some_2017 ಕೆಎಎಸ್ ಹಾಗೂ ಐಎಎಸ್ ವಿಷಯ ತಜ್ಞರು ಹಾಗೂ ‘ಬುತ್ತಿ ಪತ್ರಿಕೆ’ ಸಂಪಾದಕರಾಗಿರುವ ವಿನೋದ್ ಕಡಕೋಳ ಅವರು ಸಿದ್ಧಪಡಿಸುವ ಇಯರ್ ಬುಕ್ – 2017 ಇದೀಗ ಬಿಡುಗಡೆಗೊಂಡಿದೆ.
ಈ ಪುಸ್ತಕವು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳು,  ಕ್ರೀಡಾವಿಷಯಗಳ ಮಾಹಿತಿಯನ್ನು ಒಳಗೊಂಡಿದೆ. ಕಳೆದ ವರ್ಷ ಘೋಷಿಸಿದ ಪುರಸ್ಕಾರಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.
ಭಾರತದ ಇತಿಹಾಸ,  ಭಾರತದ ಸ್ವಾತಂತ್ರ್ಯ ಹೋರಾಟ,  ಭಾರತದ ಸಂವಿಧಾನ,  ಪ್ರಪಂಚದ ಭೂಗೋಳ,  ಭಾರತದ ಭೂಗೋಳ, ಸಾಮಾನ್ಯ ವಿಜ್ಞಾನ,  ಭಾರತದ ಆರ್ಥಿಕತೆ ಬಗ್ಗೆ ಮಾಹಿತಿ ನೀಡಲಾಗಿದೆ.
ಭಾರತ,  ವಿಶ್ವದ ಕುರಿತಾದ ಸಾಮಾನ್ಯ ಜ್ಞಾನ, ಬೇರೆ ಬೇರೆ ಕ್ಷೇತ್ರಗಳಲ್ಲಿ ಟಾಪ್ ಟೆನ್ ದೇಶಗಳ ಮಾಹಿತಿ,  ಕ್ರೀಡಾ ಜಗತ್ತಿನ ದಾಖಲೆಗಳು,  ಮೆಂಟಲ್ ಎಬಿಲಿಟಿಯ ಪ್ರಶ್ನೆಗಳನ್ನು ವಿವರಣೆಯ ಜತೆಗೆ ನೀಡಲಾಗಿದೆ.
ಈ ಪುಸ್ತಕ 576 ಪುಟಗಳನ್ನು ಹೊಂದಿದ್ದು, ಬೆಲೆ 450 ರೂ. ಉತ್ತಮ ಗುಣಮಟ್ಟದ ಕಾಗದದಲ್ಲಿ ಸುಂದರ ಮುದ್ರಣದೊಂದಿಗೆ ಬಂದ ಈ ಪುಸ್ತಕ ಮುಂಬರುವ ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗುವ ಅಭ್ಯರ್ಥಿಗಳಿಗೆ ಸಂಗ್ರಾಹ್ಯ ಪುಸ್ತಕ.
ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok G.C (7795680405) ಅವರಿಗೆ ನಿಮ್ಮ ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.

Leave a Comment

This site uses Akismet to reduce spam. Learn how your comment data is processed.