ಸ್ವದೇಶಿ ನಿರ್ಮಿತ ದೂರಗಾಮಿ “ನಿರ್ಭಯ ಕ್ಷಿಪಣಿ” ಪರೀಕ್ಷೆ

swa_upಸ್ವದೇಶೀಯವಾಗಿ ನಿರ್ಮಿಸಿ ಅಭಿವೃದ್ಧಿಪಡಿಸಲಾದ ದೂರಗಾಮಿ ಸಬ್‌ಸಾನಿಕ್‌ ಕ್ಷಿಪಣಿ ‘ನಿರ್ಭಯ’ ಪರೀಕ್ಷೆಯನ್ನು    ಒಡಿಶಾದ ಚಂಡಿಪುರದಲ್ಲಿ ಕೈಗೊಳ್ಳಲಾಯಿತು. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿತು. ಆದರೆ ಕ್ಷಿಪಣಿ ಪರೀಕ್ಷೆ ಸಂಪೂರ್ಣ ವಿಫಲವಾಗಿದೆ. ಇದುವರೆಗೆ ಒಟ್ಟು ನಾಲ್ಕು ಬಾರಿ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಲಾಗಿದ್ದು, ನಾಲ್ಕರಲ್ಲಿ ಒಂದು ಬಾರಿ ಮಾತ್ರ ಯಶಸ್ವಿಯಾಗಿದೆ.  ಮೊದಲ ಬಾರಿಗೆ 2013 ರಲ್ಲಿ ಪರೀಕ್ಷಿಸಲಾಯಿತು ಆದರೆ ವಿಫಲವಾಯಿತು. ಆನಂತರ ಅಕ್ಟೋಬರ್ 2014 ರಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 800 ಕಿ.ಮೀ ಬದಲಿಗೆ 1,010 ಕಿ,ಮೀ ಗುರಿ ತಲುಪಿ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಅಕ್ಟೋಬರ್ 16, 2015 ರಲ್ಲಿ ನಡೆಸಲಾದ ಮೂರನೆ ಪರೀಕ್ಷೆಯಲ್ಲಿ ಮತ್ತೆ ವಿಫಲವಾಯಿತು.

ನಿರ್ಭಯ ಕ್ಷಿಪಣಿ:

  • ನಿರ್ಭಯ ಕ್ಷಿಪಣಿ ದೂರಗಾಮಿ ಕ್ಷಿಪಣಿಯಾಗಿದ್ದು, ಭೂಮಿಯಿಂದ ಭೂಮಿಗೆ ನೆಗೆಯಬಲ್ಲ ಅಣ್ವಸ್ತ್ರ ಒಯ್ಯಬಲ್ಲ ಸಬ್ ಸಾನಿಕ್ ಕ್ಷಿಪಣಿ. ಇದನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ದಿಪಡಿಸಿದೆ.
  • ನಿರ್ಭಯ ಕ್ಷಿಪಣಿ 700 ಕಿ.ಮೀ ಯಿಂದ 1000 ಕಿ.ಮೀ ಸಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

Leave a Reply

Your email address will not be published. Required fields are marked *