ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಪರೀಕ್ಷಾರ್ಥ ಯಶಸ್ವಿ

drdo_upರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ (Samrt Anti Airfield Weapon (SAAW)) ಅನ್ನು ಭಾರತೀಯ ವಾಯು ಪಡೆಯ ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ. ಒಡಿಶಾದ ಚಂಡೀಪುರ್ ನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷಾರ್ಥ ಸಮಯದಲ್ಲಿ SAAW ವ್ಯವಸ್ಥೆ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿದ್ದು, ನಿಗದಿತ ಉದ್ದೇಶವನ್ನು ತಲುಪಲು ಯಶಸ್ವಿಯಾಗಿದೆ.

ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಬಗ್ಗೆ:

  • ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಅನ್ನು ಡಿಆರ್ ಡಿಓ ಅಭಿವೃದ್ದಿಪಡಿಸಿದೆ. ಇದು 120 ಕೆಜಿ ಸ್ಮಾರ್ಟ್ ಕ್ಲಾಸ್ ವೆಪನ್ ಆಗಿದೆ.
  • 100 ಕಿ.ಮೀ ಎತ್ತರದಿಂದ ಭೂಮಿಗೆ ನಿಖರವಾಗಿ ಗುರಿ ಇಡುವ ಸಾಮರ್ಥ್ಯವನ್ನು ಹೊಂದಿದೆ. ಆ ಮೂಲಕ ದೂರದಿಂದಲೇ ನಿಖರವಾಗಿ ಗುರಿಯಿಟ್ಟು ಭಾರತೀಯ ಸೇನೆಗೆ ಬಲತುಂಬಲಿದೆ.
  • ವಿಶ್ವ ದರ್ಜೆಯ ಅತ್ಯುನ್ನತ ಶಸ್ತಾಸ್ತ್ರಗಳಲ್ಲಿ ಇದು ಒಂದಾಗಿದ್ದು, ವಿಮಾನದ ರನ್ ವೇ, ಬಂಕರ್ ಮತ್ತು ವಿಮಾನದ ಹ್ಯಾಂಗರ್ ಅನ್ನು ಧ್ವಂಸಮಾಡಲು ಶಕ್ತವಾಗಿದೆ.

ಹಿನ್ನಲೆ:

SAAW ಯೋಜನೆಗೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 2013ರಲ್ಲಿ 56.58 ಕೋಟಿಯನ್ನು ಬಿಡುಗಡೆಗೊಳಿಸತ್ತು. ಇದರ ಮೊದಲ ಪರೀಕ್ಷೆಯನ್ನು ಮೇ 2016 ರಲ್ಲಿ ಐಎಎಫ್ ನ ದರಿನ್-II ವಿಮಾನದಿಂದ ಬೆಂಗಳೂರಿನಲ್ಲಿ ನಡೆಸಲಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.