ಈ ಬಾರಿಯ ಸಂದೇಶ ಪ್ರಶಸ್ತಿಗೆ ನಟ ಪ್ರಕಾಶ್ ರೈ ಸೇರಿ ಏಳು ಮಂದಿ ಆಯ್ಕೆ

ಮಂಗಳೂರಿನ ಸಂದೇಶ ಫೌಂಡೇಷನ್‌ ಫಾರ್‌ ಕಲ್ಚರ್‌ ಆಂಡ್‌ ಎಜುಕೇಶನ್‌ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ‘ಸಂದೇಶ’ ಪ್ರಶಸ್ತಿಗೆ ಈ ಬಾರಿ ಏಳುಮಂದಿಯನ್ನು ಆಯ್ಕೆಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರು:

  • ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ, ನಟ ಪ್ರಕಾಶ್‌ ರೈ , ಕೆ. ಯುವರಾಜ್‌ (ಕಲೆ),  ಅನಿಲ್‌ ಪತ್ರಾವೊ (ಕೊಂಕಣಿ ಸಂಗೀತ), ಜಾನ್‌ ದೇವರಾಜ್‌ (ವಿಶೇಷ ಪ್ರಶಸ್ತಿ) ಮತ್ತು ಶಮಿತಾ ರಾವ್‌–ರೆನಿಟಾ ಲೋಬೊ (ಶಿಕ್ಷಣ) ಅವರು ಸಂದೇಶ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರು.
  • ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿದೆ. ಜನವರಿ 13ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ, ಹಿರಿಯ ಸಾಹಿತಿ ನಾ.ಡಿಸೋಜ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿದೆ ಎಂದರು.
  • ಪ್ರಶಸ್ತಿಯನ್ನು ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ–ಸಂಸ್ಕೃತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡುತ್ತಾ ಬಂದಿರುವ ನಾಡಿನ ಹಿರಿಯ ಸಾಹಿತಿ, ಕಲಾವಿದರ, ಶಿಕ್ಷಕ ಹಾಗೂ ಸಮಾಜ ಸೇವಕರಿಗೆ ನೀಡಲಾಗುವುದು.

ಐಸಿಸಿ ವರ್ಷದ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ರವಿಚಂದ್ರನ್ ಅಶ್ವಿನ್ ಆಯ್ಕೆ

ಭಾರತದ ಆಲ್ರೌಂಡರ್ ಆರ್. ಅಶ್ವಿನ್ ಅವರಿಗೆ ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ಇದೇ ವೇಳೆ ಅಶ್ವಿನ್​ಗೆ ಸೋಬರ್ಸ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿರುವುದು ಇನ್ನೊಂದು ವಿಶೇಷವಾಗಿದೆ.

ಪ್ರಶಸ್ತಿ ಪಟ್ಟಿ:

  • ರವಿಚಂದ್ರನ್ ಅಶ್ವಿನ್ (ಭಾರತ) – ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ
  • ರವಿಚಂದ್ರನ್ ಅಶ್ವಿನ್ (ಭಾರತ) – ಸರ್ ಗಾರ್ಫೀಲ್ಡ್ ಸೋಬರ್ಸ ಪ್ರಶಸ್ತಿ
  • ಡಿಕಾಕ್ (ದ.ಆಫ್ರಿಕಾ) – ಐಸಿಸಿ ವರ್ಷದ ಏಕದಿನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ
  • ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾ)- ವರ್ಷದ ಅತ್ಯುತ್ತಮ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ
  • ಕಾಲೋಸ್ ಬ್ರಾಥ್ ವೇಟ್ (ವೆಸ್ಟ್ ಇಂಡೀಸ್) -ವರ್ಷದ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಪ್ರಶಸ್ತಿ
  • ಮಹಮದ್ ಶಹಜಾದ್ (ಆಫ್ಘಾನಿಸ್ತಾನ) – ಅಫಿಲಿಯೇಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ
  • ಮರೇಸ್ ಎರಾಸ್ಮಸ್ (ದ.ಆಫ್ರಿಕಾ)- ವರ್ಷದ ಅತ್ಯುತ್ತಮ ತೀರ್ಪಗಾರ ಗೌರವ
  • ಸುಜಿ ಬೇಟ್ಸ್ (ನ್ಯೂಜಿಲೆಂಡ್)- ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ
  • ಸುಜಿ ಬೇಟ್ಸ್ (ನ್ಯೂಜಿಲೆಂಡ್)- ವರ್ಷದ ಅತ್ಯುತ್ತಮ ಏಕದಿನ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ
  • ಮಿಸ್ಬಾ ಉಲ್ ಹಕ್ (ಪಾಕಿಸ್ತಾನ)-ಐಸಿಸಿ ಸ್ಪಿರಿಟ್ ಆಫ್ ದಿ ಇಯರ್ ಪ್ರಶಸ್ತಿ

ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್ ಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿರವರು “ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್ (National Apprenticeship Promotion Scheme)” ಗೆ ಉತ್ತರಪ್ರದೇಶದ ಖಾನ್ ಪುರದಲ್ಲಿ ಚಾಲನೆ ನೀಡಿದರು. ಸುಮಾರು 50 ಲಕ್ಷ ಯುವಕರಿಗೆ ಅಪ್ರೆಂಟಿಸ್ಷಿಪ್ ತರಭೇತಿಯನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದಕ್ಕಾಗಿ ಸುಮಾರು ರೂ 10000 ಕೋಟಿಯನ್ನು ಮೀಸಲಾಡಿಗಿದೆ.

“ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್”:

  • ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಡೈರೆಕ್ಟರ್ ಜನರಲ್ ಆಫ್ ಟ್ರೈನಿಂಗ್ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.
  • ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಅಪ್ರೆಂಟಿಸ್ಷಿಪ್ ತರಭೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಂಸ್ಥೆಗಳಿಗೆ ಸಹಾಯಧನ ನೀಡಲಿದೆ.
  • ಅಪ್ರೆಂಟಿಸ್ಷಿಪ್ ತರಭೇತಿ ಪಡೆದುಕೊಳ್ಳುವವರಿಗೆ ನೀಡಲಾಗುವ ಮಾಸಿಕ ಸ್ಟೈಪೆಂಡ್ ನಲ್ಲಿ ಶೇ 25% ರಷ್ಟನ್ನು ಕೇಂದ್ರ ಸರ್ಕಾರ ನೀಡಲಿದೆ.
  • ಇದರ ಜೊತೆಗೆ ಕೇಂದ್ರ ಸರ್ಕಾರ ಅಪ್ರೆಂಟಿಸ್ಷಿಪ್ ತರಭೇತಿಗೆ ಅತ್ಯಂತ ಅವಶ್ಯಕವಾಗಿರುವ ಮೂಲಭೂತ ತರಭೇತಿಯನ್ನು ನೀಡಲಿದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ 50% ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಡಿಸೆಂಬರ್ 24: ರಾಷ್ಟ್ರೀಯ ಗ್ರಾಹಕ ದಿನ

ರಾಷ್ಟ್ರೀಯ ಗ್ರಾಹಕ ದಿನವನ್ನು ಪ್ರತಿ ವರ್ಷ ಡಿಸೆಂಬರ್ 24 ರಂದು ಆಚರಿಸಲಾಗುತ್ತದೆ. ಈ ದಿನದಂದು ಗ್ರಾಹಕ ರಕ್ಷಣಾ ಕಾಯಿದೆ-1986 ರಾಷ್ಟ್ರಪತಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿತು. ಗ್ರಾಹಕರ ಹಿತಾರಕ್ಷಣೆ ಕಾಪಾಡಲು ಮತ್ತು ಪ್ರತಿಯೊಬ್ಬರ ಗ್ರಾಹಕನ ಮೂಲಭೂತ ಹಕ್ಕು ಹಾಗೂ ಜವಾಬ್ದಾರಿಯನ್ನು ಉತ್ತೇಜಿಸಲು ಈ ದಿನ ಅವಕಾಶ ಕಲ್ಪಿಸಲಿದೆ. Alternate Consumer Dispute Redressal ಇದು ಈ ವರ್ಷದ ಗ್ರಾಹಕ ದಿನದ ಧ್ಯೇಯವಾಕ್ಯ.

ಗ್ರಾಹಕ ರಕ್ಷಣಾ ಕಾಯಿದೆ-1986:

  • ಗ್ರಾಹಕ ರಕ್ಷಣಾ ಕಾಯಿದೆ ಜಾರಿಗೆ ಬಂದದ್ದು, ದೇಶದ ಗ್ರಾಹಕ ಚಳುವಳಿಯಲ್ಲಿ ಒಂದು ಮೈಲುಗಲ್ಲು.
  • ಈ ಕಾಯಿದೆಯು ದೋಷಯುಕ್ತ ಸರಕುಗಳು, ಅತೃಪ್ತಿಕರ ಸೇವೆಗಳು ಮತ್ತು ನ್ಯಾಯ ಸಮ್ಮತವಲ್ಲದ ವಹಿವಾಟಿನಂತಹ ವಿವಿಧ ರೀತಿಯ ಶೋಷಣೆಯ ವಿರುದ್ದ ಪರಿಣಾಮಕಾರಿ ರಕ್ಷಣೋಪಾಯಗಳನ್ನು ಗ್ರಾಹಕರಿಗೆ ಒದುಗಿಸುತ್ತದೆ.
  • ತ್ವರಿತವಾಗಿ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸುವುದಲ್ಲದೇ, ಸೂಕ್ತ ಪರಿಹಾರವನ್ನು ಕಾಯಿದೆಯಡಿ ಒದಗಿಸಲಾಗುವುದು.
  • ವಿಶ್ವ ಗ್ರಾಹಕ ಹಕ್ಕು ದಿನವನ್ನು ಮಾರ್ಚ್ 15 ರಂದು ಆಚರಿಸಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.