“ವನಜೀವನ್” ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಿರುವ ಕೇಂದ್ರ ಸರ್ಕಾರ

ಬುಡಕಟ್ಟು ಜನರ ಜೀವನೋಪಾಯ ಕಟ್ಟಿಕಡಲು “ವನಜೀವನ್” ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯ ಭುಬನೇಶ್ವರ, ಒಡಿಶಾದಲ್ಲಿ ಆರಂಭಿಸಲಿದೆ. ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP) ಹಾಗೂ ರಾಷ್ಟ್ರೀಯ ಪರಿಶಿಷ್ಟ ಹಣಕಾಸು ಅಭಿವೃದ್ದಿ ನಿಗಮ ಸಹಯೋಗದೊಂದಿಗೆ ವನಜೀವನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ.

ಮುಖ್ಯಾಂಶಗಳು:

  • van_upಮೊದಲ ಹಂತದಲ್ಲಿ ಬುಡಕಟ್ಟು ಜನಾಂಗದ ಪೈಕಿ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ತೀರಾ ಹಿಂದಿರುವ ಆರು ರಾಜ್ಯಗಳ ಆಯ್ದಾ ಜಿಲ್ಲೆಗಳಲ್ಲಿ “ವನಜೀವನ್” ಕೇಂದ್ರವನ್ನು ಆರಂಭಿಸಲಾಗುವುದು. ಈ ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವ ಕಾರ್ಯನಡೆಯಲಿದೆ.
  • ಕಾರ್ಯಕ್ರಮದಡಿ ಅಸ್ಥಿತ್ವದಲ್ಲಿರುವ ಕೌಶಲ್ಯ ಮಟ್ಟಕ್ಕೆ ಅನುಗುಣವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಗುರುತಿಸಿಲಾಗುವುದು.
  • ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಹಣವನ್ನು ಮೇಲಿನ ಉದ್ದೇಶಗಳಿಗೆ ಬಳಸಲು ವನಜೀವನ್ ಸಹಕರಿಸಲಿದೆ.
  • ಮೊದಲ ಹಂತದಲ್ಲಿ ಅಸ್ಸಾಂ, ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ, ಒಡಿಶಾ ಮತ್ತು ತೆಲಂಗಣ ರಾಜ್ಯಗಳಲ್ಲಿ ಅನುಷ್ಟಾನಗೊಳಿಸಲಾಗುವುದು.
  • ಎರಡನೇ ಹಂತದಲ್ಲಿ ಅರುಣಾಚಲ ಪ್ರದೇಶ, ಜಾರ್ಖಂಡ್, ಚತ್ತೀಸಘರ್, ಮಹಾರಾಷ್ಟ್ರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಲ್ಲಿ ಜಾರಿಗೊಳಿಸಲಾಗುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.