ಒಡಿಶಾ ಸರ್ಕಾರದಿಂದ ಬಿಜು ಶಿಶು ಸುರಕ್ಷ್ಯ ಯೋಜನೆಗೆ ಚಾಲನೆ

odis_upಮಕ್ಕಳ ಆರೈಕೆ ಕೇಂದ್ರ ಮತ್ತು ಆನಾಥಶ್ರಮಗಳಲ್ಲಿರುವ ಆನಾಥ ಮತ್ತು ಹೆಚ್ಐವಿ ಸೋಕು ಪೀಡಿತ ಮಕ್ಕಳ ಪಾಲನೆ ಮಾಡಲು ಒಡಿಶಾ ಸರ್ಕಾರ ಬಿಜು ಶಿಶು ಸುರಕ್ಷ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆನಾಥ ಮತ್ತು ಹೆಚ್ಐವಿ ಸೋಂಕು ಪೀಡಿತ ಮಕ್ಕಳ ರಕ್ಷಣೆ ಮತ್ತು ಆರೈಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಯೋಜನೆಯ ಮುಖ್ಯಾಂಶಗಳು:

  • ಹೆಚ್ಐವಿ ಪೀಡಿತ ಮಕ್ಕಳ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಹಾಗೂ ಉತ್ತಮ ಭವಿಷ್ಯ, ಪುನರ್ವಸತಿಗಾಗಿ ಆರ್ಥಿಕ ನೆರವನ್ನು ನೀಡಲಾಗುವುದು.
  • ಈ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನವನ್ನು ನೀಡಲಿದೆ.
  • ಹೆಣ್ಣು ಮಕ್ಕಳ ಸುಕನ್ಯಾ ಸಮೃದ್ದಿ ಯೋಜನೆ ಖಾತೆಗೆ ರಾಜ್ಯ ಸರ್ಕಾರ ಹೆಣ್ಣು ಮಗುವಿನ ವಯಸ್ಸು 18 ವರ್ಷ ತುಂಬುವವರೆಗೆ ರೂ 1000 ಜಮೆ ಮಾಡಲಿದೆ.
  • ಪ್ರತಿ ಜಿಲ್ಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಮತ್ತು ಹೈಯರ್ ಸೆಕೆಂಡರಿ ಸ್ಕೂಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ರೂ 20000ವನ್ನು ನೀಡಲಾಗುವುದು.

Leave a Reply

Your email address will not be published. Required fields are marked *