗಳ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
  • ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡ ಮಾಡುವ ಪ್ರಸಕ್ತ ಸಾಲಿನ ಡಾ. ಮನಸೂರ ರಾಷ್ಟ್ರೀಯ ಸಮ್ಮಾನವನ್ನು ಕಿರಾಣಾ ಘರಾಣೆಯ ಹಿರಿಯ ಗಾಯಕ ಪಂ.ಮಣಿಪ್ರಸಾದ್ ರವರಿಗೆ ನೀಡಲಾಗಿದೆ. ಪ್ರಶಸ್ತಿ ₹1 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿದೆ. ಅಲ್ಲದೇ, ಯುವ ಗಾಯಕರಾದ ಓಂಕಾರನಾಥ ಹವಾಲ್ದಾರ ಮತ್ತು ರಾಜೇಶ್ವರಿ ಪಾಟೀಲ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಯುವ ಪುರಸ್ಕಾರ ₹ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.
  • ಯುರೋಪಿನ ಕಜಕಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಪ್ರಕೃತಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಗೇಂದ್ರ ಮುತ್ಮುರ್ಡು ಅವರ ಮಕ್ಮಲ್ ನೆತ್ತಿಯ ಮರಗುಬ್ಬಿ ಛಾಯಾಚಿತ್ರಕ್ಕೆ ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕದ ಚಿನ್ನದ ಪದಕ ಲಭಿಸಿದೆ. ಸ್ಪರ್ಧೆಯಲ್ಲಿ ಸುಮಾರು 55 ದೇಶಗಳ, 360 ಸ್ಪರ್ಧಿಗಳ, 6000ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. ಭಾರತಕ್ಕೆ ಎರಡು ಚಿನ್ನ, ಒಂದು ಬೆಳ್ಳಿ, ಹಾಗೂ ಒಂದು ಕಂಚಿನ ಪದಕ ಲಭಿಸಿವೆ.
  • ಪಂ. ಅಜಯ್ ಪೊಹಣಕರ್ ರವರಿಗೆ ಗಂಗೂಬಾಯಿ ಹಾನಗಲ್ ಅವರ 9ನೇ ಸಂಗೀತ ಮಹೋತ್ಸವದಲ್ಲಿ ‘ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ’ ವನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಲಕ್ಷ ರೂ. ನಗದನ್ನು ಒಳಗೊಂಡಿದೆ.
  • ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದ ವಿಶೇಷ ಸಾಧನೆಗಾಗಿ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವವಿದ್ಯಾಲಯದ 9 ವಿದ್ಯಾರ್ಥಿಗಳನ್ನೊಳಗೊಂಡ ತಂಡ 2 ದಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ವಿಶೇಷ ಅಧ್ಯಯನ ಕ್ಕಾಗಿ ಆಗಮಿಸಿದ್ದು, ಯೋಜನೆ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿತು. ಈ ಸಂದರ್ಭ ವಿವಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಅವರು ಹೆಗ್ಗಡೆಯವರನ್ನು ಸನ್ಮಾನಿಸಿ, ‘ಔಟ್ ಸ್ಟ್ಯಾಂಡಿಂಗ್ ಲೀಡರ್​ಷಿಪ್ ಇನ್ ರೂರಲ್ ಡೆವಲೆಪ್​ವೆುಂಟ್ ಆಂಡ್ ವುಮೆನ್ ಎಂಪವರ್​ವೆುಂಟ್’ ಪ್ರಶಸ್ತಿ ಫಲಕ ನೀಡಿದರು. ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಬದಲಿ ಇಂಧನ ಕ್ಷೇತ್ರದಲ್ಲಿ ಯೋಜನೆಯ ಅನುಭವವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ತಂಡದೊಂದಿಗೆ ಹಂಚಿಕೊಂಡರು.
