ಕಚ್ಚಾ ತೈಲ ಸಂಗ್ರಹಕ್ಕೆ ಭಾರತ ಮತ್ತು ಯುಎಇ ಒಪ್ಪಂದ

ಭಾರತದ ಇಂಧನ ಸುರಕ್ಷತೆ ಹಾಗೂ ಮಹತ್ವಕಾಂಕ್ಷಿ ಕಚ್ಚಾ ತೈಲ ಸಂಗ್ರಹಕ್ಕೆ ಭಾರತ ಮತ್ತು ಯುಎಇ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಅನ್ವಯ ಯುಎಇ ನ ಅಬುದಾಬಿ ನ್ಯಾಷನಲ್ ಆಯಿಲ್ ಕಂಪನಿ ಕರ್ನಾಟಕದ ಮಂಗಳೂರಿನಲ್ಲಿರುವ ಕಚ್ಚಾ ತೈಲ ಸಂಗ್ರಹಾಗಾರದ ಒಟ್ಟು ಸಾಮರ್ಥ್ಯದಲ್ಲಿ ಶೇಕಡ 50 ರಷ್ಟು ಭರ್ತಿ ಮಾಡಲು ಕಚ್ಚಾ ತೈಲವನ್ನು ಪೂರೈಸಲಿದೆ. ಈಗಾಗಲೇ ಮಂಗಳೂರಿನ ಕಚ್ಚಾ ತೈಲ ಸಂಗ್ರಹಗಾರ ಶೇ 50% (6 ಬಿಲಿಯನ್) ರಷ್ಟನ್ನು ಇರಾನ್ ನಿಂದ ಆಮದು ಮಾಡಿಕೊಳ್ಳಲಾದ ಇಂಧನವನ್ನು ಶೇಖರಿಡಿಸಲಾಗಿದೆ. ಅಲ್ಲದೇ ಆಂಧ್ರಪ್ರದೇಶದ ವಿಝಾಗ್ ಕಚ್ಚಾ ತೈಲ ಸಂಗ್ರಹಾಗಾರದಲ್ಲೂ ಸಹ ಇರಾನಿನ 7.55 ಮಿಲಿಯನ್ ಬ್ಯಾರೆಲ್ ತೈಲವನ್ನು ಸಂಗ್ರಹ ಮಾಡಲಾಗಿದೆ.

ಹಿನ್ನಲೆ:

  • ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿರುವ ಹಾಗೂ ಜಗತ್ತಿನ ಮೂರನೇ ಅತಿ ಹೆಚ್ಚು ತೈಲವನ್ನು ಬಳಸುವ ದೇಶ ಭಾರತ, ಅಂದಾಜು 10 ದಿನಗಳಿಗೆ ಸಾಕಾಗುವಷ್ಟ ಅಂದರೆ 36.87 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಲುವಾಗಿ ಭೂಮಿಯೊಳಗೆ ಕಚ್ಚಾ ತೈಲವನ್ನು ಸಂಗ್ರಹಿಸಿಡಲು ಯೋಜನೆ ರೂಪಿಸಿದೆ. ತುರ್ತು ಸಂದರ್ಭದಲ್ಲಿ ತೈಲವನ್ನು ಪೂರೈಸಲು ಇದು ಸಹಾಯವಾಗಲಿದೆ.

“ಕಿರಮೆಕಿ-2”  ಪ್ರಪ್ರಥಮ ಮಿಲಿಟರಿ ಸಂವಹನ ಉಪಗ್ರಹವನ್ನು ಉಡಾಯಿಸಿದ ಭಾರತ

ಜಪಾನ್ ತನ್ನ ಮೊದಲ ಮಿಲಿಟರಿ ಸಂವಹನ ಉಪಗ್ರಹ “ಕಿರಮೆಕಿ-2 (Kirameki-2)” ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ದಕ್ಷಿಣ ಜಪಾನಿನ ತನೆಗಶಿಮ ಬಾಹ್ಯಕಾಶ ಕೇಂದ್ರದಿಂದ H-2A ರಾಕೆಟ್ ಬಳಸಿ ಈ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ಉಡಾವಣೆಗೊಂಡ ನಂತರ ರಾಕೆಟ್ ನಿಂದ ಬೇರ್ಪಡೆಗೊಂಡು ನಿಗದಿತ ಕಕ್ಷೆಗೆ ಉಪಗ್ರಹ ಸೇರ್ಪಡೆಗೊಂಡಿತು.

ಪ್ರಮುಖಾಂಶಗಳು:

  • ಚೀನಾ ಹಾಗೂ ಉತ್ತರ ಕೊರಿಯಾದ ಕ್ಷಿಪಣಿ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಪಾನ್ ತನ್ನ ಪ್ರಸ್ತುತ ಮಿಲಿಟರಿ ಸಂವಹನ ಜಾಲವನ್ನು ಉತ್ತಮಪಡಿಸಲು ಈ ಉಪಗ್ರಹವನ್ನು ಅಭಿವೃದ್ದಿಪಡಿಸಿದೆ.
  • ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಮೂರು ಉಪಗ್ರಹಗಳನ್ನು ಬದಲಿಸಲು ಉಡಾಯಿಸಲಾದ ಮೊದಲ ಉಪಗ್ರಹ ಇದಾಗಿದ್ದು, ಮಿಲಿಟರಿ ಘಟಕಗಳ ನಡುವೆ ವೇಗವಾಗಿ ಸಂವಹನ ನಡೆಸಲು ಸಾಧ್ಯವಾಗಲಿದೆ.
  • ಉತ್ತರ ಕೊರಿಯಾದಿಂದ ಎದುರಾಗುವ ಕ್ಷಿಪಣಿ ದಾಳಿ ಭೀತಿ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರಿ ಕಾರ್ಯಾಚರಣೆ ಸೇರಿದಂತೆ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ವೇಗವಾಗಿ ಸಂವಹನ ಸಾಧಿಸಲು ಇದು ಬಳಕೆಯಾಗಲಿದೆ.
  • ಅಲ್ಲದೇ ಜಪಾನಿನಿಂದ ಹೊರಗಡೆ ಅಂದರೆ ಸೊಮಾಲಿ ತೀರಾ ಪ್ರದೇಶ ಹಾಗೂ ದಕ್ಷಿಣ ಸೂಡಾನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿ ಮಿಲಿಟರಿ ಪಡೆಗಳು ಸಹ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

