ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -26

Question 1

1. ಕರ್ನಾಟಕದ ದೇಸಿ ಕ್ರೀಡೆ “ಕಂಬಳಕ್ಕೆ” ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಕಂಬಳದ ಬಗ್ಗೆ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಉಲ್ಲೇಖಿಸಲಾಗಿದೆ

II) ಕಂಬಳವನ್ನು ಸಾಮಾನ್ಯವಾಗಿ ಮೇ-ಜೂನ್ ತಿಂಗಳಲ್ಲಿ ನಡೆಸಲಾಗುತ್ತದೆ

III) ಕಂಬಳದಲ್ಲಿ ಒಂಟಿಗದ್ದೆಯ ಕಂಬಳ ಮತ್ತು ಜೋಡುಕೆರೆ ಕಂಬಳ ಎಂಬ ಎರಡು ಬಗೆಗಳಿವೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳನ್ನು ಸರಿಯಾಗಿವೆ?

A
I & II
B
I & III
C
II & III
D
I, II & III
Question 1 Explanation: 
I & III

ಹೇಳಿಕೆ ಒಂದು ಮತ್ತು ಮೂರು ಮಾತ್ರ ಸರಿ. ಕರ್ನಾಟಕದ ಕರಾವಳಿಯಲ್ಲಿ ಆಚರಿಸುವ ಕಂಬಳಕ್ಕೆ ಸುಮಾರು 800-900 ವರ್ಷಗಳ ಹಿನ್ನೆಲೆ ಇದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಶಾಸನದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. ಇದರ ಕಾಲ ಕ್ರಿ. ಶ.1200 ಆಗಿದ್ದು ಕಂಬಳ ಕನಿಷ್ಠ 800 ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕಂಬಳವನ್ನು ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಅಂದರೆ ನವೆಂಬರ್ ಅಸುಪಾಸಿನಿಂದ ಮಾರ್ಚ್ ವರೆಗೂ ಆಚರಿಸಲಾಗುತ್ತದೆ. ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ.

Question 2

2. ಇತ್ತೀಚೆಗೆ “ಗಿಳಿವಿಂಡು” ಹೆಸರಿನ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಲಾಯಿತು. ಈ ಸ್ಮಾರಕ ಭವನ ಯಾವ ಪ್ರಸಿದ್ದ ಸಾಹಿತಿಗೆ ಸಂಬಂಧಿಸಿದೆ?

A
ಗೋವಿಂದ ಪೈ
B
ದೇಜೆಗೌ
C
ದ.ರಾ.ಬೇಂದ್ರೆ
D
ಕುವೆಂಪು
Question 2 Explanation: 
ಗೋವಿಂದ ಪೈ

ಕನ್ನಡದ ಮೊದಲ ರಾಷ್ಟ್ರಕವಿ ಮಹಾನ್ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ವನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಲೋಕಾರ್ಪಣೆ ಮಾಡಿದರು. ರಾಷ್ಟ್ರಕವಿ ಗೋವಿಂದ ಪೈ ಅವರ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ದಲ್ಲಿ ಕರ್ನಾಟಕ,ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ, ಸಹಯೋಗದೊಂದಿಗೆ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

Question 3

3. ಈ ಕೆಳಗಿನ ಯಾವ ಬುಡಕಟ್ಟು ಜನಾಂಗದದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಿಗೆ ಸ್ಟೈಫಂಡ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ?