  • ಕನ್ನಡ ಖ್ಯಾತ ನಟರಲ್ಲಿ ಒಬ್ಬರಾಗಿರುವ ರಮೇಶ್ ಅರವಿಂದ್ ರವರು ಮೈಸೂರಿನ ಪ್ರತಿಷ್ಠಿತ ಅಗರಬತ್ತಿ ತಯಾರಕರಾದ ಎನ್​ಆರ್ ಸಮೂಹದ ಸೈಕಲ್ ಪ್ಯೂರ್ ಅಗರಬತ್ತೀಸ್​ನ ಪ್ರಖ್ಯಾತ ಬ್ರ್ಯಾಂಡ್ ಆಗಿರುವ ‘ವಾಸು ಅಗರಬತ್ತಿ’ಗೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ರಮೇಶ್ ಅರವಿಂದ್ ಅವರನ್ನು ಕರ್ನಾಟಕ ವ್ಯಾಪ್ತಿಗೆ ಸಂಸ್ಥೆಯ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಮಾಡಲಾಗಿದೆ.
  • ಬೆಂಗಳೂರು ಪ್ರೆಸ್​ಕ್ಲಬ್ ಕೊಡಮಾಡುವ 2016ನೇ ಸಾಲಿನ ವರ್ಷದ ‘ವ್ಯಕ್ತಿ ಪ್ರಶಸ್ತಿ’ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಜನರಾಗಿದ್ದಾರೆ. ಕೃಷಿ ಸಾಧಕಿ ಪ್ರಶಸ್ತಿಗೆ ಹಾವೇರಿಯ ಕೃಷಿ ತಜ್ಞೆ ಜಯಮ್ಮ ನಿಂಗನಗೌಡ ಚನ್ನಗೌಡರ್ ಮತ್ತು ಜೀವಮಾನ ಸಾಧಕಿ ಪ್ರಶಸ್ತಿಗೆ ಪತ್ರಕರ್ತೆ ಸಿ.ಜಿ.ಮಂಜುಳಾ ಆಯ್ಕೆಯಾಗಿದ್ದಾರೆ. 19 ಹಿರಿಯ ಪತ್ರಕರ್ತರನ್ನು ಜೀವಮಾನ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • ಲೇಡೀಸ್ ಸರ್ಕಲ್ ಇಂಡಿಯಾ ಮತ್ತು ರೌಂಡ್ ಟೇಬಲ್ ಇಂಡಿಯಾ ನೀಡುವ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗೆ ಕರ್ನಾಟಕ ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಚಿತ್ರ ಕಲಾವಿದ ಬಿ.ಕೆ.ಎಸ್. ವರ್ವ ಸೇರಿ ಒಟ್ಟು 8 ಜನರಿಗೆ ಲಭಿಸಿದೆ. ಬಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ದೈಹಿಕ ದೃಢತೆಗೆ ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ, ಕ್ರೀಡೆಯಲ್ಲಿ ಸಯ್ಯದ್ ಕಿರ್ವನಿ, ರಂಗಕಲೆಗೆ ಅರುಂಧತಿ ರಾಜಾ ಮತ್ತು ಜಗದೀಶ್ ರಾಜಾ, ಸಮಾಜ ಸೇವೆಗೆ ಸುಪರ್ಣಾ ಗಂಗೂಲಿ, ಮನರಂಜನೆಗಾಗಿ ದಾನಿಶ್ ಸೇಟ್, ಕಲೆಗಾಗಿ ಡಾ. ಬಿ.ಕೆ.ಎಸ್. ವರ್ವ ಮತ್ತು ಉದ್ಯಮಶೀಲತೆಗಾಗಿ ಮೀನಾಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲೈಲಾ ಗ್ರಾಮ ಪಂಚಾಯಿತಿಗೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ದೊರೆತಿದೆ. ಈ ಮೂಲಕ ಐಎಸ್ಓ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಪಂಚಾಯತ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆಸನಗಳ ವ್ಯವಸ್ಥೆ ಸರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಮುಂತಾದ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿ ಪತ್ರ ನೀಡಲಾಗಿದೆ.

Leave a Comment

This site uses Akismet to reduce spam. Learn how your comment data is processed.