ಬಂಗಾಳ ಕೊಲ್ಲಿಯಲ್ಲಿ ದೊಡ್ಡ “ಸತ್ತ ವಲಯ (ಡೆಡ್ ಝೋನ್) ಪತ್ತೆ

bengal_upಭಾರತ ವಿಜ್ಞಾನಿಗಳನ್ನು ಒಳಗೊಂಡ ವಿಜ್ಞಾನಿಗಳ ತಂಡ ಬಂಗಾಳ ಕೊಲ್ಲಿಯಲ್ಲಿ ಸುಮಾರು 60,000 ಚದರ ಕಿಲೋ ಮೀಟರ್ ವ್ಯಾಪ್ತಿಯ ದೊಡ್ಡ “ಸತ್ತ ವಲಯ (Dead Zone)”ವನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶದವು ಅಪಾರ ಪ್ರಮಾಣದ ಸಾರಜನಕವನ್ನು ಸಾಗರದಿಂದ ಹೊರತೆಗೆಯುವ ಸೂಕ್ಷಜೀವಿಗಳ ಪ್ರಕ್ರಿಯೆಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ. ನೇಚರ್ ಜಿಯೋಸೈನ್ಸ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.

ಡೆಡ್ ಝೋನ್ ಎಂದರೇನು?

ಡೆಡ್ ಝೋನ್ ಎಂದರೆ ನೀರಿನ ತಳದಲ್ಲಿ ಕಡಿಮೆ ಅಥವಾ ಶೂನ್ಯ ಆಮ್ಲಜನಕವನ್ನು ಹೊಂದಿರುವ ಪ್ರದೇಶ. ಸಾಮಾನ್ಯವಾಗಿ ಇಂತಹ ಪ್ರದೇಶಗಳ ನೈಸರ್ಗಿಕವಾಗಿ ಕಂಡು ಬರುತ್ತವೆಯಾದರೂ ಮಾನವನ ಚಟುವಟಿಕೆಯಿಂದಾಗುವ ವಿಪರೀತ ಪೌಷ್ಠಿಕ ಮಾಲಿನ್ಯದಿಂದಲು ಉಂಟಾಗಬಹುದು. ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿ, ನಮಿಬೀಯಾದ ಕರಾವಳಿ ತೀರಾ ಪ್ರದೇಶ ಮತ್ತು ಭಾರತದ ಪಶ್ಚಿವ ತೀರಾ ಅಂದರೆ ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಡೆಡ್ ಝೋನ್ ಗಳು ಕಂಡುಬರುತ್ತವೆ.

ಸಂಶೋಧನೆಯ ಪ್ರಮುಖಾಂಶಗಳು:

  • ಸಿಎಸ್ಐಆರ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿಯ ಸಂಶೋಧಕರನ್ನು ಒಳಗೊಂಡ ಸಂಶೋಧಕರ ತಂಡ ಬಂಗಾಳ ಕೊಲ್ಲಿಯ ನೀರಿನಲ್ಲಿ ಕೆಲವು ಪ್ರಮಾಣದ ಆಮ್ಲಜನಕ ಇರುವುದಾಗಿ ಹೇಳಿದ್ದಾರೆ.
  • ಆದರೆ ಆಮ್ಲಜನಕ ಲಭ್ಯತೆ ಪ್ರಮಾಣ ಇತರೆ ನೀರಿನ ಮೂಲಗಳಿಗೆ ಹೋಲಿಸಿದರೆ 10000 ಪಟ್ಟು ಕಡಿಮೆ ಎನ್ನಲಾಗಿದೆ.
  • ಬಂಗಾಳ ಕೊಲ್ಲಿಯಲ್ಲಿ ಸೂಕ್ಷಜೀವಿಗಳ ಚಟುವಟಿಕೆಗೆ ತಾಣವಾಗಿದ್ದು, ನಿಧಾನ ಗತಿಯಲ್ಲಿ ಸಾರಜನಕವನ್ನು ಹೊರಹಾಕುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
  • ಸಾಗರದಲ್ಲಿ ಸಾರಜನಕ ಹೊರತೆಗೆಯುವ ಪ್ರಕ್ರಿಯೆಯಿಂದ ಸಮುದ್ರದಲ್ಲಿ ಸಾರಜನಕ ಸಮತೋಲನ ಹಾಗೂ ಸಮುದ್ರ ಉತ್ಪಾದಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

No Responses to “ಬಂಗಾಳ ಕೊಲ್ಲಿಯಲ್ಲಿ ದೊಡ್ಡ “ಸತ್ತ ವಲಯ (ಡೆಡ್ ಝೋನ್) ಪತ್ತೆ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.