ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್ ಗೆ ಚಾಲನೆ

app_upಪ್ರಧಾನಿ ನರೇಂದ್ರ ಮೋದಿರವರು “ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್ (National Apprenticeship Promotion Scheme)” ಗೆ ಉತ್ತರಪ್ರದೇಶದ ಖಾನ್ ಪುರದಲ್ಲಿ ಚಾಲನೆ ನೀಡಿದರು. ಸುಮಾರು 50 ಲಕ್ಷ ಯುವಕರಿಗೆ ಅಪ್ರೆಂಟಿಸ್ಷಿಪ್ ತರಭೇತಿಯನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದಕ್ಕಾಗಿ ಸುಮಾರು ರೂ 10000 ಕೋಟಿಯನ್ನು ಮೀಸಲಾಡಿಗಿದೆ.

“ನ್ಯಾಷನಲ್ ಅಪ್ರೆಂಟಿಸ್ಷಿಪ್ ಪ್ರೊಮೊಷನ್ ಸ್ಕೀಮ್”:

  • ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಡೈರೆಕ್ಟರ್ ಜನರಲ್ ಆಫ್ ಟ್ರೈನಿಂಗ್ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.
  • ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಅಪ್ರೆಂಟಿಸ್ಷಿಪ್ ತರಭೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಂಸ್ಥೆಗಳಿಗೆ ಸಹಾಯಧನ ನೀಡಲಿದೆ.
  • ಅಪ್ರೆಂಟಿಸ್ಷಿಪ್ ತರಭೇತಿ ಪಡೆದುಕೊಳ್ಳುವವರಿಗೆ ನೀಡಲಾಗುವ ಮಾಸಿಕ ಸ್ಟೈಪೆಂಡ್ ನಲ್ಲಿ ಶೇ 25% ರಷ್ಟನ್ನು ಕೇಂದ್ರ ಸರ್ಕಾರ ನೀಡಲಿದೆ.
  • ಇದರ ಜೊತೆಗೆ ಕೇಂದ್ರ ಸರ್ಕಾರ ಅಪ್ರೆಂಟಿಸ್ಷಿಪ್ ತರಭೇತಿಗೆ ಅತ್ಯಂತ ಅವಶ್ಯಕವಾಗಿರುವ ಮೂಲಭೂತ ತರಭೇತಿಯನ್ನು ನೀಡಲಿದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ 50% ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

Leave a Reply

Your email address will not be published. Required fields are marked *