ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -27

Question 1

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಮಂಗನ ಕಾಯಿಲೆಯನ್ನು “ಕ್ಯಾಸನೂರು ಅರಣ್ಯ ಕಾಯಿಲೆ”ಯಂತಲೂ ಕರೆಯಲಾಗುತ್ತದೆ

II) ಇದು ಸತ್ತ ಮಂಗಗಳ ಮೇಲಿನ ಬ್ಯಾಕ್ಟೀರಿಯಾ ಹೊತ್ತ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ

III) 1957ರಲ್ಲಿ ಚಿಕ್ಕಮಗಳೂರಿನ ಕ್ಯಾಸನೂರಿನ ಅರಣ್ಯ ಪ್ರದೇಶದಲ್ಲಿ ಈ ಕಾಯಿಲೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಒಂದು ಮತ್ತು ಎರಡು
C
ಹೇಳಿಕೆ ಒಂದು ಮತ್ತು ಮೂರು
D
ಮೇಲಿನ ಎಲ್ಲವು
Question 1 Explanation: 
ಹೇಳಿಕೆ ಒಂದು ಮಾತ್ರ

ಮಂಗನ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು 1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ. ಹಾಗಾಗಿ, ಕ್ಯಾಸನೂರು ಅರಣ್ಯ ಕಾಯಿಲೆ ಎಂದೇ ಗುರುತಿಸಲಾಗುತ್ತದೆ. ಇದು ಸತ್ತ ಮಂಗಗಳ ಮೇಲಿನ ವೈರಸ್ ಹೊತ್ತ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ.

Question 2

2. ಕರ್ನಾಟಕ ರಾಜ್ಯದ ಮೊದಲ ಇ-ಕೋರ್ಟ್ ಅನ್ನು ಈ ಕೆಳಗಿನ ಯಾವ ನಗರದಲ್ಲಿ ಇತ್ತೀಚೆಗೆ ಆರಂಭಿಸಲಾಗಿದೆ?

A
ಬೆಂಗಳೂರು
B
ಮೈಸೂರು
C
ಬೆಳಗಾವಿ
D
ಧಾರಾವಾಡ
Question 2 Explanation: 
ಬೆಳಗಾವಿ

ರಾಜ್ಯದ ಮೊದಲ ಇ– ಕೋರ್ಟ್ ಬೆಳಗಾವಿಯಲ್ಲಿ ಸ್ಥಾಪನೆಯಾಗಿದೆ. ಇ-ಕೋರ್ಟ್ ನಲ್ಲಿ ವಿಡಿಯೊ ಕಾನ್ಫರೆನ್ಸ್ ಮಾದರಿಯಲ್ಲಿ ವಿಚಾರಣೆ ನಡೆಯಲಿದೆ. ಈ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ಪ್ರಕರಣಗಳ ಆರೋಪಿ ಯಾವುದೇ ಜೈಲಿನಲ್ಲಿರಲಿ, ಆತನನ್ನು ಅಲ್ಲಿಂದಲೇ ವಿಡಿಯೋ ಮೂಲಕ ವಿಚಾರಣೆ ಮಾಡಲಾಗುವುದು. ಫೆ. 10ರಂದು ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾ ವಿಚಾರಣೆಯನ್ನು ಇ- ಕೋರ್ಟ್ ಮೂಲಕ ನಡೆಸಲಾಗುವುದು. ನ್ಯಾಯಾಲಯಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಲು ಇ–ಕೋರ್ಟ್ ವ್ಯವಸ್ಥೆಯನ್ನು ದೇಶದ ಕೆಲವೇ ಕೆಲವು ನ್ಯಾಯಾಲಯಗಳಲ್ಲಿ ಜಾರಿಗೆ ತರಲಾಗಿದೆ.

Question 3

3. 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡ ಸಿನಿಮಾ ಯಾವುದು?

A
ಲೇತ್ ಜೋಷಿ
B
ಎ ಫಾದರ್ ವಿಲ್
C
ಲೇಡಿ ಆಫ್ ಕೇಕ್
D
ಹರಿಕಥಾ ಪ್ರಸಂಗ
Question 3 Explanation: 
ಎ ಫಾದರ್ ವಿಲ್

9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತರ್ಜಕಿಸ್ತಾನದ “ಎ ಫಾದರ್ ವಿಲ್” ಸಿನಿಮಾ ಗೆದ್ದುಕೊಂಡಿದೆ.

