ರಾಜಸ್ತಾನ ಸರ್ಕಾರದಿಂದ ಅನ್ನಪೂರ್ಣ ರಸೊಯಿ ಯೋಜನೆ

raj_upತಮಿಳುನಾಡು ಸರ್ಕಾರದ ಮಾದರಿಯಲ್ಲೇ ರಾಜಸ್ತಾನ ಸರ್ಕಾರ ಅನ್ನಪೂರ್ಣ ರಸೊಯಿ ಯೋಜನೆಯನ್ನು ಜಾರಿಗೆ ತಂದಿದೆ. ಬಡವರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಪೂರೈಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ವಸುಂದರ ಬಜೆ ಅವರು ಈ ಯೋಜನೆಗೆ ಜೈಪುರ ಮುನಿಸಿಪಾಲ್ ಕಾರ್ಪೋರೇಶನ್ ಆವರಣದಲ್ಲಿ ಚಾಲನೆ ನೀಡಿದರು. “ಎಲ್ಲರಿಗೂ ಆಹಾರ ಮತ್ತು ಎಲ್ಲರಿಗೂ ಗೌರವ” ಇದು ಈ ಯೋಜನೆಯ ಧ್ಯೇಯವಾಕ್ಯ.

ಯೋಜನೆಯ ವಿಶೇಷತೆಗಳು:

  • ಈ ಯೋಜನೆಯಡಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಇದರಡಿ 5 ರೂ ಗೆ ಉಪಹಾರ ಹಾಗೂ 8 ರೂ ಗೆ ಊಟ ದೊರೆಯಲಿದೆ.
  • ರಾಜಸ್ತಾನದ ಸ್ಥಳೀಯ ಸ್ವ ಸರ್ಕಾರ ಇಲಾಖೆ ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ. ನುರಿತ ಅನುಭವ ಹೊಂದಿರುವ ಸಿಬ್ಬಂದಿ ಆಹಾರವನ್ನು ತಯಾರಿಸಲಿದ್ದಾರೆ.
  • 80 ವಾಹನಗಳಲ್ಲಿ ಆಹಾರವನ್ನು ನಿಗದಿಪಡಿಸಿದ ಸ್ಥಳಕ್ಕೆ ರವಾನಿಸಲಾಗುವುದು.
  • ರಿಕ್ಷಾ ಎಳೆಯುವವರು, ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಮಿಕರು ಹಾಗೂ ಹಿರಿಯರು ಮತ್ತು ದುರ್ಬಲ ವರ್ಗದವರು ಯೋಜನೆಯ ಫಲಾನುಭವಿಗಳು.
  • ಮೊದಲ ಹಂತದಲ್ಲಿ ಯೋಜನೆಯನ್ನು 12 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಎರಡನೇ ಹಂತದಲ್ಲಿ ಉಳಿದ 21 ಜಿಲ್ಲೆಗಳಲ್ಲಿ ಚಾಲನೆ ನೀಡಲಾಗುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.