A
ಕೊರಗ ಮತ್ತು ಜೇನುಕುರುಬ
B
ಹಕ್ಕಿಪಿಕ್ಕಿ ಮತ್ತು ಕೊರಗ
C
ಸೋಲಿಗ ಮತ್ತು ಜೇನುಕುರುಬ
D
ಹಕ್ಕಿಪಿಕ್ಕಿ ಮತ್ತು ಜಂಗಾಲಿ
Question 3 Explanation: 
ಕೊರಗ ಮತ್ತು ಜೇನುಕುರುಬ

ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮತ್ತು ಜೇನುಕುರುಬ ಜನಾಂಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಿಗೆ ಸ್ಟೈಪೆಂಡ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಫೆ.1ರಂದು ನಡೆಯಲಿರುವ ಆದಿವಾಸಿಗಳಿಗೆ ಸವಲತ್ತು ವಿತರಣೆ ಕುರಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಎರಡೂ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕೊರಗ ಮತ್ತು ಜೇನುಕುರುಬ ಜನಾಂಗವನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಅವರಿಗೆ ಸ್ಟೈಪೆಂಡ್ ವಿತರಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದವರಿಗೆ ಮಾಸಿಕ ಎರಡು ಸಾವಿರ ರೂ., ಪಿಯು ಪೂರ್ಣಗೊಳಿಸಿದವರಿಗೆ 2,500 ರೂ., ಪದವಿ ಮುಗಿಸಿದವರಿಗೆ 3,500 ರೂ. ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ 4500 ರೂ. ಸ್ಟೈಪಂಡ್ ನೀಡಲಾಗುವುದು.

Question 4

4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ) ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪ್ರಾಸಾಂಗಿಕ ವೆಚ್ಚ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 1ಲಕ್ಷ ರೂ.ನೀಡಲು ರಾಜ್ಯ ಸರ್ಕಾರ 'ಅಭಯ ನಿಧಿ'ಯನ್ನು ಸ್ಥಾಪಿಸಿದೆ.

ಆ)ಅನಾಥ ಮಕ್ಕಳನ್ನು ಸ್ವೀಕರಿಸಲು ಆಸ್ಪತ್ರೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ತೊಟ್ಟಿಲುಗಳನ್ನು ಇರಿಸಲು” ಮಮತೆಯ ತೊಟ್ಟಿಲು” ಆರಂಭಿಸಲಾಗಿದೆ.

ಮೇಲಿನ ಯಾವ ಹೇಳಿಕೆ ಸರಿಯಾಗಿದೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 4 Explanation: 
ಎರಡು ಹೇಳಿಕೆ ಸರಿ

ಬಾಲನ್ಯಾಯ ಕಾಯ್ದೆ ಆಶಯದಂತೆ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪ್ರಾಸಾಂಗಿಕ ವೆಚ್ಚ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 1ಲಕ್ಷ ರೂ.ನೀಡಲು 'ಅಭಯ ನಿಧಿ'ಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ಅನಾಥ ಮಕ್ಕಳನ್ನು ಸ್ವೀಕರಿಸಲು ಆಸ್ಪತ್ರೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ತೊಟ್ಟಿಲುಗಳನ್ನು ಇರಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಇದಕ್ಕೆ ಮಮತೆಯ ತೊಟ್ಟಿಲು ಎಂದು ಹೆಸರಿಡಲಾಗಿದೆ.

Question 5

5. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

I) ದೇಶದ ಮೂರು ಕಚ್ಚಾ ತೈಲ ಸಂಗ್ರಹಾಗಾರಗಳ ಪೈಕಿ ಎರಡು ರಾಜ್ಯದ ಮಂಗಳೂರು ಮತ್ತು ಪಡೂರಿನಲ್ಲಿವೆ

II) ಕಚ್ಚಾತೈಲ ಸಂಗ್ರಹ ಸಾಮರ್ಥ್ಯದಲ್ಲಿ ಪಡೂರು ಸಂಗ್ರಹಾಗಾರ ಮಂಗಳೂರಿಗಿಂತ ದೊಡ್ಡದು

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪ
Question 5 Explanation: 
ಎರಡು ಹೇಳಿಕೆ ಸರಿ