Question 4

4. ಈ ಕೆಳಗಿನ ಯಾವ ದೇಶದಿಂದ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ 6 ಹಸಿರು ಅನಕೊಂಡ ಹಾವುಗಳನ್ನು ತರಸಿಕೊಳ್ಳಲಾಗುತ್ತಿದೆ?

A
ದಕ್ಷಿಣ ಆಫ್ರಿಕಾ
B
ಶ್ರೀಲಂಕಾ
C
ಕೀನ್ಯಾ
D
ಮಲೇಷಿಯಾ
Question 4 Explanation: 
ಶ್ರೀಲಂಕಾ

ಮೈಸೂರಿನ ವಿಶ್ವವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಗುಜರಾತಿನಿಂದ ಸಿಂಹ, ತಮಿಳುನಾಡಿನಿಂದ ಸಿಂಗಳೀಕ ಮತ್ತು ಶ್ರೀಲಂಕಾದಿಂದ ಅನಕೊಂಡ ಹಾವುಗಳನ್ನು ತರಸಲಾಗುತ್ತಿದೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಗುಜರಾತಿನಿಂದ ಒಂದು ಸಿಂಹ, ತಮಿಳುನಾಡಿನಿಂದ ಎರಡು ಸಿಂಗಳೀಕ, ಶ್ರೀಲಂಕಾದಿಂದ 6 ಹಸಿರು ಅನಕೊಂಡ ಹಾವುಗಳನ್ನು ತರಿಸಿಕೊಳ್ಳಲಾಗುತ್ತಿದೆ.

Question 5

5. ಆರು ಜಿಲ್ಲೆಗಳಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ರಾಜ್ಯ ಆರೋಗ್ಯ ಸಂಸ್ಥೆ ಈ ಕೆಳಗಿನ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಬಯೋಕಾನ್
B
ಇನ್ಪೋಸಿಸ್
C
ಅಪೊಲೊ
D
ಹಿಮಾಲಯ ಡ್ರಗ್ಸ್
Question 5 Explanation: 
ಬಯೋಕಾನ್

ಬಯೋಕಾನ್ ಸಂಸ್ಥೆ ರಾಜ್ಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಪ್ರಸಕ್ತ ಇರುವ ಸಾರ್ವಜನಿಕ ಆರೋಗ್ಯ ಸೇವೆಗಳ ಸಾಮರ್ಥ್ಯ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

Question 6

6. ಕೇಂದ್ರ ಸರ್ಕಾರದ ಅಟಲ್ ನಗರ ನವೀಕರಣ ಮತ್ತು ಕಾಯಕಲ್ಪ (ಅಮೃತ್) ಯೋಜನೆಯಡಿ ಕರ್ನಾಟಕದ ಎಷ್ಟು ನಗರಗಳನ್ನು ಆಯ್ಕೆಮಾಡಲಾಗಿದೆ?

A
25
B
27
C
31
D
33
Question 6 Explanation: 
27

ಅಟಲ್ ನಗರ ನವೀಕರಣ ಮತ್ತು ಕಾಯಕಲ್ಪ (ಅಮೃತ್) ಯೋಜನೆಯಡಿ ಕರ್ನಾಟಕದ 27 ನಗರಗಳನ್ನು ಆಯ್ಕೆಮಾಡಲಾಗಿದೆ. ಇತ್ತೀಚೆಗೆ ಯೋಜನೆಯಡಿ ಕೇಂದ್ರ ಸರ್ಕಾರ ಮೂರು ವರ್ಷದ ಅವಧಿಗೆ ₹2,070 ಕೋಟಿ ಒದಗಿಸಿದೆ.

