ಪಂಜಾಬ್ ನಲ್ಲಿ ಭಾರತದ ಮೊದಲ ಎರಡನೇ ಪೀಳಿಗೆ ಎಥನಾಲ್ ಬಯೋ-ರಿಫೈನರಿ ಘಟಕ

panj_upದೇಶದ ಮೊದಲ ಎರಡನೇ ತಲೆಮಾರಿನ ಎಥನಾಲ್ ಜೈವಿಕ ಶುದ್ದೀಕರಣ ಘಟಕ ಪಂಜಾಬ್ ನ ಬಥಿಂದ ಜಿಲ್ಲೆಯ ಟರ್ಕನ್ವಾಲ ಹಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ಈ ಘಟಕದ ಶಂಕುಸ್ಥಾಪನೆಯನ್ನು ಇತ್ತೀಚೆಗೆ ನೆರವೇರಿಸಲಾಯಿತು. ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ (CPSU), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್, ರೂ 600 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಪ್ರಮುಖಾಂಶಗಳು:

  • ಪ್ರತಿ ದಿನ ಈ ಘಟಕದಲ್ಲಿ 100 ಕಿ.ಲೀ ಎಥನಾಲ್ ಅನ್ನು ಉತ್ಪಾದಿಸಲಾಗುವುದು. ಅಂದರೆ ವಾರ್ಷಿಕ 3.20 ಕೋಟಿ ಲೀಟರ್ ಎಥನಾಲ್ ಅನ್ನು ಕೃಷಿ ತ್ಯಾಜ್ಯದಿಂದ ಉತ್ಪಾದಿಸಲಾಗುವುದು.
  • ಪಂಜಾಬ್ ರಾಜ್ಯದಲ್ಲಿ ಎಥನಾಲ್ ಮಿಶ್ರಣಕ್ಕೆ ಅಗತ್ಯವಿರುವ ಶೇ 26% ಎಥನಾಲ್ ಇದರಿಂದ ಲಭ್ಯವಾಗಲಿದೆ. ಅಲ್ಲದೇ ವಾರ್ಷಿಕ 30,000 ಟನ್ ಜೈವಿಕ ಗೊಬ್ಬರ ಸಹ ತಯಾರಿಸಲಾಗುವುದು.
  • ವಾರ್ಷಿಕ 1 ಲಕ್ಷ ಕೆಜಿ ಬಯೋ-ಸಿಎನ್ ಜಿ ಸಹ ಇಲ್ಲಿ ಉತ್ಪಾದನೆಯಾಗಲಿದೆ. ಬಯೋ-ಸಿಎನ್ ಜಿ ಯನ್ನು ಸಾರಿಗೆ ಮತ್ತು ಅಡುಗೆ ಇಂಧನವಾಗಿ ಬಳಸಬಹುದು.
  • ಈ ಘಟಕದ ಸ್ಥಾಪನೆಯಿಂದ 1200-1400 ಉದ್ಯೋಗ ಸೃಷ್ಟಿಯಾಗಲಿದೆ.
  • ಇವೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಭತ್ತದ ಹುಲ್ಲನ್ನು ಸುಡುವುದು ತಪ್ಪಲಿದೆ. ಇದರಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಬಿಡುಗಡೆ ಗಣನೀಯವಾಗಿ ತಗ್ಗಲಿದೆ.

ಎರಡನೇ ತಲೆಮಾರಿನ ಎಥನಾಲ್ (2nd Generation Ethanol):

ಎರಡನೇ ತಲೆಮಾರಿನ ಎಥನಾಲ್ ಎಂದರೆ ವಿವಿಧ ಬಯೋಮಾಸ್ ನಿಂದ ತಯಾರಿಸಬಹುದಾದ ಇಂಧನ. ಒಂದನೇ ತಲೆಮಾರಿನ ಎಥನಾಲ್ ಅನ್ನು ಕೃಷಿಯೋಗ್ಯ ಬೆಳಗಳಲ್ಲಿನ ಸಕ್ಕರೆ ಮತ್ತು ಎಣ್ಣೆಯನ್ನು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಒಂದನೇ ತಲೆಮಾರಿನ ಎಥನಾಲ್ ಗೆ ಹೋಲಿಸಿದರೆ ಎರಡನೇ ತಲೆಮಾರಿನ ಎಥನಾಲ್ ಅನ್ನು ಸಾಂಪ್ರದಾಯಿಕ ತಂತ್ರಜ್ಞಾನದಿಂದ ಉತ್ಪಾದಿಸುವುದು ಸುಲಭವಲ್ಲ ಮತ್ತು ಈ ಎಥನಾಲ್ ಅನ್ನು ಕೃಷಿ ತ್ಯಾಜ್ಯ, ಲಿಗ್ನೊಸೆಲ್ಯುಲೊಸಿಕ್ ಬಯೊಮಾಸ್ ನಿಂದ ತಯಾರಿಸಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.