ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿ

pra_upನೋಟು ರದ್ದತಿ ನಂತರ ಕಾಳಧನವನ್ನು ಬಿಳಿ ಮಾಡಿಕೊಳ್ಳುವ ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಹಾಗೂ ತೆರಿಗೆ ಕಾನೂನು (ಎರಡನೇ ತಿದ್ದುಪಡಿ) ಕಾಯಿದೆ-2016 ಡಿಸೆಂಬರ್ 17, 2016 ರಿಂದ ಜಾರಿಗೆ ಬರಲಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಕೇಂದ್ರ ಸರ್ಕಾರದ ಎರಡನೇ ಆದಾಯ ಘೋಷಣೆ ಯೋಜನೆಯಾಗಿದ್ದು, ತೆರಿಗೆ ವಂಚಿತರು ಅಘೋಷಿತ ತೆರಿಗೆಯಿಂದ ಹೊರ ಬರಲು ಅವಕಾಶ ನೀಡಲಿದೆ. ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಹಾಗೂ ಇತರೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಅವಕಾಶವನ್ನು ಯೋಜನೆಯಡಿ ಕಲ್ಪಿಸಲಾಗಿದೆ.

  • ಈ ಯೋಜನೆಯಡಿ ಯಾವುದೇ ವ್ಯಕ್ತಿ ನಗದು ಅಥವಾ ಬ್ಯಾಂಕಿನಲ್ಲಿರುವ ಅಘೋಷಿತ ಹಣವನ್ನು ಘೋಷಿಸಿಕೊಳ್ಳಬಹುದು.
  • ಹೀಗೆ ಘೋಷಿಸಲಾದ ಹಣದ ಮೇಲೆ ಶೇ 30% ತೆರಿಗೆ, ಶೇ 10% ದಂಡ ಹಾಗೂ ತೆರಿಗೆ ಮೇಲೆ ಶೇ 33% ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸೆಸ್ ಅನ್ನು ವಿಧಿಸಲಾಗುವುದು.
  • ಇದಲ್ಲದೇ ಅಘೋಷಿತ ಹಣದ ಶೇ 25% ರಷ್ಟನ್ನು ಶೂನ್ಯ ಬಡ್ಡಿ ದರದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಡಿಪಾಸಿಟ್ ಯೋಜನೆ-2016 ಯಡಿ ನಾಲ್ಕು ವರ್ಷ ಲಾಕ್ ಇನ್ ಅವಧಿಯಲ್ಲಿ ಇಡಬೇಕು.
  • ಯೋಜನೆಯಡಿ ಮಾಡಲಾಗುವ ಘೋಷಣೆಯನ್ನು ರಹಸ್ಯವಾಗಿ ಇಡಲಾಗುವುದು.
  • ಬಹಿರಂಗಪಡಿಸದ ನಗದು ಅಥವಾ ಖಾತೆಗಳಲ್ಲಿ ಠೇವಣೆ ಇಟ್ಟಿರುವ ಹಣಕ್ಕೆ ಯೋಜನೆಯಡಿ ತೆರಿಗೆ, ಹೆಚ್ವುವರಿ ತೆರಿಗೆ ಹಾಗೂ ಸೆಸ್ ಸೇರಿ ಒಟ್ಟಾರೆ ಶೇ 77.5% ರಷ್ಟನ್ನು ವಿಧಿಸಲಾಗುವುದು.

ಯೋಜನೆಯಡಿ ಸಂಗ್ರಹಿಸಲಾಗುವ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುವುದು. ಮುಖ್ಯವಾಗಿ ನೀರಾವರಿ ಯೋಜನೆ, ಮೂಲಭೂತ ಸೌಕರ್ಯ, ಪ್ರಾಥಮಿಕ ಶಿಕ್ಷಣ, ವಸತಿ, ಶೌಚಾಲಯ ಮತ್ತು ಜೀವನೋಪಾಯಕ್ಕೆ ಬಳಸಲಾಗುವುದು.

Leave a Reply

Your email address will not be published. Required fields are marked *