ಪಾಸ್ ಪೋರ್ಟ್ ನಿಯಮ ಸಡಿಲಗೊಳಿಸಿದ ಕೇಂದ್ರ ಸರ್ಕಾರ

passಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಲು ಕೇಂದ್ರ ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ನಿಯಮ-1980ಗೆ ತಿದ್ದುಪಡಿ ತಂದಿದ್ದು, ಕೆಲವೊಂದು ಕಠಿಣ ನಿಯಮಗಳಿಗೆ ಬದಲಾವಣೆಗಳನ್ನು ತಂದು ಪ್ರಕಟಣೆ ಹೊರಡಿಸಿದೆ. ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮತ್ತು ತ್ವರಿತಗೊಳಿಸುವುದು ಹಾಗೂ ವಿಧವೆಯರು, ಆನಾಥ ಮಕ್ಕಳು ಮತ್ತು ಸಾಧು ಸನ್ಯಾಸಿಗಳಿಗೆ ಸುಲಭವಾಗಿ ಪಾಸ್ ಪೋರ್ಟ್ ದೊರಕುವಂತೆ ಮಾಡುವುದು ಇದರ ಉದ್ದೇಶ. ಅಲ್ಲದೇ ಸರ್ಕಾರೇತರ ಏಜೆಂಟ್ ಮತ್ತು ಮಧ್ಯವರ್ತಿಗಳ ಅವಶ್ಯಕತೆಯು ಬೇಕಾಗಿಲ್ಲ.

ಹೊಸ ನಿಯಮಗಳು:

  • ವಿಚ್ಛೇದಿತರು/ ಗಂಡನಿಂದ ಪ್ರತ್ಯೇಕವಾಗಿ ಜೀವಿಸುತ್ತಿರುವವರು ಪಾಸ್‌ಪೋರ್ಟ್ ಅರ್ಜಿಯಲ್ಲಿ ಗಂಡನ ಹೆಸರು ಬರೆಯುವ ಅಗತ್ಯ ಇಲ್ಲ.
  • ಸಾಧುಗಳು ಮತ್ತು ಸನ್ಯಾಸಿನಿಯರ ಪಾಸ್‌ಪೋರ್ಟಿನಲ್ಲಿ ಹೆತ್ತವರ ಹೆಸರಿನ ಬದಲಿಗೆ ತಮ್ಮ ಗುರುವಿನ ಹೆಸರು ನಮೂದಿಸಲು ಅವಕಾಶ ನೀಡಲಾಗಿದೆ
  • ಅನಾಥಾಲಯದಲ್ಲಿರುವ ಮಕ್ಕಳ ವಯಸ್ಸನ್ನು ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಬಹುದು. ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅದನ್ನುಘೋಷಿಸಿದರೆ ಸಾಕು.
  • ದತ್ತು ಮಕ್ಕಳಿಗೆ ಪಾಸ್‌ಪೋರ್ಟ್‌ ಪಡೆಯಲು ಅವರನ್ನು ದತ್ತು ಪಡೆದ ಕರಾರಿನ ನೋಂದಿತ ಪ್ರತಿಯನ್ನು ಸಲ್ಲಿಸುವ ಅಗತ್ಯ ಇಲ್ಲ. ದತ್ತು ಪಡೆದಿರುವುದನ್ನು ದೃಢಪಡಿಸುವ ಪತ್ರ ನೀಡಿದರೆ ಸಾಕು
  • ಪಾಸ್ ಪೋರ್ಟ್ ವಿತರಿಸಿದ ಐದು ವರ್ಷಗಳವರೆಗೆ ಜನ್ಮದಿನಾಂಕದಲ್ಲಿ ಬದಲಾವಣೆಯಿಲ್ಲ ಎನ್ನುವ ನಿಯಮವನ್ನು ಸಡಿಲಿಸಿ, ಈ ಬಗ್ಗೆ ಸಲ್ಲಿಕೆಯಾಗುವ ಅರ್ಜಿಯ ವಿಲೇವಾರಿ ಮಾಡುವುದನ್ನು ಪಾಸ್ಪೋರ್ಟ್ ಅಧಿಕಾರಿಗಳ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ.
  • ಸರಕಾರೀ ನೌಕರರು ಎನ್ಓಸಿ ಸೂಕ್ತ ಸಮಯಕ್ಕೆ ನೀಡಲಾಗದಿದ್ದ ಪಕ್ಷದಲ್ಲಿ, ನೌಕರರು ಪಾಸ್ಪೋರ್ಟ್ ಪಡೆಯುವ ಬಗ್ಗೆ ತಮ್ಮತಮ್ಮ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಡಿಕ್ಲರೇಶನ್ ನೀಡಿದರೆ ಸಾಕು.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ತಂದೆ, ತಾಯಿ ಅಥವಾ ಪೋಷಕರಲ್ಲಿ ಯಾರದರೊಬ್ಬರ ಹೆಸರು ನಮೂದಿಸಿದರೆ ಸಾಕು.
  • ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡಬೇಕೆನ್ನುವ ನಿಯಮವನ್ನು ಸಡಿಲಿಸಿ, ಎಸ್ಎಸ್ಎಲ್ಸಿ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್, ಜನ್ಮದಿನಾಂಕ ನಮೂದಿಸಿರುವ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಕಾರ್ಡ್ ಅಥವಾ ಎಲ್ಐಸಿ ಬಾಂಡ್ ನೀಡಬಹುದಾಗಿದೆ.

No Responses to “ಪಾಸ್ ಪೋರ್ಟ್ ನಿಯಮ ಸಡಿಲಗೊಳಿಸಿದ ಕೇಂದ್ರ ಸರ್ಕಾರ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.