ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,4, 2017

Question 1

1. 2017ನ್ನು ‘ಇಂಟರ್ ನ್ಯಾಷನಲ್ ಇಯರ್ ಆಫ್ ಸಸ್ಟೈನಬಲ್ ಟೂರಿಸಂ ಫಾರ್ ಡೆವಲಪ್ ಮೆಂಟ್’ ವರ್ಷವೆಂದು ಯಾವ ಅಂತರರಾಷ್ಟ್ರೀಯ ಸಂಸ್ಥೆ ಘೋಷಿಸಿದೆ?

A
ಯುನೈಟೆಡ್ ನೇಷನ್
B
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್
C
ವರ್ಲ್ಡ್ ಟ್ರೇಡ್ ಆರ್ಗನೈಸೇಷನ್
D
ಇಂಟರ್ ನ್ಯಾಷನಲ್ ಮಾನಿಟರಿ ಫಂಡ್
Question 1 Explanation: 
ಯುನೈಟೆಡ್ ನೇಷನ್

ವಿಶ್ವಸಂಸ್ಥೆ 2017ನ್ನು “ಇಂಟರ್ ನ್ಯಾಷನಲ್ ಇಯರ್ ಆಫ್ ಸಸ್ಟೈನಬಲ್ ಟೂರಿಸಂ ಫಾರ್ ಡೆವಲಪ್ ಮೆಂಟ್ (International Year of Sustainable Tourism for Development)’ ಎಂದು ಘೋಷಿಸಿದೆ. ಈ ಸಂಬಂಧ ಡಿಸೆಂಬರ್ 4 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.

Question 2

2. ಚಿತ್ವಾನ್ ರಾಷ್ಟ್ರೀಯ ಉದ್ಯಾನ ಯಾವ ದೇಶದಲ್ಲಿದೆ?

A
ಮ್ಯಾನ್ಮರ್
B
ಮ್ಯಾನ್ಮರ್
C
ಬಾಂಗ್ಲಾದೇಶ
D
ನೇಪಾಳ
Question 2 Explanation: 
ನೇಪಾಳ

ಚಿತ್ವಾನ್ ನೇಪಾಳದ ಪ್ರಥಮ ರಾಷ್ಟ್ರೀಯ ಉದ್ಯಾನವಾಗಿದ್ದು 1973 ರಲ್ಲಿ ಸ್ಥಾಪಿಸಲಾಗಿದೆ, 1984 ರಲ್ಲಿ ಸದರಿ ಉದ್ಯಾನಕ್ಕೆ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ದೊರೆತಿತ್ತು. ಈ ರಾಷ್ಟ್ರೀಯ ಉದ್ಯಾನದಲ್ಲಿ ಕೊಂಬುಳ್ಳ ಘೇಂಡಾಮೃಗ, ಬಂಗಾಳದ ಹುಲಿ ಮತ್ತು ವಿಶಿಷ್ಟ ಜಾತಿಯ ಮೊಸಳೆ ಇರುವ ಖ್ಯಾತಿ ಹೊಂದಿದೆ. ಇತ್ತೀಚೆಗೆ ತನ್ನ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ‘ಚಿತ್ವಾನ್ ಆನೆ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಿತ್ತು.

Question 3

3. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಕುರಿತಾದ ‘ದಿ ಅನ್ ಟೋಲ್ಡ್ ವಾಜಪೇಯಿ:ಪೊಲಿಟಿಷಿಯನ್ ಅಂಡ್ ಪ್ಯಾರಡಾಕ್ಸ್’ ಎಂಬ ಪುಸ್ತಕದ ಲೇಖಕರು ಯಾರು?

A
ರಾಮಚಂದ್ರ ಗುಹಾ
B
ಉಲ್ಲೇಖ್ ಎನ್.ಪಿ.
C
ಲಾಲ್ ಕೃಷ್ಣ ಅಡ್ವಾನಿ
D
ಚೌದರಿ ದೇವಿ ಲಾಲ್
Question 3 Explanation: 
ಉಲ್ಲೇಖ್ ಎನ್.ಪಿ.
Question 4

4. ವಿಶ್ವದಲ್ಲೇ ಪ್ರಥಮ ಬಾರಿಗೆ ಯಾವ ದೇಶದ ತನ್ನ ಎಲ್ಲಾ ಎಫ್.ಎಂ. (FM) ರೇಡಿಯೋ ಸಂಪರ್ಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ?