ದೇಶದಲ್ಲಿ ಒಟ್ಟು ಮೂರು ತೈಲ ಸಂಗ್ರಹಾಗಾರಗಳಿವೆ. ಅವುಗಳೆಂದರೆ ವಿಶಾಖಪಟ್ಟಣ, ಮಂಗಳೂರು ಮತ್ತು ಪಡೂರು. ಮಂಗಳೂರು ತೈಲ ಸಂಗ್ರಹಾರದ ಸಾಮರ್ಥ್ಯ 10.95 ಮಿಲಿಯನ್ ಬ್ಯಾರೆಲ್ ಆದರೆ ಪಡೂರಿನ ತೈಲ ಸಂಗ್ರಹಾಗಾರದ ಸಾಮರ್ಥ್ಯ 18.7 ಮಿಲಿಯನ್ ಬ್ಯಾರೆಲ್. ಕೇಂದ್ರ ಸರ್ಕಾರ ಇತ್ತೀಚೆಗೆ ಓಡಿಶಾ ಮತ್ತು ರಾಜಸ್ತಾನದ ಬಿಕನೇರ್ ನಲ್ಲೂ ತೈಲ ಸಂಗ್ರಹಾಗಾರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

Question 6

6. ಈ ಮುಂದಿನ ಯಾರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?

A
ಆರ್ ಕೆ ದತ್ತಾ
B
ಸುಭಾಷ್ ಯಾದವ್
C
ರಮೇಶ್ ಭಾನೋಟ್
D
ವಿಮಲಾ ಚಂದ್ರಶೇಖರ್
Question 6 Explanation: 
ಆರ್ ಕೆ ದತ್ತಾ

ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಜನವರಿ 31ರಂದು ಹಾಲಿ ಡಿಜಿ-ಐಜಿಪಿ ಓಂ ಪ್ರಕಾಶ್ ಅವರು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಆರ್ ಕೆ ದತ್ತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದತ್ತಾ ರವರು 1981ರ ಬ್ಯಾಚ್ ನ ಐಪಿಎಸ್ ಅಧಿಕಾರಿ.

Question 7

7. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ 2017ನೇ ಸಾಲಿನ 'ಅಂಬಿಕಾತನಯದತ್ತ' ರಾಷ್ಟ್ರೀಯ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಹಂಪ ನಾಗರಾಜಯ್ಯ
B
ಡಾ. ಕೆ. ವಿ. ನಾರಾಯಣ
C
ದೇವನೂರ ಮಹಾದೇವ
D
ಕುಂ. ವೀರಭದ್ರಯ್ಯ
Question 7 Explanation: 
ಡಾ. ಕೆ. ವಿ. ನಾರಾಯಣ:

ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ 2017ನೇ ಸಾಲಿನ 'ಅಂಬಿಕಾತನಯದತ್ತ' ರಾಷ್ಟ್ರೀಯ ಪ್ರಶಸ್ತಿಗೆ ಭಾಷಾ ತಜ್ಞ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ನಾರಾಯಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಇದೇ 31ರಂದು ನಡೆಯುವ ಬೇಂದ್ರೆ ಅವರ 122ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕವಿ ಚನ್ನವೀರ ಕಣವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Question 8

8. ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?

A
ನ್ಯಾ. ಸುರೇಂದ್ರ ಮೂರ್ತಿ
B
ನ್ಯಾ. ಗೋಪಾಲ ಗೌಡ
C
ನ್ಯಾ. ವಿಶ್ವನಾಥ ಶೆಟ್ಟಿ
D
ನ್ಯಾ. ವಿಕ್ರಮ್ ಸಿಂಗ್
Question 8 Explanation: 
ನ್ಯಾ. ವಿಶ್ವನಾಥ ಶೆಟ್ಟಿ

ರಾಜ್ಯದ ನೂತನ ಲೋಕಾಯುಕ್ತರಾಗಿ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಲೋಕಾಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು.

Question 9

9. 2017ನೇ ಸಾಲಿನ ಪದ್ಮಶ್ರಿ ಪ್ರಶಸ್ತಿ ಕರ್ನಾಟಕದ ಎಷ್ಟು ಮಂದಿ ಸಾಧಕರಿಗೆ ಲಭಿಸಿದೆ?

