ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -25

Question 1

1. ರಾಜ್ಯ ಸರ್ಕಾರ ಇತ್ತೀಚೆಗೆ ಸೌರವಿದ್ಯುತ್ ನೀತಿ 2014- 2021'ಕ್ಕೆ ತಂದಿರುವ ತಿದ್ದುಪಡಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

ಅ) ಈ ನೀತಿಯಡಿ 2021ರ ವೇಳೆಗೆ 6 ಸಾವಿರ ಮೆಗಾವಾಟ್ ಸೌರವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಆ) ಹೊಲಗದ್ದೆಗಳಲ್ಲಿ ಸೌರವಿದ್ಯುತ್ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹವನ್ನು ನೀಡಲಾಗುವುದು

ಇ) ಸೌರವಿದ್ಯುತ್ ಕ್ಷೇತ್ರದ ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ಸಂಶೋಧನೆ ಪ್ರೋತ್ಸಾಹಿಸಲು 'ಸೋಲಾರ್ ಎನರ್ಜಿ ಸೆಂಟರ್ ಆಫ್ ಎಕ್ಸಲೆನ್ಸ್ ಅಂಡ್ ಇನ್ಕ್ಯುಬೇಶನ್ ಸೆಂಟರ್' ಸ್ಥಾಪಿಸಲಾಗವುದು.

ಮೇಲಿನ ಯಾವ ಹೇಳಿಕೆ/ಹೇಳಿಕೆ ಸರಿಯಾಗಿದೆ?

A
I & II
B
II & III
C
I & III
D
I, II & III
Question 1 Explanation: 
I & III

ಹೇಳಿಕೆ ಒಂದು ಮತ್ತು ಮೂರು ಸರಿಯಾಗಿದೆ. ಹೇಳಿಕೆ ಮೂರು ತಪ್ಪಾಗಿದೆ ಏಕೆಂದರೆ ಹೊಲಗದ್ದೆಗಳಲ್ಲಿ ಸೌರವಿದ್ಯುತ್ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಕೈಬಿಡಲಾಗಿದೆ.

Question 2

2. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

I) ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಇತ್ತೀಚೆಗೆ ಸುವರ್ಣಮಹೋತ್ಸವನ್ನು ಆಚರಿಸಿಕೊಂಡಿತು

II) ಐಐಎಚ್ಆರ್ ದೇಶದ ಮೊದಲ ತೋಟಗಾರಿಕೆ ಸಂಶೋಧನಾ ಸಂಸ್ಥೆ

III) ಐಐಎಚ್ಆರ್ ಬೆಂಗಳೂರಿನ ಹೆಸರಘಟ್ಟದ ಬಳಿಯಿದೆ

ಸರಿಯಾದ ಉತ್ತರವನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
I & II
B
II & III
C
I & III
D
I, II & III
Question 2 Explanation: 
I, II & III:

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಇತ್ತೀಚೆಗೆ ಸುವರ್ಣಮಹೋತ್ಸವನ್ನು ಆಚರಿಸಿಕೊಂಡಿತು. ಐಐಎಚ್ಆರ್ ಅನ್ನು ಸೆಪ್ಟೆಂಬರ್ 1967ರಲ್ಲಿ ಸ್ಥಾಪಿಸಲಾಗಿದೆ. ಮೊದಲು ಇದನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗಿತ್ತು, ನಂತರ ಬೆಂಗಳೂರಿಗೆ ವರ್ಗಾಯಿಸಲಾಯಿತು. ಐಐಎಚ್ಆರ್ ಪ್ರಸ್ತುತ ಬೆಂಗಳೂರಿನ ಹೆಸರಘಟ್ಟದಲ್ಲಿದೆ.

Question 3

3. ಗ್ರೀನ್ ಪೀಸ್ ಎನ್ಜಿಓ ಸಮೀಕ್ಷೆ ಪ್ರಕಾರ ಕರ್ನಾಟಕದ ಮೊದಲ ಮೂರು ಅತ್ಯಂತ ಕಲುಷಿತ ನಗರಗಳು ಯಾವುವು?

