ಖ್ಯಾತ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಹರಿದ್ವಾರದಲ್ಲಿ ಆನಾವರಣ

tir_upಹೆಸರಾಂತ ತಮಿಳು ಕವಿ ಹಾಗೂ ತತ್ವಜ್ಞಾನಿ ಸಂತ ತಿರುವಳ್ಳುವರ್ ರವರ 12 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ಹರಿದ್ವಾರದ ಮೇಳ ಭವನದಲ್ಲಿ ಉತ್ತರಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ರವರು ಉದ್ಘಾಟಿಸಿದರು. ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ತರುಣ್ ವಿಜಯ್ ರವರು ತಿರುವಳ್ಳುವರ್ ರವರ ಪ್ರತಿಮೆಯ ಪ್ರತಿಷ್ಠಾಪನ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದ ಮೊದಲಿಗರು. ಈ ಮುಂಚೆ ಪ್ರತಿಮೆಯನ್ನು “ಹರಿ ಕಾ ಪೌರಿ” ಹತ್ತಿರ ಗಂಗಾ ನದಿಯ ದಡದ ಮೇಲೆ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿತ್ತು ಆದರೆ ಸಾಧು ಸಂತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಸ್ಥಳವನ್ನು ಬದಲಾಯಿಸಲಾಯಿತು.

ತಿರುವಳ್ಳುವರ್ ಬಗ್ಗೆ:

  • ಕವಿ ಹಾಗೂ ತತ್ವಜ್ಞಾನಿ ಸಂತ ತಿರುವಳ್ಳುವರ್ ರವರು 3ನೇ ಶತಮಾನ ಹಾಗೂ 1ನೇ ಶತಮಾನದ ನಡುವೆ ಬದುಕಿದ್ದರು ಎಂದು ನಂಬಲಾಗಿದೆ. ಈ ನಂಬಿಕೆ ಅವರ ಬರಹಗಳ ಭಾಷೆಯ ಮೇಲೆ ವಿಶ್ಲೇಷಣೆ ಆಧರಿಸಿದೆ. ಆದರೆ ಅವರು ವಾಸಿಸುತ್ತಿದ್ದ ಜಾಗ ಹಾಗೂ ಯಾವಾಗ ವಾಸಿಸುತ್ತಿದ್ದರು ಎನ್ನುವ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳು ಲಭ್ಯವಿಲ್ಲ.
  • ತಿರುವಳ್ಳುವರ್ ರವರು ಕನ್ಯಾಕುಮಾರಿ ಜಿಲ್ಲೆಯ ತಿರುಣೈನರ್ ಕುರುಚಿ ಅಥವಾ ಚೆನ್ನೈ ತಿರು ಮೈಲಾಯಿ ಯಲ್ಲಿ ಜನಿಸಿದ್ದರು ಎಂಬುದು ನಂಬಿಕೆ.
  • ತಮಿಳು ಭಾಷೆಯ ಪ್ರಾಚೀನ ಸಾಹಿತ್ಯದ ಶ್ರೇಷ್ಠ ಪುಸ್ತಕವಾದ “ತಿರುಕ್ಕುರಳಾ” ಪುಸ್ತಕವನ್ನು ರಚಿಸಿದವರು ತಿರುವಳ್ಳುವರ್.
  • ತಿರುಕ್ಕುರಳ್ 1330 ದ್ವಿಪದಿಗಳು ಅಥವಾ ಕುರಲ್ ಒಳಗೊಂಡ ಶಾಸ್ತ್ರೀಯ ತಮಿಳು ಸಂಗಮ ಸಾಹಿತ್ಯ. ಈ ಪುಸ್ತಕವನ್ನು ಐದನೇ ವೇದ ಅಥವಾ ತಮಿಳು ಭೂಮಿಯ ಬೈಬಲ್ ಎಂದೇ ಕರೆಯಲಾಗುತ್ತಿದೆ.
  • ತಿರುವಳ್ಳುವರ್ ರವರ 133 ಅಡಿ ಎತ್ತರದ ಪ್ರತಿಮೆಯನ್ನು ಕನ್ಯಾಕುಮಾರಿಯಲ್ಲಿ ಸ್ಥಾಪಿಸಲಾಗಿದೆ. ಅಲ್ಲದೇ ಲಂಡನ್ ನಲ್ಲಿಯು ಇವರ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ.

Leave a Reply

Your email address will not be published. Required fields are marked *