A
ನಾಲ್ಕು
B
ಐದು
C
ಎಂಟು
D
ಹತ್ತು
Question 9 Explanation: 
ಎಂಟು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಎಂಟು ಮಂದಿ ಸೇರಿದಂತೆ ವಿವಿಧ ರಾಜ್ಯಗಳ 89 ಸಾಧಕರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪುರಸ್ಕಾರಕ್ಕೆ ಈ ವರ್ಷ (2017) ಭಾಜನರಾಗಿದ್ದಾರೆ. ಭಾಷಾ ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ (ಸಾಹಿತ್ಯ ಮತ್ತು ಶಿಕ್ಷಣ), ನಟಿ ಭಾರತಿ ವಿಷ್ಣುವರ್ಧನ್ (ಕಲೆ-ಸಿನಿಮಾ), ಜನಪದ ಗಾಯಕಿ ಸುಕ್ರಿ ಬೊಮ್ಮುಗೌಡ (ಕಲೆ-ಸಂಗೀತ), ಸಂಸ್ಕೃತ ಭಾರತಿಯ ಚ.ಮೂ. ಕೃಷ್ಣ ಶಾಸ್ತ್ರಿ (ಸಾಹಿತ್ಯ ಮತ್ತು ಶಿಕ್ಷಣ), ತೂಗು ಸೇತುವೆ ತಜ್ಞ ಗಿರೀಶ್ ಭಾರದ್ವಾಜ್ (ಸಮಾಜ ಸೇವೆ), ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ (ಕ್ರೀಡೆ) ಮತ್ತು ಅಥ್ಲೀಟ್ ವಿಕಾಸ ಗೌಡ (ಕ್ರೀಡೆ-ಡಿಸ್ಕಸ್ ಥ್ರೋ) ಅವರು ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

Question 10

10. ಈ ಕೆಳಗಿನವುಗಳಲ್ಲಿ ಬೆಂಗಳೂರಿನ ಮೊದಲ ಬಡಾವಣೆ ಯಾವುದು?

A
ಜಯನಗರ
B
ಚಾಮರಾಜಪೇಟೆ
C
ಮಲ್ಲೇಶ್ವರಂ
D
ಬಸವನಗುಡಿ
Question 10 Explanation: 
ಚಾಮರಾಜಪೇಟೆ

ಬೆಂಗಳೂರಿನ ಮೊದಲ ಬಡಾವಣೆ ಚಾಮರಾಜಪೇಟೆಗೆ 125 ವರ್ಷಗಳ ಸಂಭ್ರಮದಲ್ಲಿದೆ. 1892ರಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರು ಪ್ರಥಮ ಬಾರಿಗೆ ಚಾಮರಾಜಪೇಟೆ ನಿರ್ಮಾಣಕ್ಕೆ ಅಂಕಿತ ಹಾಡಿದರು. ಈ ಬಡಾವಣೆಯನ್ನು ಚದುರಂಗದ ಆಕಾರದಲ್ಲಿ ನಿರ್ಮಿಸಿರುವುದು ವಿಶೇಷ. ಇದು 30 ಅಡಿ ಅಗಲ ಹಾಗೂ 108 ಉದ್ದದ 6 ಪ್ರಮುಖ ರಸ್ತೆಗಳು, 9 ಕ್ರಾಸ್ಗಳನ್ನು ಒಳಗೊಂಡಿದೆ. ಪ್ರತಿ ಮುಖ್ಯರಸ್ತೆಗಳ ಹಿಂಭಾಗದಲ್ಲೂ ಸುರಕ್ಷಿತವಾದ ಪಂಕ್ತಿಗಳಿವೆ.

There are 10 questions to complete.

[button link=”http://www.karunaduexams.com/wp-content/uploads/2017/02/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-26.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -26”

Leave a Comment

This site uses Akismet to reduce spam. Learn how your comment data is processed.