“100 ಮಿಲಿಯನ್ ಫಾರ್ 100 ಮಿಲಿಯನ್” ಅಭಿಯಾನಕ್ಕೆ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಚಾಲನೆ

pa_upರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು “100 ಮಿಲಿಯನ್ ಫಾರ್ 100 ಮಿಲಿಯನ್” ಅಭಿಯಾನಕ್ಕೆ ರಾಷ್ಟ್ರಪತಿ ಭವನದಲ್ಲಿ ಚಾಲನೆ ನೀಡಿದರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ರವರು ಅಭಿಯಾನದ ರೂವಾರಿಯಾಗಿದ್ದು, ಕೈಲಾಸ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್ ಆಯೋಜಿಸಿತ್ತು.

ಪ್ರಮುಖಾಂಶಗಳು:

  • ವಿಶ್ವದಾದ್ಯಂತ 100 ಮಿಲಿಯನ್ ಬಡ ಮಕ್ಕಳಿಗೆ 100 ಯುವಕರು ಮತ್ತು ಮಕ್ಕಳನ್ನು ಸಜ್ಜುಗೊಳಿಸುವುದು ಅಭಿಯಾನದ ಗುರಿಯಾಗಿದೆ.
  • ಮುಂದಿನ ಐದು ವರ್ಷಗಳಲ್ಲಿ ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಗುಲಾಮಗಿರಿ ಮತ್ತು ಮಕ್ಕಳ ವಿರುದ್ದ ಶೋಷಣೆಯನ್ನು ನಿರ್ಮೂಲನೆ ಮಾಡುವುದು ಅಭಿಯಾನದ ಉದ್ದೇಶ.
  • ಅಲ್ಲದೇ ಪ್ರತಿ ಮಗುವಿನ ಹಕ್ಕು, ಶಿಕ್ಷಣ ಹಾಗೂ ಸುರಕ್ಷತೆಯನ್ನು ಪ್ರೋತ್ಸಾಹಿಸುವುದು.
  • ಭಯಾನಕ ಸ್ಥಿತಿಯಲ್ಲಿ ವಾಸಿಸುತ್ತಿರುವ ದುರಾದೃಷ್ಟ ಮಕ್ಕಳ ಪರ ಧ್ವನಿಯಾಗಿ ಮಕ್ಕಳ ಸ್ನೇಹಿ ವಾತಾವರಣವನ್ನು ರೂಪಿಸಲು 100 ಮಿಲಿಯನ್ ಮಕ್ಕಳನ್ನು ಪ್ರೇರೆಪಿಸುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.