ಜಾಗತಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ನಿಗಾವಹಿಸಲು ಚೀನಾದಿಂದ ಉಪಗ್ರಹ

china_upಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಜಾಗತಿಕ ಇಂಗಾಲ ಡೈ ಆಕ್ಸೈಡ್ (CO2) ಪರಿವೀಕ್ಷಣಾ ಟಾನ್ ಸ್ಯಾಟ್ (TanSat) ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಹಾರಿಸಿದೆ. ಅದು ವಾಯುವ್ಯದಲ್ಲಿ ಚೀನಾದ ಗೋಬಿ ಮರುಭೂಮಿಯಲ್ಲಿ ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 2D ರಾಕೆಟ್ ಬಳಸಿ ಈ ಉಪಗ್ರಹವನ್ನು ಉಡಾಯಿಸಲಾಯಿತು. ಇದು ಲಾಂಗ್ ಮಾರ್ಚ್ ರಾಕೆಟ್ ಸರಣಿಯ 243ನೇ ಉಡಾವಣೆಯಾಗಿದೆ. ಹಸಿರು ಮನೆ ಅನಿಲ ಮೇಲೆ ನಿಗಾವಹಿಸುವ ಉಪಗ್ರಹಗಳನ್ನು ಈಗಾಗಲೇ ಅಮೆರಿಕ ಮತ್ತು ಜಪಾನ್ ಹೊಂದಿದ್ದು, ಚೀನಾ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದೆ.

ಟಾನ್ ಸ್ಯಾಟ್ ಉಪಗ್ರಹದ ಬಗ್ಗೆ:

  • ಟಾನ್ ಸ್ಯಾಟ್ ಉಪಗ್ರಹ ಪ್ರತಿ 16 ಗಂಟೆಗಳಿಗೊಮ್ಮೆ ಜಾಗತಿಕ ಇಂಗಾಲ ಡೈ ಆಕ್ಸೈಡ್ ಮಟ್ಟದ ಮೇಲೆ ನಿಗಾವಹಿಸಲಿದೆ.
  • ಟಾನ್ ಸ್ಯಾಟ್ ಉಪಗ್ರಹದ ತೂಕ 620 ಕೆ.ಜಿ. ಭೂಮಿಯ ಮೇಲೆ 700 ಕಿ.ಮೀ ದೂರದಲ್ಲಿ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಉಪಗ್ರಹದ ಕಾರ್ಯಾವದಿ ಮೂರು ವರ್ಷ.
  • ಈ ಉಪಗ್ರಹದಿಂದ ಹವಾಮಾನ ಬದಲಾವಣೆ ಕುರಿತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೇ ಚೀನಾದ ಪರಿಸರ ತಜ್ಷರಿಗೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಸೂಕ್ತ ಮಾಹಿತಿಯನ್ನು ರವಾನಿಸಲಿದೆ. ಜಗತ್ತಿನಾದ್ಯಂತ ಸಂಶೋಧಕರು ಇದರ ಮಾಹಿತಿಯನ್ನು ಪಡೆದಕೊಳ್ಳಬಹುದಾಗಿದೆ.
  • ಉಪಗ್ರಹದಿಂದ ಹವಾಮಾನ ಬದಲಾವಣೆ ಮತ್ತು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಕಾರ್ಬನ್ ಟ್ರೇಡಿಂಗ್ ನಡೆಸಲು ಚೀನಾಗೆ ವರದಾನವಾಗಲಿದೆ.

Leave a Reply

Your email address will not be published. Required fields are marked *