Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಭಾರತೀಯ ರೈಲ್ವೆಯಿಂದ “ಐಆರ್ಸಿಟಿಸಿ ರೈಲ್ ಕನೆಕ್ಟ್ ಆ್ಯಪ್” ಬಿಡುಗಡೆ

irtc_upಡಿಜಿಟಲ್ ವ್ಯವಸ್ಥೆ ಮೂಲಕ ರೈಲು ಟಿಕೆಟ್ ಪಡೆಯುವುದನ್ನು ಸುಲಭವಾಗಿಸಲು  ಭಾರತೀಯ ರೈಲ್ವೆ “ಐಆರ್ಸಿಟಿಸಿ ರೈಲು ಕನೆಕ್ಟ್ ಆ್ಯಪ್” ಅನ್ನು ಅಭಿವೃದ್ದಿಪಡಿಸಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ರವರು ಈ ಆ್ಯಪ್ ಗೆ ಚಾಲನೆ ನೀಡಿದರು. ಪ್ರಸ್ತುತ ಇರುವ ಐಆರ್ಸಿಟಿಸಿ ಕನೆಕ್ಟ್ ಆ್ಯಪ್ ಬದಲಾಗಿ ಮೊಬೈಲ್ ಆಧರಿತ ಈ ಹೊಸ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದೆ. ರೈಲು ಟಿಕೆಟ್ ಬುಕ್ಕಿಂಗ್ ವಿಧಾನವನ್ನು ಸುಲಭಗೊಳಿಸಿ ಬಳಕೆದಾರ ಸ್ನೇಹಿಯನ್ನಾಗಿಸಲು ಇದನ್ನು ಅಭಿವೃದ್ದಿಪಡಿಸಲಾಗಿದೆ.

ಪ್ರಮುಖಾಂಶಗಳು:

  • ಮುಂದಿನ ತಲೆಮಾರಿನ ಇ-ಟಿಕೆಟಿಂಗ್ ವ್ಯವಸ್ಥೆಯಲ್ಲಿ ದಕ್ಷತೆ ಹಾಗೂ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಆ್ಯಪ್ ಅನ್ನು ಅಭಿವೃದ್ದಿಪಡಿಸಲಾಗಿದೆ.
  • ಇದೊಂದು ಪ್ರಯಾಣಿಕರ ಸ್ನೇಹಿ ಆ್ಯಪ್ ಆಗಿದ್ದು, ಸಾಮಾನ್ಯ, ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಕೋಟದಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.
  • ಈ ಆ್ಯಪ್ ನಲ್ಲಿ ಸುಮಾರು 40 ಹೆಚ್ಚು ಬ್ಯಾಂಕ್ ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.