ಘನ ಇಂಧನ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದ ಜಪಾನ್

japan_upಜಪಾನ್ ಏರೋಸ್ಪೇಸ್ ಎಕ್ಸಪ್ಲೋರೇಶನ್ ಏಜೆನ್ಸಿ (JAXA) ಘನ ಇಂಧನ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ಎಪ್ಸಿಲಾನ್-2 (Epsilon-2) ಹೆಸರಿನ ಈ ರಾಕೆಟ್ ಅನ್ನು ದಕ್ಷಿಣ ಜಪಾನಿನ ಉಚಿನೌರ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಗಿದೆ. ಈ ರಾಕೆಟ್ 26 ಮೀಟರ್ ಉದ್ದವಿದೆ. ಎಪ್ಸಿಲಾನ್ ರಾಕೆಟ್ ಬಳಸಿ ಭೂಮಿಯ ಸುತ್ತ ವಿಕಿರಣ ಪಟ್ಟಿಯನ್ನು ಅಧ್ಯಯನ ನಡೆಸುವ ERG (Energization and Radiation in Geospace) ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ಪ್ರಮುಖಾಂಶಗಳು:

  • ERG ಉಪಗ್ರಹ ಭೂಮಿಯ ಸುತ್ತ ಅಂಡಕಾರದ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿ ಅಂದರೆ 350 ಕಿ.ಮೀ ಅಂತರದಲ್ಲಿ ಹಾಗೂ ಭೂಮಿಯಿಂದ 30,000 ಕಿ.ಮೀ ದೂರದಲ್ಲಿ ಸುತ್ತಲಿದೆ.
  • ಈ ಕಕ್ಷೆಯಲ್ಲಿ ಉಪಗ್ರಹವು “ವ್ಯಾನ್ ಅಲ್ಲೆನ್ ರೇಡಿಯೇಷನ್ ಬೆಲ್ಟ್ (Van Allen Radiation Belts)” ಚಲಿಸುತ್ತದೆ. ಈ ಭಾಗದಲ್ಲಿ ಭೂಮಿಯ ಕಾಂತಕ್ಷೇತ್ರ ವೇಗವಾಗಿ ಚಲಿಸುವ ಎಲೆಕ್ಟ್ರಾನ್ ಹಾಗೂ ಸೂಕ್ಷ ಕಣಗಳನ್ನು ಸೆಳೆದಿರುತ್ತದೆ.
  • ಈ ಎಲೆಕ್ಟ್ರಾನ್ ಕಣಗಳು ಉಪಗ್ರಹದ ಕಂಪ್ಯೂಟರ್ ವ್ಯವಸ್ಥೆಯನ್ನು ಹಾನಿ ಮಾಡುವುದಲ್ಲದೇ, ಗಗನಯಾತ್ರಿಗಳಿಗೂ ವಿಕಿರಣ ಅಪಾಯವನ್ನು ತಂದೊಡ್ಡುತ್ತವೆ.
  • ERG ಉಪಗ್ರಹವು ವಿಕಿರಣ ಪಟ್ಟಿಯನ್ನು ಅಧ್ಯಯನ ನಡೆಸಲು ಒಂಬತ್ತು ಉಪಕರಣಗಳನ್ನು ಒಳಗೊಂಡಿದೆ.

ಎಪ್ಸಿಲಾನ್-2 ರಾಕೆಟ್ ಹೊಸ ತಲೆಮಾರಿನ ಘನ ಇಂಧನ ರಾಕೆಟ್ ಆಗಿದ್ದು, ಇದರಿಂದ ಉಡಾವಣ ವೆಚ್ಚದ 1/3 ರಷ್ಟು ಕಡಿಮೆಯಾಗಲಿದೆ. ಈ ಉಳಿತಾಯದಿಂದ ಹಲವು ಸಂಪರ್ಕ ಮತ್ತು ಹವಾಮಾನ ಉಪಗ್ರಹಗಳನ್ನು ಉಡಾಯಿಸಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.