ನವದೆಹಲಿಯಲ್ಲಿ ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಕಚೇರಿ ಉದ್ಘಾಟನೆ

sagar_upಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕಾರಿ ರವರು ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಕಚೇರಿಯನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು. ಸಾಗರಮಾಲೆ ಅಭಿವೃದ್ದಿ ಸಂಸ್ಥೆಯನ್ನು ಕಂಪನಿ ಕಾಯಿದೆ, 2013 ರಡಿ ಸ್ಥಾಪಿಸಲಾಗಿದೆ. ಕೇಂದ್ರ ಶಿಪ್ಪಿಂಗ್ ಸಚಿವಾಲಯದಡಿ ಸಾಗರಮಾಲ ಅಭಿವೃದ್ದಿ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಜುಲೈ, 2017 ರಲ್ಲಿ ಅನುಮೋದನೆ ನೀಡಿತ್ತು.

ಪ್ರಮುಖಾಂಶಗಳು:

  • ಮಹತ್ವಾಕಾಂಕ್ಷಿ ಸಾಗರಮಾಲ ಯೋಜನೆಯಡಿ ಬಂದರು ಆಧರಿತ ಆರ್ಥಿಕ ಯೋಜನೆಗಳನ್ನು ಕೈಗೊಳ್ಳುವುದು ಸಾಗರಮಾಲ ಅಭಿವೃದ್ದಿ ಸಂಸ್ಥೆಯ ಮುಖ್ಯ ಧ್ಯೇಯ.
  • ಕೇಂದ್ರ, ರಾಜ್ಯ ಮತ್ತು ಬಂದರು ಸಂಸ್ಥೆಗಳ ಯೋಜನೆಗಳಿಗೆ ಈಕ್ವಿಟಿ ನೆರವು ನೀಡುವುದು.
  • ಗುರುತಿಸಲ್ಪಟ್ಟ ಯೋಜನೆಗಳ ಅನುಷ್ಠಾನವನ್ನು ಬಹು ಏಜೆನ್ಸಿಗಳು ಕೈಗೊಳ್ಳಲಿದ್ದು ಈ ಕಾರಣದಿಂದ ಎಸ್‍ಡಿಸಿ, ನೋಡಲ್ ಏಜೆನ್ಸಿಯಾಗಿ ಇವೆಲ್ಲದರ ನಡುವೆ ಸಮನ್ವಯ ಸಾಧಿಸುವ ಮತ್ತು ಎಲ್ಲ ಕಾಮಗಾರಿಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ನಿರ್ವಹಿಸಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.