A
ಸ್ವಿಡ್ಜರ್ ಲ್ಯಾಂಡ್
B
ನಾರ್ವೆ
C
ಪೋಲ್ಯಾಂಡ್
D
ಫಿನ್ ಲ್ಯಾಂಡ್
Question 4 Explanation: 
ನಾರ್ವೆ

ನಾರ್ವೆ ದೇಶವು ತನ್ನ ದೇಶದ ಎಲ್ಲಾ ಎಫ್.ಎಂ. (FM) ರೇಡಿಯೋ ಸಂಪರ್ಕವನ್ನು ಜನವರಿ 11, 2017 ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ. ತನ್ನ ನಿರ್ಧಾರದಿಂದ ರಾಷ್ಟ್ರೀಯ ರೇಡಿಯೋ ಚಾನೆಲ್ ಗೆ ಹೆಚ್ಚಿನ ಆದಾಯ ಹರಿದುಬರಲಿದ್ದು, ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

Question 5

5. ಸಣ್ಣ ಉದ್ಯಮಗಳಿಗೆ ಬಂಡವಾಳದ ಹರಿವು ಹೆಚ್ಚಿಸಲು ಭಾರತೀಯ ಸಣ್ಣ ಉದ್ಯಮ ಅಭಿವೃದ್ಧಿ ಬ್ಯಾಂಕ್ (Small Industries Development Bank of Indi-SIDBI) ಯಾವ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ.
B
ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಲಿ.
C
ಲೈಫ್ ಇನ್ಷೂರೆನ್ಸ್ ಕಾರ್ಪೊರೆಷನ್ ಆಫ್ ಇಂಡಿಯಾ
D
ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಲಿ.
Question 5 Explanation: 
ಲೈಫ್ ಇನ್ಷೂರೆನ್ಸ್ ಕಾರ್ಪೊರೆಷನ್ ಆಫ್ ಇಂಡಿಯಾ
Question 6

6. ‘ಪ್ರವಾಸಿ ಭಾರತೀಯ ದಿವಸ-2017’ ದ ಆವೃತ್ತಿಯನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿದೆ?

A
ಚೆನ್ನೈ
B
ಗಾಂಧಿನಗರ
C
ಬೆಂಗಳೂರು
D
ಹೈದರಾಬಾದ್
Question 6 Explanation: 
ಬೆಂಗಳೂರು

ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸದ 14 ನೇ ಆವೃತ್ತಿ ಜನವರಿ 7 ರಿಂದ 9, 2017ರವರೆಗೂ ಆಯೋಜಿಸಲಾಗಿದೆ. ಭಾರತೀಯ ಸಂಜಾತ ಪೋರ್ಚುಗಲ್ ಪ್ರಧಾನಿ ಡಾ.ಅಂಟೋನಿಯೊ ಕೋಸ್ಟಾ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಹಾತ್ಮ ಗಾಂಧಿ ಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನೆನಪಿಗಾಗಿ ಪ್ರತಿವರ್ಷ ಜನವರಿ 9 ನ್ನು ಕೇಂದ್ರ ಸರ್ಕಾರ ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುತ್ತಿದೆ.

Question 7

7. “ಗುಡ್ ಸಮಾರಿಟನ್ ಪಾಲಿಸಿ” (Good Samaritan Policy) ನ್ನು ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು?

A
ಕೇರಳ
B
ಮಹಾರಾಷ್ಟ್ರ
C
ಪಾಂಡಿಚರಿ
D
ದೆಹಲಿ
Question 7 Explanation: 
ದೆಹಲಿ

ದೆಹಲಿ ಸರ್ಕಾರ “ಗುಡ್ ಸಮಾರಿಟನ್ ಪಾಲಿಸಿ” (Good Samaritan Policy) ಎಂಬ ಯೋಜನೆಯನ್ನು ಜಾರಿಗೊಳಿಸಿದೆ, ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ತೊಂದರೆಗೀಡಾದ ಸಂತ್ರಸ್ತರಿಗೆ/ಗಾಯಾಳುಗಳಿಗೆ ನೆರವು ನೀಡಿದವರಿಗೆ ರೂ. 2000-00 ಗಳ ಪ್ರೋತ್ಸಾಹ ಧನ ಮತ್ತು ಪ್ರಶಂಸನಾ ಪತ್ರ ನೀಡಲು ಉದ್ದೇಶಿಸಲಾಗಿದೆ. ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು, ಈ ಮೂಲಕ ಪ್ರಾಣ ರಕ್ಷಣೆ ಮಾಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

Question 8

8. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಕಾರಿಣಿ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?

