ಅಸ್ಸಾಂ ಸರ್ಕಾರದಿಂದ ಅಟಲ್ ಅಮೃತ್ ಅಭಿಯಾನ್ ಆರೋಗ್ಯ ವಿಮಾ ಯೋಜನೆ ಜಾರಿ

ata_upಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗಲು ಅಸ್ಸಾಂ ಸರ್ಕಾರ ಅಟಲ್ ಅಮೃತ್ ಅಭಿಯಾನ ಹೆಸರಿನ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಅಸ್ಸಾಂನ ಪ್ರತಿ ಕುಟುಂಬಕ್ಕೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಈ ಯೋಜನೆಯ ಗುರಿ. ದೇಶದಲ್ಲಿ ಇದುವರೆಗೂ ಜಾರಿಗೊಳಿಸಿರುವ ಆರೋಗ್ಯ ಸೇವಾ ಯೋಜನೆಯಲ್ಲಿ ಅತ್ಯಂತ ದೊಡ್ಡ ಯೋಜನೆ ಇದಾಗಿದೆ ಎನ್ನಲಾಗಿದೆ. ಈ ಯೋಜನೆಗಾಗಿ ಅಸ್ಸಾಂ ಸರ್ಕಾರ ರೂ 200 ಕೋಟಿಯನ್ನು ಮೀಸಲಿಟ್ಟಿದೆ.

ಯೋಜನೆಯ ಪ್ರಮುಖಾಂಶಗಳು:

  • ಐದು ಲಕ್ಷ ವಾರ್ಷಿಕ ವರಮಾನಕ್ಕಿಂತ ಕಡಿಮೆ ಇರುವ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
  • ಯೋಜನೆಯ ಫಲಾನುಭವಿಗಳು ಆರು ಪ್ರಮುಖ ವಿಭಾಗದಲ್ಲಿ ಸುಮಾರು 437 ಕಾಯಿಲೆಗಳಿಗೆ ಕ್ಯಾಶ್ ಲೆಸ್ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದಾಗಿದೆ. ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರಲಿದೆ.
  • ಆರು ವಿಭಾಗಗಳೆಂದರೆ ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ನರವ್ಯೂಹ ಸಂಬಂಧಿಸಿದ ಕಾಯಿಲೆ, ಸುಟ್ಟಗಾಯ ಮತ್ತು ಪ್ರಸವ ರೋಗಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.