ಭಾರತೀಯ ಉದ್ಯಮ ಅಭಿವೃದ್ದಿ ಸೇವೆಗಳ ಸೃಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಭಾರತೀಯ ಉದ್ಯಮ ಅಭಿವೃದ್ದಿ ಸೇವೆಗಳು (Indian Enterprise Development Services (IEDS)) ಹೆಸರಿನಡಿ ಹೊಸ ಸೇವೆಗಳ ಸೃಜನೆಗೆ  ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ರಮುಖಾಂಶಗಳು:

  • ಕೇಂದ್ರ ಸೂಕ್ಷ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಡೆವೆಲಪ್ಮೆಂಟ್ ಕಮೀಷನರ್ ಕಚೇರಿಯಲ್ಲಿ IEDS ಸೇವೆಗಳನ್ನು ಸೃಜಿಸಲಾಗುವುದು.
  • ಸಂಸ್ಥೆಯ ಆಡಳಿತ ವಿಭಾಗವನ್ನು ಬಲಗೊಳಿಸಲು ಮತ್ತು ಸ್ಟಾರ್ಟ್ ಆಫ್ ಇಂಡಿಯಾ, ಸ್ಟಾಂಡ್ ಆಫ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಗುರಿಯನ್ನು ಸಾಧಿಸುವುದು ಇದರ ಪ್ರಮುಖ ಉದ್ದೇಶ.
  • ಇದರ ಜೊತೆಗೆ ಸಂಸ್ಥೆಯ ಸಾಮರ್ಥ್ಯ ಮತ್ತು ಕಾರ್ಯದಕ್ಷತೆಯನ್ನು ವರ್ಧಿಸುವುದು ಹಾಗೂ ಪ್ರತ್ಯೇಕ ಹುದ್ದೆಗಳ ಸೃಜನೆ ಮೂಲಕ ಸೂಕ್ಷ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದ ಅಭಿವೃದ್ದಿಯನ್ನು ಸಾಧಿಸಲು ಸಹಾಯವಾಗಲಿದೆ.

ಬ್ರಿಟನ್ ಹಿಂದಿಕ್ಕಿ ವಿಶ್ವದ 5ನೇ ಬೃಹತ್ ಆರ್ಥಿಕ ದೇಶವಾದ ಭಾರತ

ಫೋರ್ಬ್ಸ್ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ನೂರೈವತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಭಾರತವು ಬ್ರಿಟನ್‌ ಅನ್ನು ಹಿಂದಿಕ್ಕಿ ವಿಶ್ವದ 5ನೇ ಬೃಹತ್ ಜಿಡಿಪಿ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ಅಮೆರಿಕ, ಚೀನ, ಜಪಾನ್‌ ಮತ್ತು ಜರ್ಮನಿಯ ಬಳಿಕ ಭಾರತ ವಿಶ್ವದ 5ನೇ ಬೃಹತ್‌ ಜಿಡಿಪಿ ಆರ್ಥಿಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಕಳೆದ 25 ವರ್ಷಗಳಲ್ಲಿ ಭಾರತವು ತೀವ್ರ ಹಾಗೂ ಅತಿ ವೇಗದ ಆರ್ಥಿಕಾಭಿವೃದ್ಧಿಯನ್ನು ಸಾಧಿಸಿರುವುದು ಮತ್ತು ಬ್ರಿಟನ್‌ ಈಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದು, ಮುಖ್ಯವಾಗಿ ಬ್ರೆಕ್ಸಿಟ್‌, ಇದಕ್ಕೆ ಕಾರಣವಾಗಿದೆ ಎಂದು ವರದಿಯು ಹೇಳಿದೆ.
  • ಬ್ರಿಟನ್‌ ಈಚೆಗೆ 28 ಸದಸ್ಯ ರಾಷ್ಟ್ರಗಳ ಆರ್ಥಿಕ ಒಕ್ಕೂಟವಾಗಿರುವ ಯುರೋಪಿಯನ್‌ ಯೂನಿಯನ್‌ ನಿಂದ ಹೊರ ಬರಲು ತೀರ್ಮಾನಿಸಿರುವುದು, ಬ್ರಿಟನ್‌ ನ ಸ್ಥಾನ ನಷ್ಟಕ್ಕೆ ಕಾರಣವಾಗಿದ್ದು ಭಾರತ ಪಾಲಿಗೆ ಇದು ಅನುಕೂಲಕರವಾಗಿ ಪರಿಣಮಿಸಿದೆ; ಹಾಗಾಗಿ ಭಾರತ ಬ್ರಿಟನ್‌ ಅನ್ನು ಕೆಳಕ್ಕೆ ತಳ್ಳಿ ಈಗ ವಿಶ್ವದ ಐದನೇ ಬೃಹತ್‌ ಆರ್ಥಿಕ ದೇಶ ಎಂಬ ಜಾಗತಿಕ ಹೆಗ್ಗಳಿಕೆಯ ಸ್ಥಾನವನ್ನು ಪಡೆದುಕೊಂಡಿದೆ.