Question 7

7. ನವದೆಹಲಿಯ ಗ್ರೀನ್ಟೆಕ್ ಫೌಂಡೇಷನ್ ನೀಡುವ 2016ನೇ ಸಾಲಿನ ಪರಿಸರ ಪ್ರಶಸ್ತಿ ರಾಜ್ಯದ ಈ ಕೆಳಗಿನ ಯಾವ ಸಂಸ್ಥೆಗೆ ಲಭಿಸಿದೆ?

A
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
B
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
C
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
D
ಕರ್ನಾಟಕ ವಿದ್ಯುತ್ಚಕ್ತಿ ಮಂಡಳಿ
Question 7 Explanation: 
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ

ನವದೆಹಲಿಯ ಗ್ರೀನ್ಟೆಕ್ ಫೌಂಡೇಷನ್ ನೀಡುವ 2016ನೇ ಸಾಲಿನ ಪರಿಸರ ಪ್ರಶಸ್ತಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್)ಗೆ ಲಭಿಸಿದೆ. ಫೆಬ್ರುವರಿ 1ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಲುವೆಗಳ ಬದಿ, ಪುನರ್ವಸತಿ ಕೇಂದ್ರ ಸೇರಿದಂತೆ ವಿವಿಧೆಡೆ 55.75 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದು, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನೀರಿನ ಸದ್ಬಳಕೆಗಾಗಿ 1.92 ಲಕ್ಷ ಎಕರೆ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿಸಿರುವ ಸಲುವಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Question 8

8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ) ಚಾಮರಾಜನಗರ ಜಿಲ್ಲೆಯ ಕನಕಗಿರಿ ರಾಜ್ಯದ ಏಕೈಕ ಪ್ರಾಚೀನ ಸಿದ್ದ ಕ್ಷೇತ್ರವಾಗಿದೆ

ಆ) ಶ್ರವಣಬೆಳಗೊಳ, ಧರ್ಮಸ್ಥಳ, ಕಾರ್ಕಳ ನಂತರ ಬಾಹುಬಲಿ ಮೂರ್ತಿಯನ್ನು ಹೊಂದಿರುವ ನಾಲ್ಕನೇ ಸ್ಥಳ ಕನಕಗಿರಿ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 8 Explanation: 
ಎರಡು ಹೇಳಿಕೆ ಸರಿ

ಕನಕಗಿರಿಯು ಕರ್ನಾಟಕದ ಏಕೈಕ ಪ್ರಾಚೀನ ಸಿದ್ಧ ಕ್ಷೇತ್ರ. ಜಿನಸಿದ್ಧರು ನೆಲೆಸಿದ್ದ ತಪೋಭೂಮಿಯಾಗಿದೆ. ಇತ್ತೀಚೆಗೆ ಈ ಶ್ರೀಕ್ಷೇತ್ರದಲ್ಲಿ 18 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಬಿಡದಿಯ ಶಿಲ್ಪಿ ಅಶೋಕ್ ಗುಡಿಗಾರ್ ಅವರು ಈ ಬಾಹುಬಲಿ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ.

Question 9

9. ಇತ್ತೀಚೆಗೆ ನಿಧನರಾದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್.ಪೆರುಮಾಳ್ ರವರು ಈ ಕೆಳಗಿನ ಯಾವ ಪುಸ್ತಕಗಳನ್ನು ಬರೆದಿದ್ದಾರೆ?

I) ಎನ್ಕೌಂಟರ್ ಇನ್ ದಿ ಫಾರೆಸ್ಟ್

II) ಪೋಟೊಗ್ರಾಫಿಂಗ್ ವೈಲ್ಡ್ಲೈಫ್ ಇನ್ ಇಂಡಿಯಾ

III) ಸಮ್ ಸೌತ್ ಇಂಡಿಯನ್ ಬಟರ್ ಫ್ಲೈಸ್

IV) ಕ್ರೆಮಿನಿಸೆನ್ಸಸ್ ಆಫ್ ವೈಲ್ಡ್ಲೈಫ್ ಪೋಟೊಗ್ರಾಫರ್

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
I & II
B
II & III
C
I, II & III
D
I, II, III & IV
Question 9 Explanation: 
I, II, III & IV

ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್.ಎ.ಪೆರುಮಾಳ್ ನಿಧನರಾದರು. ಕರ್ನಾಟಕದಲ್ಲಿ ವನ್ಯಜೀವಿ ಛಾಯಾಗ್ರಾಹಣಕ್ಕೆ ಭದ್ರ ಬುನಾದಿ ಹಾಕಿದ ಹಿರಿಯ ತಲೆಮಾರಿನ ಛಾಯಾಗ್ರಾಹಕರಲ್ಲಿ ಅವರು ಪ್ರಸಿದ್ಧರು. 1955ರಲ್ಲಿ ಫೋಟೊಗ್ರಫಿ ಶುರು ಮಾಡಿದ ಪೆರುಮಾಳ್ ಅವರು ಬೆಂಗಳೂರು ಕಂಡ ಹಿರಿಯ ಹವ್ಯಾಸಿ ಛಾಯಾಗ್ರಾಹಕರು. ಪೆರುಮಾಳ್ ರವರು ಈ ಮೇಲಿನ ಪುಸ್ತಕಗಳು ಸೇರಿದಂತೆ ಗೈಡ್ ಟು ಇಂಡಿಯನ್ ಇನ್ಸೆಕ್ಟ್ಸ್ ಅಂಡ್ ಆರ್ಕಿಡ್ಸ್ , ದ ಡಯೋನ್ ಆಫ್ ನೇಚರ್ ಫೋಟೊಗ್ರಾಫರ್ ಮತ್ತು ಎಂ.ವೈ ಘೋರ್ಪಡೆ ಜತೆ ಸೇರಿ ಸನ್ಲೈಟ್ ಅಂಡ್ ಶ್ಯಾಡೋಸ್ ಪುಸ್ತಕ ಬರೆದಿದ್ದಾರೆ.

Question 10

10. 2017-18 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರೈಲು ಸುರಕ್ಷತೆ ಹಾಗೂ ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ಕರ್ನಾಟಕಕ್ಕೆ ಎಷ್ಟು ಅನುದಾನ ಘೋಷಿಸಲಾಗಿದೆ?

A
ರೂ 724.26 ಕೋಟಿ
B
ರೂ 850.45 ಕೋಟಿ
C
ರೂ 919.66 ಕೋಟಿ
D
ರೂ 1000 ಕೋಟಿ
Question 10 Explanation: 
ರೂ 724.26 ಕೋಟಿ

2017-18 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರೈಲು ಸುರಕ್ಷತೆ ಹಾಗೂ ರೈಲು ಮಾರ್ಗಗಳ ವಿದ್ಯುದೀಕರಣದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಅನುದಾನ ಘೋಷಿಸಲಾಗಿದೆ. ದಕ್ಷಿಣ ರೈಲ್ವೆ ವಲಯಕ್ಕೆ ಬಜೆಟ್ ನಲ್ಲಿ ಘೋಷಿಸಲಾಗಿರುವ ಅಂಶಗಳ ಬಗ್ಗೆ ಫೆ.3 ರಂದು ಸಂಸತ್ ನಲ್ಲಿ ಬಿಡುಗಡೆಯಾಗಿರುವ ಪಿಂಕ್ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದ್ದು, ರಾಷ್ಟ್ರೀಯ ರೈಲು ಸಂರಕ್ಷ ಕೋಶದ ಅಡಿಯಲ್ಲಿ ಒಟ್ಟಾರೆ ಘೋಷಿಸಲಾಗಿರುವ 3,174 ಕೋಟಿ ರೂಪಾಯಿಯ ಪೈಕಿ, ಕರ್ನಾಟಕಕ್ಕೆ 724.26 ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. 2016-17 ರ ರೈಲ್ವೆ ಬಜೆಟ್ ನಲ್ಲಿ ರೈಲು ಸುರಕ್ಷತೆಗೆ 445.15 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿತ್ತು.

There are 10 questions to complete.

[button link=”http://www.karunaduexams.com/wp-content/uploads/2017/02/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-27.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -27”

  1. Prakash B G

    It is very useful for competitive exams ,thanks

  2. LIMBANNA PUJARI

    Super

Leave a Reply to Sangappa Cancel reply

This site uses Akismet to reduce spam. Learn how your comment data is processed.