A
ಬೆಂಗಳೂರು, ಧಾರವಾಡ, ತುಮಕೂರು
B
ತುಮಕೂರು, ರಾಯಚೂರು, ಬೀದರ್
C
ಬೆಂಗಳೂರು, ತುಮಕೂರು, ದಾವಣಗೆರೆ
D
ಹಾಸನ, ಚಿಕ್ಕಮಗಳೂರು, ತುಮಕೂರು
Question 3 Explanation: 
ಬೆಂಗಳೂರು, ತುಮಕೂರು, ದಾವಣಗೆರೆ

ಬೆಂಗಳೂರು ತುಮಕೂರು ಮತ್ತು ದಾವಣಗೆರೆ ರಾಜ್ಯದ ಅತ್ಯಂತ ಕಲುಷಿತ ನಗರಗಳಾಗಿವೆ ಎಂದು ಇತ್ತೀಚೆಗೆ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ. ರಾಜ್ಯದ 20 ನಗರಗಳ ವಾಯುಮಾಲಿನ್ಯ ದತ್ತಾಂಶಗಳನ್ನು ಹೋಲಿಕೆ ಮಾಡಿದ್ದು ಬೆಂಗಳೂರು, ತುಮಕೂರು ಮತ್ತು ದಾವಣಗೆರೆ ಅತ್ಯಂತ ಕಲುಷಿತ ನಗರಗಳೆಂದು ಘೋಷಿಸಲ್ಪಟ್ಟಿದೆ. ರಾಯಚೂರು, ಕಲಬುರ್ಗಿ, ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ವಾಯುಮಾಲಿನ್ಯ ಮಟ್ಟ ಕೂಡಾ ರಾಷ್ಟ್ರೀಯ ಸರಾಸರಿಗಿಂತ ಮಿಗಿಲಾಗಿದೆ. ಗ್ರೀನ್ಪೀಸ್ ಎಂಬ ಎನ್ಜಿಒ ಸಂಸ್ಥೆ 24 ರಾಜ್ಯಗಳ 168 ನಗರಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿತ್ತು. ಉತ್ತರ ಭಾಗದ ನಗರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಭಾಗದ ನಗರಗಳ ಲ್ಲಿ ಸ್ವಚ್ಛವಾದ ಗಾಳಿಯ ಪ್ರಮಾಣ ಹೆಚ್ಚಿದೆ ಎಂದು ವರದಿ ತಿಳಿಸಿದೆ. ಪಿಎಂ-10 (10 ಮೈಕ್ರಾನ್ ಡಯಾಮೀಟರ್ ಪ್ರಮಾಣದ ದೂಳಿನ ಕಣ) ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ.

Question 4

4. ಜೋನ್ಸ್ ಲ್ಯಾಂಗ್ ಲಾಸೆಲ್ಲೆ(ಜೆಎಲ್ಎಲ್) ರಿಯಲ್ ಎಸ್ಟೇಟ್ ಸಂಸ್ಥೆಯ ವಾರ್ಷಿಕ ಸಿಟಿ ಮೂಮೆಂಟಂ ಇಂಡೆಕ್ಸ್ ನಲ್ಲಿ ವಿಶ್ವದ ಡೈನಾಮಿಕ್ ನಗರಗಳ ಪೈಕಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?

A
ಒಂದು
B
ಎರಡು
C
ಮೂರು
D
ನಾಲ್ಕು
Question 4 Explanation: 
ಒಂದು:

ವಿಶ್ವದ 10 ಡೈನಮಿಕ್ ನಗರಗಳ ಪಟ್ಟಿಯಲ್ಲಿ ಉದ್ಯಾನ ನಗರಿ ಮೊದಲ ಸ್ಥಾನ ಪಡೆದುಕೊಂಡಿದೆ.ಜೋನ್ಸ್ ಲ್ಯಾಂಗ್ ಲಾಸೆಲ್ಲೆ(ಜೆಎಲ್ಎಲ್) ರಿಯಲ್ ಎಸ್ಟೇಟ್ ಸಂಸ್ಥೆ ನಡೆಸಿದ ವಾರ್ಷಿಕ ಸಿಟಿ ಮೂಮೆಂಟಂ ಇಂಡೆಕ್ಸ್ ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೊದಲ ಸ್ಥಾನ ಪಡೆದರೆ, ವಿಯೇಟ್ನಾಂನ ಹೋ ಚಿ ಮಿನ್ನ್ ಸಿಟಿ, ಅಮೆರಿಕದ ಸಿಲಿಕಾನ್ ವ್ಯಾಲಿ ನಂತರದ ಸ್ಥಾನ ಹಾಗೂ ಹೈದರಾಬಾದ್ ಐದನೇ ಸ್ಥಾನ ಪಡೆದಿದೆ.ಭಾರತದ ಪುಣೆ(13ನೇ ಸ್ಥಾನ), ಚೆನ್ನೈ(17)ನೇ ಸ್ಥಾನ ಮುಂಬೈ(25ನೇ ಸ್ಥಾನ) ಹಾಗೂ ದೆಹಲಿ(23ನೇ ಸ್ಥಾನ) ಸ್ಥಾನ ಪಡೆದಿವೆ.

Question 5

5. ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಅನಿವಾಸಿ ಕನ್ನಡಿಗರಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಯಾವ ಯೋಜನೆ ಘೋಷಿಸಿದೆ?

A
ನಮ್ಮ ಊರು, ನಮ್ಮ ನಾಡು
B
ನಮ್ಮ ಕರ್ನಾಟಕ
C
ನಮ್ಮ ನೆಲ, ನಮ್ಮ ಉದ್ಯಮ
D
ಕರುನಾಡು, ಉದ್ಯಮ ಬೀಡು
Question 5 Explanation: 
ನಮ್ಮ ಊರು, ನಮ್ಮ ನಾಡು:

14ನೇ ಪ್ರವಾಸಿ ಭಾರತೀಯ ದಿನದಂದು ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ನೀತಿಯನ್ನು ಬಿಡುಗಡೆಗೊಳಿಸಿದೆ. ಈ ನೀತಿಯಡಿ 'ನಮ್ಮ ಊರು, ನಮ್ಮ ನಾಡು’ ಯೋಜನೆ ಆರಂಭ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.. ಇದರಡಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಅನಿವಾಸಿ ಕನ್ನಡಿಗರಿಗೆ ಉತ್ತೇಜನ ನೀಡಲಾಗುವುದು.

Question 6

6. ಇತ್ತೀಚೆಗೆ ಬಿಡುಗಡೆಗೊಂಡ “ಉತ್ತರಕಾಂಡ” ಈ ಕೆಳಗಿನ ಯಾರ ಪುಸ್ತಕವಾಗಿದೆ?

A
ಎಸ್.ಎಲ್.ಭೈರಪ್ಪ
B
ಜಿ.ಎಸ್.ಶಿವರುದ್ರಪ್ಪ
C
ಚಂದ್ರಶೇಖರ ಕಂಬಾರ
D
ಚಂದ್ರಶೇಖರ ಪಾಟೀಲ
Question 6 Explanation: 
ಎಸ್.ಎಲ್.ಭೈರಪ್ಪ:

ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ 'ಉತ್ತರಕಾಂಡ' ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ. ರಾಮಾಯಣದ ಒಂದು ಭಾಗವಾಗಿರುವ 'ಉತ್ತರಕಾಂಡ'ವನ್ನು ಕಾದಂಬರಿ ರೂಪಕ್ಕೆ ಇಳಿಸಿದ್ದಾರೆ ಭೈರಪ್ಪ. ಈ ಹಿಂದೆ ಮಹಾಭಾರತವನ್ನು ಕೂಡ ಕಾದಂಬರಿ ರೂಪದಲ್ಲಿ ಬರೆದಿದ್ದ 'ಪರ್ವ' ಭಾರಿ ಜನಪ್ರಿಯತೆ ಪಡೆದಿತ್ತು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಗಳಿಸಿತ್ತು

Question 7

7. ಕರ್ನಾಟಕ ರಾಜ್ಯದಲ್ಲಿ ಎಷ್ಟು ಜನರಿಗೆ ಒಬ್ಬ ಪೊಲೀಸ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ?