ಜಾಗತಿಕ ಪವನ ವಿದ್ಯುತ್ ಸ್ಥಾಪಿತ ಸೂಚ್ಯಂಕದಲ್ಲಿ ಭಾರತಕ್ಕ ನಾಲ್ಕನೇ ಸ್ಥಾನ

ಜಾಗತಿಕ ಪವನ ವಿದ್ಯುತ್ ಸ್ಥಾಪಿತ ಸೂಚ್ಯಂಕ (Global Wind Power Installed Index)ದಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. 2015ರ ಅಂತ್ಯಕ್ಕೆ ಭಾರತದ ಒಟ್ಟಾರೆ ಪವನ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 25,088 ಮೆಗಾ ವ್ಯಾಟ್. ಜಾಗತಿಕ ಪವನ ಶಕ್ತಿ ಮಂಡಳಿ ಈ ವರದಿಯನ್ನು ಬಿಡುಗಡೆಗೊಳಿಸಿದೆ.

ವರದಿಯ ಪ್ರಮುಖಾಂಶಗಳು:

  • ಸೂಚ್ಯಂಕದಲ್ಲಿ ಚೀನಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ ಮತ್ತು ಜರ್ಮನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಚೀನಾದ ಒಟ್ಟಾರೆ ಪವನ ವಿದ್ಯುತ್ ಉತ್ಪಾದನೆ 145362 ಮೆಗಾ ವ್ಯಾಟ್ ರಷ್ಟಿದ್ದರೆ, ಅಮೆರಿಕ 74471 ಮೆಗಾ ವ್ಯಾಟ್ ಹಾಗೂ ಜರ್ಮನಿ 44947 ಮೆಗಾ ವ್ಯಾಟ್ ರಷ್ಟಿದೆ.
  • ಆಫ್ರಿಕಾ ಖಂಡದಲ್ಲಿ ದಕ್ಷಿಣಾ ಆಫ್ರಿಕಾ 2015 ರಲ್ಲಿ 1000 ಮೆಗಾ ವ್ಯಾಟ್ ಉತ್ಪಾದಿಸಿ ಈ ಸಾಧನೆ ಮಾಡಿದ ಮೊದಲ ರಾಷ್ಟ್ರವೆನಿಸಿದೆ. ಈಜಿಪ್ಟ್, ಮೊರೊಕ್ಕೊ, ಇಥೋಪಿಯಾ ಮತ್ತು ಕೀನ್ಯಾ ಪವನ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಾಗಿವೆ.
  • ಲ್ಯಾಟಿನ್ ಅಮೆರಿಕದಲ್ಲಿ ಬ್ರೆಜಿಲ್ ಮುಂಚೂಣಿಯಲ್ಲಿದ್ದರೆ ನಂತರದ ಸ್ಥಾನದಲ್ಲಿ ಚಿಲಿ ಮತ್ತು ಉರುಗ್ವೆ ಇವೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಆಗಿ ವಿರಳ್ ಆಚಾರ್ಯ ನೇಮಕ

ಭಾರತೀಯ ರಿಸರ್ವ್ ಬ್ಯಾಂಕ್  ನೂತನ ಉಪ ಗವರ್ನರ್ ಆಗಿ ವಿರಳ್ ಆಚಾರ್ಯರವನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಆಚಾರ್ಯ ರವರು ಮುಂದಿನ ಮೂರು ವರ್ಷಗಳ ಅಧಿಕಾರದಲ್ಲಿ ಇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಆಚಾರ್ಯ ರವರ ನೇಮಕಾತಿಯನ್ನು ಅನುಮೋದಿಸಿದೆ. ಊರ್ಜಿತ್ ಪಟೇಲ್ ಆರ್ ಬಿ ಐ ಗವರ್ನರ್ ಆಗಿ ಬಡ್ತಿ ಹೊಂದಿದ ನಂತರ ತೆರವಾಗಿದ್ದ ಉಪ ಗವರ್ನರ್ ಹುದ್ದೆಗೆ ವಿರಳ್ ಆಚಾರ್ಯರನ್ನು ನೇಮಿಸಲಾಗಿದೆ. ಎಸ್ ಎಸ್ ಮುಂದ್ರಾ, ಆರ್ ಗಾಂಧಿ, ಮತ್ತು ಎಸ್ ಎನ್ ವಿಶ್ವನಾಥನ್ ಭಾರತೀಯ ರಿಸರ್ವ್ ಬ್ಯಾಂಕ್ನ ಉಳಿದ ಗವರ್ನರ್ ಗಳು.

ವಿರಳ್ ಆಚಾರ್ಯ:

  • ಆಚಾರ್ಯ ರವರು ಮುಂಬೈ ಐಐಟಿಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜನಿಯರಿಂಗ್ ನಲ್ಲಿ 1995 ರಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ. 2001 ರಲ್ಲಿ ನ್ಯೂಯಾರ್ಕ್-ಸ್ಟರ್ನ್ ವಿವಿಯಿಂದ ಫೈನಾನ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
  • ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಹಾಗೂ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
  • ನೇಮಕಾತಿಗೆ ಮುನ್ನ ವಿರಳ್ ಆಚಾರ್ಯ ರವರು ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಪ್ ಬ್ಯುಸಿನೆಸ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
  • ಹಣಕಾಸು ವಲಯದ ಮೇಲಿನ ವ್ಯವಸ್ಥೆಯ ಅಪಾಯದ ಕುರಿತಾಗಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ವಿಶ್ಲೇಷಣೆ ಹಾಗೂ ಅದರ ನಿಯಂತ್ರಣ ಕುರಿತಾಗಿ ನಡೆಸಿರುವ ಸಂಶೋಧನೆಯಿಂದ ಆಚಾರ್ಯ ಅವರು ಗುರುತಿಸಿಕೊಂಡಿದ್ದಾರೆ.

Leave a Comment

This site uses Akismet to reduce spam. Learn how your comment data is processed.