A
ಯು.ಎಸ್.ಪಾಲಿವಾಲ್
B
ದೀಪಾ ಮಲಿಕ್
C
ಸುರೇಖ ಮರಾಂಡಿ
D
ರಾಜೇಶ್ವರ ರಾವ್
Question 8 Explanation: 
ಸುರೇಖ ಮರಾಂಡಿ

ಭಾರತೀಯ ರಿಸರ್ವ್ ಬ್ಯಾಂಕ್ ಸುರೇಖಾ ಮರಾಂಡಿ ರವರನ್ನು ಬ್ಯಾಂಕಿನ ಕಾರ್ಯಕಾರಿಣಿ ನಿರ್ದೇಶಕರಾಗಿ ನೇಮಕ ಮಾಡಿದೆ. ಮರಾಂಡಿ ರವರು ಗ್ರಾಹಕ ಶಿಕ್ಷಣ ಮತ್ತು ರಕ್ಷಣಾ ಇಲಾಖೆ ಹಾಗೂ ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ದಿ ಇಲಾಖೆಯ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ. ನೇಮಕಾತಿಗೆ ಮುಂಚೆ ಮರಾಂಡಿ ರವರು RBI ನಲ್ಲಿ ಪ್ರಧಾನ ಜನರಲ್ ಮ್ಯಾನೇಜರ್ ಹಾಗೂ ಮುಖ್ಯ ಜಾಗೃತ ಅಧಿಕಾರಿಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Question 9

9. ಭಾರತೀಯ ಸಣ್ಣ ಉದ್ಯಮದಾರರಿಗೆ “ಡಿಜಿಟಲ್ ಅನ್ ಲಾಕ್ಡ್” ಎಂಬ ತರಬೇತಿ ಕಾರ್ಯಕ್ರಮವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?

A
ಟ್ವಿಟರ್
B
ಗೂಗಲ್
C
ಫೇಸ್ ಬುಕ್
D
ಮೈಕ್ರೋಸಾಫ್ಟ್
Question 9 Explanation: 
ಗೂಗಲ್

ಸರ್ಚ್ ಎಂಜಿಲ್ ಗೂಗಲ್ ಸಂಸ್ಥೆ ಭಾರತೀಯ ಸಣ್ಣ ಉದ್ಯಮದಾರರಿಗೆ “ಡಿಜಿಟಲ್ ಅನ್ ಲಾಕ್ಡ್ (Digital Unlocked)”ಕಾರ್ಯಕ್ರಮವನ್ನು ಆರಂಭಿಸಿದೆ. ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಆನ್ ಲೈನ್ ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ತರಭೇತಿಯನ್ನು ನೀಡಿ ಡಿಜಿಟಲ್ ವಾಹಿನಿಗೆ ತರುವುದು ಕಾರ್ಯಕ್ರಮದ ಗುರಿ. ಈ ಆನ್ ಲೈನ್ ತರಭೇತಿಯು ಒಟ್ಟು 90 ತರಭೇತಿ ವಿಡಿಯೋ ಹಾಗೂ ಎಂಟು ಗಂಟೆ ಕ್ಲಾಸ್ ರೂಂ ತರಭೇತಿಯನ್ನು ಒಳಗೊಂಡಿರಲಿದೆ.

Question 10

10. ಯಾವ ರಾಜ್ಯದಲ್ಲಿ 2017 ನ್ಯಾಷನಲ್ ಐಸ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಡೆಯಲಿದೆ?

A
ಹಿಮಾಚಲ ಪ್ರದೇಶ
B
ಉತ್ತರಖಂಡ
C
ಜಮ್ಮು ಮತ್ತು ಕಾಶ್ಮೀರ
D
ಸಿಕ್ಕಿಂ
Question 10 Explanation: 
ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ 13ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ಜನವರಿ 5 ರಿಂದ ನಡೆಯಲಿದೆ. ಸುಮಾರು 300ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಈ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ4-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,4, 2017”

  1. All questions are turns the students life

Leave a Comment

This site uses Akismet to reduce spam. Learn how your comment data is processed.