ಚಾರ್ ದಾಮ್ ಹೆದ್ದಾರಿ ಅಭಿವೃದ್ದಿ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಮಹತ್ವಾಕಾಂಕ್ಷಿ ಚಾರ್ ದಾಮ್ ಯೋಜನೆ ಅಥವಾ ಚಾರ್ ದಾಮ್ ಮಹಾಮಾರ್ಗ ವಿಕಾಸ್ ಪರಿಯೋಜನೆಗೆ ಉತ್ತರಖಂಡದ ಡೆಹ್ರಾಡೂನ್ ನಲ್ಲಿ ಶಿಲಾನ್ಯಾಸವನ್ನು ನೆರವೇರಿಸಿದರು. ಹಿಮಾಲಯದ ಚಾರ್ ದಾಮ್ ಯಾತ್ರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಪ್ರಮುಖಾಂಶಗಳು:

  • 900 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವುದು ಯೋಜನೆಯ ಮುಖ್ಯ ಗುರಿ. ರೂ 12,000 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
  • ಹಿಮಾಲಯದ ಪ್ರಮುಖ ಯಾತ್ರಸ್ಥಳಗಳಾದ ಉತ್ತರಖಂಡನಲ್ಲಿರುವ ಕೇದರ್ ನಾಥ್, ಬದ್ರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಯಾತ್ರಸ್ಥಳಗಳ ನಡುವೆ ಸಲೀಸಾದ ಸಂಪರ್ಕ ಕಲ್ಪಿಸಲಾಗುವುದು.
  • ರಸ್ತೆ ಸುರಕ್ಷತೆ ಮತ್ತು ಅನಿರ್ಬಂಧಿತ ಪ್ರಯಾಣಕ್ಕಾಗಿ ಸೇತುವೆ, ಸುರಂಗ ಮಾರ್ಗಗಳನ್ನು ಹೆದ್ದಾರಿ ಒಳಗೊಂಡಿರಲಿದೆ.
  • ಸ್ಥಳೀಯ ಜನರಿಗೆ ಉದ್ಯೋಗವಕಾಶ ನಿರ್ಮಾಣವಾಗುವುದರ ಜೊತೆಗೆ ಪ್ರವಾಸೋಧ್ಯಮ ಅಭಿವೃದ್ದಿಗೆ ಈ ಯೋಜನೆ ಸಹಕಾರಿಯಾಗಲಿದೆ.

ಅಸ್ಸಾಂ ಸರ್ಕಾರದಿಂದ ಅಟಲ್ ಅಮೃತ್ ಅಭಿಯಾನ್ ಆರೋಗ್ಯ ವಿಮಾ ಯೋಜನೆ ಜಾರಿ

ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗಲು ಅಸ್ಸಾಂ ಸರ್ಕಾರ ಅಟಲ್ ಅಮೃತ್ ಅಭಿಯಾನ ಹೆಸರಿನ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಅಸ್ಸಾಂನ ಪ್ರತಿ ಕುಟುಂಬಕ್ಕೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಈ ಯೋಜನೆಯ ಗುರಿ. ದೇಶದಲ್ಲಿ ಇದುವರೆಗೂ ಜಾರಿಗೊಳಿಸಿರುವ ಆರೋಗ್ಯ ಸೇವಾ ಯೋಜನೆಯಲ್ಲಿ ಅತ್ಯಂತ ದೊಡ್ಡ ಯೋಜನೆ ಇದಾಗಿದೆ ಎನ್ನಲಾಗಿದೆ. ಈ ಯೋಜನೆಗಾಗಿ ಅಸ್ಸಾಂ ಸರ್ಕಾರ ರೂ 200 ಕೋಟಿಯನ್ನು ಮೀಸಲಿಟ್ಟಿದೆ.

ಯೋಜನೆಯ ಪ್ರಮುಖಾಂಶಗಳು:

  • ಐದು ಲಕ್ಷ ವಾರ್ಷಿಕ ವರಮಾನಕ್ಕಿಂತ ಕಡಿಮೆ ಇರುವ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
  • ಯೋಜನೆಯ ಫಲಾನುಭವಿಗಳು ಆರು ಪ್ರಮುಖ ವಿಭಾಗದಲ್ಲಿ ಸುಮಾರು 437 ಕಾಯಿಲೆಗಳಿಗೆ ಕ್ಯಾಶ್ ಲೆಸ್ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದಾಗಿದೆ. ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರಲಿದೆ.
  • ಆರು ವಿಭಾಗಗಳೆಂದರೆ ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ನರವ್ಯೂಹ ಸಂಬಂಧಿಸಿದ ಕಾಯಿಲೆ, ಸುಟ್ಟಗಾಯ ಮತ್ತು ಪ್ರಸವ ರೋಗಗಳು.

