ವಿಶ್ವದ ಅತಿ ಹೆಚ್ಚು ಶಾಖ ನಿರೋಧಕ ವಸ್ತುವನ್ನು ಪತ್ತೆಹಚ್ಚಿದ ವಿಜ್ಞಾನಿಗಳು

hafnium_upಯುಕೆ ಮೂಲದ ವಿಜ್ಞಾನಿಗಳ ತಂಡ ವಿಶ್ವದ ಅತಿ ಹೆಚ್ಚು ಶಾಖ ನಿರೋಧಕ ವಸ್ತುವನ್ನು ಪತ್ತೆಹಚ್ಚಿದ್ದಾರೆ. “ಹಫ್ನಿಯಂ ಕಾರ್ಬೈಡ್ (Hafnium Carbide)” ವಿಜ್ಞಾನಿಗಳ ಪತ್ತೆಹಚ್ಚಿರುವ ವಿಶ್ವದ ಅತಿ ಹೆಚ್ಚು ಶಾಖ ನಿರೋಧಕತೆಯನ್ನು ಹೊಂದಿರುವ ವಸ್ತು. 3958 ಡಿಗ್ರಿ ಸೆಲ್ಸಿಯಸ್ ಕರಗುವ ಬಿಂದುವನ್ನು ಇದು ಹೊಂದಿದೆ. ಆತ್ಯಾಧುನಿಕ ಲೇಸರ್ ಹೀಟಿಂಗ್ ತಂತ್ರಜ್ಞಾನವನ್ನು ಬಳಸಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಪ್ರಮುಖಾಂಶಗಳು:

  • “ಹಫ್ನಿಯಂ ಕಾರ್ಬೈಡ್ (Hafnium Carbide)” ಮತ್ತು”ಟಾಂಟಲಮ್ ಕಾರ್ಬೈಡ್ (Tantalum Carbide)” ಗಳು ರಿಫ್ರಾಕ್ಟರಿ ಸೆರಾಮಿಕ್ಸ್ ಆಗಿದ್ದು, ಅತ್ಯುತ್ತಮ ತಾಪ ನಿರೋಧಕವಾಗಿವೆ.
  • ಟಾಂಟಲಮ್ ಕಾರ್ಬೈಡ್ 3,768 ಡಿಗ್ರಿ ಸೆಲ್ಸಿಯಸ್ ನಲ್ಲಿ ಕರಗಿದರೆ, ಹಫ್ನಿಯಂ ಕಾರ್ಬೈಡ್ 3,958 ಡಿಗ್ರಿ ಸೆಲ್ಸಿಯಸ್ ನಲ್ಲಿ ಕರಗಿದೆ. ಇವರೆಡನ್ನು ಮಿಶ್ರಣ ಮಾಡಿದಾಗ ಕರಗುವ ಬಿಂದು ಇದಕ್ಕಿಂತಲೂ ಹೆಚ್ಚಿರುವುದನ್ನು ಸಂಶೋಧನೆಯಿಂದ ತಿಳಿದುಬಂದಿದೆ.
  • ಪ್ರಸ್ತುತ ಈ ಪದಾರ್ಥಗಳನ್ನು ಹೈ ಸ್ಪೀಡ್ ವಾಹನಗಳಲ್ಲಿ ಉಷ್ಣ ರಕ್ಷಣೆ ವ್ಯವಸ್ಥೆಯಲ್ಲಿ ಮತ್ತು ಅಣು ವಿದ್ಯುತ್ ಘಟಕಗಳಲ್ಲಿ ಬಳಸಲಾಗುತ್ತಿದೆ.
  • ಈ ಸಂಶೋಧನೆ ಬಾಹ್ಯಕಾಶ ಕ್ಷೇತ್ರಕ್ಕೆ ವರದಾನವಾಗಲಿದೆ. ಭವಿಷ್ಯದಲ್ಲಿ ಬಾಹ್ಯಕಾಶ ನೌಕೆ ಎಂದಿಗಿಂತಲೂ ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಾಗಲಿದೆ.

Leave a Reply

Your email address will not be published. Required fields are marked *