68ನೇ ಗಣರಾಜ್ಯೋತ್ಸವ ದೇಶದಾತ್ಯಂತ ಸಂಭ್ರಮದಿಂದ ಆಚರಣೆ

68ನೇ ಗಣರಾಜ್ಯೋತ್ಸವವನ್ನು ದೇಶದಾತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. “ಸ್ಕಿಲ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಡಾವೊ” ಇದು 2017ನೇ ಗಣರಾಜ್ಯೋತ್ಸವದ ಧ್ಯೇಯವಾಕ್ಯ.

ಪ್ರಮುಖಾಂಶಗಳು:

  • ಅಬುದಾಬಿಯ ಯುವರಾಜ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನ ಡೆಪ್ಯೂಟಿ ಸುಪ್ರೀಂ ಕಮಾಂಡರ್ ಆಗಿರುವ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್” ರವರು ಈ ವರ್ಷದ ಗಣರಾಜ್ಯೋತ್ಸವ ದಿನದ ಮುಖ್ಯ ಅತಿಥಿ.
  • ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಫೆರೆಡ್ ನಲ್ಲಿ ದೇಶದ ವಿವಿಧ ಸಂಸ್ಕೃತಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಸಾಧನೆ ಹಾಗೂ ಮಿಲಿಟರಿ ಕಸರತ್ತನ್ನು ಪ್ರದರ್ಶಿಸಲಾಯಿತು.
  • ಇದೇ ಮೊದಲ ಬಾರಿಗೆ ದೇಶದ “ರಾಷ್ಟ್ರೀಯ ಭದ್ರತಾ ಪಡೆ (NSG)”ಯ ತುಕಡಿಯಾದ ಬ್ಲಾಕ್ ಕ್ಯಾಟ್ ಕಮಾಂಡೋಸ್ ಫೆರೆಡ್ ನಲ್ಲಿ ಭಾಗವಹಿಸಿದ್ದರು. ಯುಎಇ ಮಿಲಿಟರಿ ಪಡೆ ಸಹ ಫೆರೆಡ್ ನಲ್ಲಿ ಭಾಗವಹಿಸಿತ್ತು.
  • ದೇಶದ ಸುಮಾರು 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಸ್ಥಬ್ದ ಚಿತ್ರಗಳನ್ನು ಫೆರೆಡ್ ನಲ್ಲಿ ಪ್ರದರ್ಶಿಸಲಾಯಿತು.
  • ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ “ಅಶೋಕ ಚಕ್ರ”ವನ್ನು ಹವಾಲ್ದಾರ್ ಹಂಗ್ಪನ್ ದಾದಾ ಅವರಿಗೆ ಮರಣೋತ್ತರವಾಗಿ ಪ್ರಧಾನ ಮಾಡಿದರು.

ಭಾರತ ಮತ್ತು ಯುನೈಟೆಡ್ ಅರಭ್ ಎಮಿರೇಟ್ಸ್ (ಯುಎಇ) ನಡುವೆ 14 ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ 14 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 68ನೇ ಗಣರಾಜ್ಯೋತ್ಸವದ ಅತಿಥಿಯಾಗಿರುವ ಶೇಖ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ರವರ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ವೇಳೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸಹಿ ಹಾಕಲಾದ ಒಪ್ಪಂದಗಳು:

  • ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ
  • ತೈಲ ಸಂಗ್ರಹ ಮತ್ತು ನಿರ್ವಹಣೆಗೆ ಒಪ್ಪಂದ
  • ಕಾರ್ಯಕ್ರಮ ವಿನಿಮಯ ಒಡಂಬಡಿಕೆಗೆ ಸಹಿ
  • ರಕ್ಷಣಾ ಕೈಗಾರಿಕೆ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ
  • ಸಮಗ್ರ ಪಾಲುದಾರಿಕೆ ಒಪ್ಪಂದಕ್ಕೆ ಸಹಿ
  • ನೌಕ ಸಾರಿಗೆ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ
  • ಮಾನವ ಕಳ್ಳಸಾಗಣೆ ಹಾಗೂ ತಡೆ ಸಹಕಾರಕ್ಕೆ ಒಪ್ಪಂದ
  • ಪರಸ್ಪರ ಇತಾಸಕ್ತಿ ಇರುವ ಕ್ಷೇತ್ರಗಳಲ್ಲಿ ಸಹಕಾರ ಉತ್ತೇಜನಕ್ಕೆ ಒಪ್ಪಂದ
  • ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ನಾವೀನ್ಯ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ
  • ಉಭಯ ದೇಶಗಳಲ್ಲಿ ರಾಜತಾಂತ್ರಿಕರು, ವಿಶೇಷ ಮತ್ತು ಅಧಿಕೃತ ಪಾಸ್ ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಒಪ್ಪಂದ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಒಪ್ಪಂದಕ್ಕೆ ಸಹಿ.

One Thought to “ಪ್ರಚಲಿತ ವಿದ್ಯಮಾನಗಳು-ಜನವರಿ-27,2017”

Leave a Comment

This site uses Akismet to reduce spam. Learn how your comment data is processed.