ಈ ಬಾರಿಯ ಸಂದೇಶ ಪ್ರಶಸ್ತಿಗೆ ನಟ ಪ್ರಕಾಶ್ ರೈ ಸೇರಿ ಏಳು ಮಂದಿ ಆಯ್ಕೆ

pr_upಮಂಗಳೂರಿನ ಸಂದೇಶ ಫೌಂಡೇಷನ್‌ ಫಾರ್‌ ಕಲ್ಚರ್‌ ಆಂಡ್‌ ಎಜುಕೇಶನ್‌ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ‘ಸಂದೇಶ’ ಪ್ರಶಸ್ತಿಗೆ ಈ ಬಾರಿ ಏಳುಮಂದಿಯನ್ನು ಆಯ್ಕೆಮಾಡಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರು:

  • ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ, ನಟ ಪ್ರಕಾಶ್‌ ರೈ , ಕೆ. ಯುವರಾಜ್‌ (ಕಲೆ),  ಅನಿಲ್‌ ಪತ್ರಾವೊ (ಕೊಂಕಣಿ ಸಂಗೀತ), ಜಾನ್‌ ದೇವರಾಜ್‌ (ವಿಶೇಷ ಪ್ರಶಸ್ತಿ) ಮತ್ತು ಶಮಿತಾ ರಾವ್‌–ರೆನಿಟಾ ಲೋಬೊ (ಶಿಕ್ಷಣ) ಅವರು ಸಂದೇಶ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರು.
  • ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿದೆ. ಜನವರಿ 13ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ, ಹಿರಿಯ ಸಾಹಿತಿ ನಾ.ಡಿಸೋಜ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿದೆ ಎಂದರು.
  • ಪ್ರಶಸ್ತಿಯನ್ನು ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ–ಸಂಸ್ಕೃತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡುತ್ತಾ ಬಂದಿರುವ ನಾಡಿನ ಹಿರಿಯ ಸಾಹಿತಿ, ಕಲಾವಿದರ, ಶಿಕ್ಷಕ ಹಾಗೂ ಸಮಾಜ ಸೇವಕರಿಗೆ ನೀಡಲಾಗುವುದು.

No Responses to “ಈ ಬಾರಿಯ ಸಂದೇಶ ಪ್ರಶಸ್ತಿಗೆ ನಟ ಪ್ರಕಾಶ್ ರೈ ಸೇರಿ ಏಳು ಮಂದಿ ಆಯ್ಕೆ”

Leave a Reply

Your email address will not be published. Required fields are marked *