A
760
B
876
C
912
D
458
Question 7 Explanation: 
876:

ಕರ್ನಾಟಕದಲ್ಲಿ ಪ್ರತಿ 876 ಜನರಿಗೆ ಒಬ್ಬ ಪೊಲೀಸ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಪ್ರಕಾರ ಪ್ರತಿ 454 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿಯಿರಬೇಕು. ರಾಜ್ಯದಲ್ಲಿ ಪ್ರತಿ ಪೊಲೀಸ್ ಸಿಬ್ಬಂದಿಗೆ ಮಂಜೂರಾಗಿರುವ ಜನಸಂಖ್ಯೆ: 564 ವಾಸ್ತವವಾಗಿ ಇರುವುದು: 876. ಪ್ರತಿ ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣೆಯ ಪ್ರದೇಶ, ಮಂಜೂರಾಗಿರುವುದು: 1.74 ಚದರ ಕಿಲೋ ಮೀಟರ್ವಾಸ್ತವವಾಗಿ ಇರುವುದು: 2.7 ಚದರ ಕಿಲೋ ಮೀಟರ್.

Question 8

8. ಪ್ರಸ್ತಕ ಸಾಲಿನಿಂದ ರಾಜ್ಯ ಸರ್ಕಾರ ಈ ಕೆಳಗಿನ ಯಾರಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಲು ನಿರ್ಧರಿಸಿದೆ?

A
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ
B
ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ
C
ಸ್ನಾತಕೋತ್ತರ ಪದವಿಗಳಲ್ಲಿ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ
D
ಎಂಜನಿಯರಿಂಗ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ
Question 8 Explanation: 
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ

ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಉಚಿತವಾಗಿ ಲ್ಯಾಪ್ಟಾಪ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ .

Question 9

9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) 2016-17ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಲಭಿಸಿದೆ.

II) ಈ ಪ್ರಶಸ್ತಿಯನ್ನು ಪಡೆಯುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಖ್ಯಾತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾಜನವಾಗಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 9 Explanation: 
ಎರಡು ಹೇಳಿಕೆ ಸರಿ:

2016-17ನೇ ಸಾಲಿನ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಭಾಜನವಾಗಿದೆ. ಕೇಂದ್ರ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ ಆಂಧ್ರಪ್ರದೇಶದ ವಿಶಾಖಪಟ್ಟಣನಲ್ಲಿ ಹಮ್ಮಿಕೊಂಡಿದ್ದ 20ನೇ ರಾಷ್ಟ್ರೀಯ ಇ-ಆಡಳಿತ ಸಮ್ಮೇಳನದಲ್ಲಿ ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಕುಮಾರ್ ಕಟಾರಿಯ ಅವರು ಕೇಂದ್ರ ಸಚಿವ ಪಿಪಿ ಚೌದರಿ ಅವರಿಂದ ಪ್ರಶಸ್ತಿ ಪಡೆದರು. ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪಡೆಯುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಖ್ಯಾತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾಜನವಾಗಿದೆ.

Question 10

10. “ಕಾವ್ಯನಂದ” ಇದು ಯಾವ ಲೇಖಕರ ಕಾವ್ಯನಾಮ ಆಗಿತ್ತು?

A
ಬೆಟ್ಟಗೇರಿ ಕೃಷ್ಣಶರ್ಮ
B
ಸಿದ್ದಯ್ಯ ಪುರಾಣಿಕ
C
ಸಿದ್ದಲಿಂಗ ದೇಸಾಯಿ
D
ಎಸ್ ಎಲ್ ಭೈರಪ್ಪ
Question 10 Explanation: 
ಸಿದ್ದಯ್ಯ ಪುರಾಣಿಕ
There are 10 questions to complete.

[button link=”http://www.karunaduexams.com/wp-content/uploads/2017/01/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-25.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

7 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -25”

  1. Veeresh

    Thanks for it..

  2. Naveen kumara R

    thank you vere much sir,very good questions, usefull to the students

  3. Murali

    Super , Good . Thanks for the publication.

  4. Mohan Kumar D

    Thanks

  5. shrikanth.G

    Super. .
    Thank you. …

Leave a Comment

This site uses Akismet to reduce spam. Learn how your comment data is processed.