ನವದೆಹಲಿಯಲ್ಲಿ ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಕಚೇರಿ ಉದ್ಘಾಟನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕಾರಿ ರವರು ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಕಚೇರಿಯನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು. ಸಾಗರಮಾಲೆ ಅಭಿವೃದ್ದಿ ಸಂಸ್ಥೆಯನ್ನು ಕಂಪನಿ ಕಾಯಿದೆ, 2013 ರಡಿ ಸ್ಥಾಪಿಸಲಾಗಿದೆ. ಕೇಂದ್ರ ಶಿಪ್ಪಿಂಗ್ ಸಚಿವಾಲಯದಡಿ ಸಾಗರಮಾಲ ಅಭಿವೃದ್ದಿ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಜುಲೈ, 2017 ರಲ್ಲಿ ಅನುಮೋದನೆ ನೀಡಿತ್ತು.

ಪ್ರಮುಖಾಂಶಗಳು:

  • ಮಹತ್ವಾಕಾಂಕ್ಷಿ ಸಾಗರಮಾಲ ಯೋಜನೆಯಡಿ ಬಂದರು ಆಧರಿತ ಆರ್ಥಿಕ ಯೋಜನೆಗಳನ್ನು ಕೈಗೊಳ್ಳುವುದು ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಮುಖ್ಯ ಧ್ಯೇಯ.
  • ಕೇಂದ್ರ, ರಾಜ್ಯ ಮತ್ತು ಬಂದರು ಸಂಸ್ಥೆಗಳ ಯೋಜನೆಗಳಿಗೆ ಈಕ್ವಿಟಿ ನೆರವು ನೀಡುವುದು.
  • ಗುರುತಿಸಲ್ಪಟ್ಟ ಯೋಜನೆಗಳ ಅನುಷ್ಠಾನವನ್ನು ಬಹು ಏಜೆನ್ಸಿಗಳು ಕೈಗೊಳ್ಳಲಿದ್ದು ಈ ಕಾರಣದಿಂದ ಎಸ್‍ಡಿಸಿ, ನೋಡಲ್ ಏಜೆನ್ಸಿಯಾಗಿ ಇವೆಲ್ಲದರ ನಡುವೆ ಸಮನ್ವಯ ಸಾಧಿಸುವ ಮತ್ತು ಎಲ್ಲ ಕಾಮಗಾರಿಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಐದನೇ ಪೀಳಿಗೆಯ ರಹಸ್ಯ ಯುದ್ದವಿಮಾನ FC-31ಜರ್ಫಾಲ್ಕನ್ ಪರೀಕ್ಷಿಸಿದ ಚೀನಾ

ಚೀನಾದ ಐದನೇ ಪೀಳಿಗೆಯ ರಹಸ್ಯವಾಗಿ ಯುದ್ದ ಕಾರ್ಯಾಚರಣೆ ನಡೆಸುವ FC-31 ಜರ್ಫಾಲ್ಕನ್ (Gyrfalcon) ಯುದ್ದವಿಮಾನವನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಈ ಯುದ್ದವಿಮಾನವದ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. ಐದನೇ ಪೀಳಿಗೆಯ ಈ ವಿಮಾನವನ್ನು ಅಮೆರಿಕದ ಎಫ್‌–35 ವಿಮಾನಕ್ಕೆ ಸೆಡ್ಡುಹೊಡೆಯಲು ಚೀನಾ ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖಾಂಶಗಳು:

  • ಹಿಂದಿನ ರಹಸ್ಯ ಯುದ್ದ ವಿಮಾನಕ್ಕಿಂತಲೂ ಇದು ಹೆಚ್ಚು ರಹಸ್ಯವಾಗಿ ಕಾರ್ಯಾಚರಣೆ ಮಾಡುವ ಸಾಮರ್ಥ್ಯ ಹೊಂದಿದೆ ಹಾಗೂ ಹೆಚ್ಚು ಭಾರದ ಶಸ್ತಾಸ್ತ್ರಗಳನ್ನು ಒಯ್ಯಬಹುದಾಗಿದೆ.
  • ಏವಿಯೇಶನ್ ಇಂಡಸ್ಟ್ರಿ ಕಾರ್ಪೋರೇಶನ್ ಆಫ್ ಚೀನಾದ ಅಂಗ ಸಂಸ್ಥೆಯಾದ ಶೆನ್‌ಯಗ್‌ ಏರ್‌ಕ್ರಾಫ್ಟ್‌ ಕಾರ್ಪೊರೇಶನ್‌ ಈ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆ.
  • 8ಟನ್‌ (8000 ಕೆ.ಜಿ) ಭಾರದಶಸ್ತ್ರಾಸ್ತ್ರಗಳನ್ನು ಒಯ್ಯಬಹುದು ತಳಭಾಗದಲ್ಲಿ ಮತ್ತು  ರೆಕ್ಕೆಗಳಲ್ಲಿ ತಲಾ ಆರು ಕ್ಷಿಪಣಿಗಳನ್ನು ಸಾಗಿಸುವ ಸೌಲಭ್ಯವನ್ನು ಹೊಂದಿದೆ.
  • ಶಬ್ದದ ವೇಗಕ್ಕಿಂತ8 ಪಟ್ಟು ಅಧಿಕ ವೇಗದಲ್ಲಿ ಹಾರಾಟ ನಡೆಸಬಲ್ಲದು.

One Thought to “ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-29,2016”

  1. Mahesh giraddi

    sir why dnt you put here the download button please mention that too sir……..

Leave a Reply to Mahesh giraddi Cancel reply

This site uses Akismet to reduce spam. Learn how your comment data is processed.