ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

agni_upಭಾರತದ ಸ್ವದೇಶಿ ನಿರ್ಮಿತ, ಭೂಮಿಯಿಂದ ಭೂಮಿಗೆ ಚಿಮ್ಮುವ ಅತ್ಯಂತ ಶಕ್ತಿಶಾಲಿ  ಖಂಡಾಂತರ ಕ್ಷಿಪಣಿ ಅಗ್ನಿ–5ರ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಒಡಿಶಾದ ವೀಲರ್ ದ್ವೀಪದಲ್ಲಿ ದೂರಗಾಮಿ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.

ಅಗ್ನಿ-5 ಕ್ಷಿಪಣಿ ಬಗ್ಗೆ:

  • ಅಗ್ನಿ-5 ಕ್ಷಿಪಣಿ ಮೂರು ಹಂತದ ಘನ ನೋದಕ ಖಂಡಾಂತರ ಕ್ಷಿಪಣಿ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಇದನ್ನು ಅಭಿವೃದ್ದಿಪಡಿಸಿದೆ.
  • ಅಗ್ನಿ ಸರಣಿಯ ಇತರೆ ಕ್ಷಿಪಣಿಗಳಿಗೆ ಹೋಲಿಸಿದರೆ ಅಗ್ನಿ-5 ಕ್ಷಿಪಣಿ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.
  • ಅಗ್ನಿ 5 ಕ್ಷಿಪಣಿಯು 17 ಮೀಟರ್‌ ಉದ್ದವಿದೆ; 2 ಮೀಟರ್‌ ಅಗಲವಿದೆ ಮತ್ತು ಉಡಾವಣಾ ಭಾರ ಸುಮಾರು 50 ಟನ್‌ ಇದೆ. ಒಂದು ಟನ್‌ಗಿಂತಲೂ ಅಧಿಕ ತೂಕದ ಅಣು ಸಿಡಿತಲೆಯನ್ನು ಇದು ಒಯ್ಯುವ ಸಾಮರ್ಥ್ಯ ಹೊಂದಿದೆ. ಇದರ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚಿದೆ.
  • ಆ ಮೂಲಕ ಈ ಕ್ಷಿಪಣಿ ಚೀನಾದ ಪ್ರತೀ ಸ್ಥಳವೂ ಸೆರಿದಂತೆ ಏಷ್ಯಾ, ಆಫ್ರಿಕಾ ಮತ್ತು ಯರೋಪ್ ಖಂಡದ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.

ಈ ಕ್ಷಿಪಣಿ ಭಾರತ ಸೇನೆಗೆ ಸೇರ್ಪಡೆಗೊಂಡರೆ ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಅಮೆರಿಕ, ಚೀನಾ, ಫ್ರಾನ್ಸ್, ಯುಕೆ ಈಗಾಗಲೇ ಖಂಡಾಂತರ ಕ್ಷಿಪಣಿಯನ್ನು ಹೊಂದಿವೆ. ಅಲ್ಲದೇ ಇದರಿಂದ ಭಾರತದ ರಕ್ಷಣಾ ಸಾಮರ್ಥ್ಯವು ಹೆಚ್ಚಲಿದೆ. ಪ್ರಸ್ತುತ ಭಾರತ ಈಗಾಗಲೇ ಅಗ್ನಿ ಕ್ಷಿಪಣಿ ಸರಣಿಯ ಅಗ್ನಿ-1 (700 ಕಿ.ಮೀ ವ್ಯಾಪ್ತಿ), ಅಗ್ನಿ-2 (2000 ಕಿ.ಮೀ ವ್ಯಾಪ್ತಿ), ಅಗ್ನಿ-3 (2500 ಕಿ.ಮೀ ವ್ಯಾಪ್ತಿ) ಮತ್ತು ಅಗ್ನಿ-4 (3,500 ಕಿ.ಮೀ ವ್ಯಾಪ್ತಿಯನ್ನು) ಹೊಂದಿದೆ.

Leave a Reply

Your email address will not be published. Required fields are marked *