Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,28,2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,28,2016

Question 1

1. ಈ ಕೆಳಗಿನ ಯಾವ ದೇಶಗಳು ಇದೇ ಮೊದಲ ಬಾರಿಗೆ “ಪ್ರತಿಕಾರ್-1” ಹೆಸರಿನಡಿ ಜಂಟಿ ಸಮರಭ್ಯಾಸವನ್ನು ನಡೆಸಲಿವೆ?

A
ಚೀನಾ ಮತ್ತು ನೇಪಾಳ
B
ನೇಪಾಳ ಮತ್ತು ಭೂತಾನ
C
ನೇಪಾಳ ಮತ್ತು ಶ್ರೀಲಂಕಾ
D
ಶ್ರೀಲಂಕಾ ಮತ್ತು ಬಾಂಗ್ಲದೇಶ
Question 1 Explanation: 
ಚೀನಾ ಮತ್ತು ನೇಪಾಳ

ಚೀನಾ ಮತ್ತು ನೇಪಾಳ ಇದೇ ಮೊದಲ ಬಾರಿಗೆ ಫೆಬ್ರವರಿ, 2017 ರಲ್ಲಿ ಜಂಟಿ ಸಮರಭ್ಯಾಸವನ್ನು ನಡೆಸಲು ನಿರ್ಧರಿಸಿವೆ. ಈ ಸಮರಭ್ಯಾಸಕ್ಕೆ “ಪ್ರತಿಕಾರ್-1” ಎಂದು ಹೆಸರಿಡಲಾಗಿದೆ. ಒತ್ತೆಯಾಳು ಸನ್ನವೇಶಗಳಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳನ್ನು ಹತ್ತಿಕುವ ಬಗ್ಗೆ ನೇಪಾಳಿ ಸೇನೆಗಳಿಗೆ ತರಭೇತಿಯನ್ನು ನೀಡಲಾಗುವುದು.

Question 2

2. ಈ ಮುಂದಿನ ಯಾವ ದೇಶ ಮಾಲಿನ್ಯ ನಿಯಂತ್ರಿಸಲು ಪರಿಸರ ತೆರಿಗೆ ಕಾನೂನು ಜಾರಿಗೆ ತರಲಿದೆ?

A
ಫಿಲಿಫೈನ್ಸ್
B
ಆಸ್ಟ್ರೇಲಿಯಾ
C
ಚೀನಾ
D
ಜರ್ಮನಿ
Question 2 Explanation: 
ಚೀನಾ:

ಮಲಿನಕಾರರಿಗೆ ಅದರಲ್ಲೂ ಭಾರೀ ಉದ್ಯಮಗಳ ಮೇಲೆ ಪರಿಸರ ತೆರಿಗೆ ವಿಧಿಸುವ ಕಾನೂನನ್ನು ಚೀನಾದ ಉನ್ನತ ಶಾಸಕಾಂಗ ಅಂಗೀಕರಿಸಿದ್ದು, ಜನವರಿ 1, 2018 ರಿಂದ ಜಾರಿಗೆ ಬರಲಿದೆ. ತೆರಿಗೆದಾರರಲ್ಲಿ ಪರಿಸರದ ಜಾಗೃತಿ ಮೂಡಿಸುವುದು, ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕಂಪನಿಗಳಿಗೆ ಒತ್ತಡ ಹೇರುವುದು ಮತ್ತು ಸ್ವಚ್ಚ ಉತ್ಪಾದನೆಗೆ ಪರಿವರ್ತನೆಗೊಳ್ಳುವಂತೆ ಮಾಡಲು ಈ ಕಾನೂನನ್ನು ಜಾರಿಗೆ ತರಲಾಗುತ್ತಿದೆ.

Question 3

3. “ಖುಲ್ಲಂ ಖುಲ್ಲ (Khullam Khulla)” ಇದು ಯಾರ ಆತ್ಮಚರಿತ್ರೆ?

A
ಎ ಆರ್ ರೆಹಮಾನ್
B
ರಿಷಿ ಕಪೂರ್
C
ಅಮಿತಾಬ್ ಬಚ್ಚನ್
D
ಶಾರೂಖ್ ಖಾನ್
Question 3 Explanation: 
ರಿಷಿ ಕಪೂರ್

ಖುಲ್ಲಂ ಖುಲ್ಲಾ ಇದು ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ರಿಷಿ ಕಪೂರ್ ರವರ ಆತ್ಮಚರಿತ್ರೆ. ಕಪೂರ್ ರವರ 64 ವರ್ಷಗಳ ಹಿಂದಿನ “ಖುಲ್ಲಂ ಖುಲ್ಲ ಪ್ಯಾರ್ ಕರೇಂಗೆ ಹಮ್ ದೊನೊ” ಪ್ರಸಿದ್ದ ಗೀತೆಯ ಹೆಸರನ್ನು ಆತ್ಮಚರಿತ್ರೆಗೆ ಇಡಲಾಗಿದೆ.

Question 4

4. ದೇಶದ ಮೊದಲ ನಗದು ರಹಿತ ಮತ್ತು ಡಿಜಿಟಲ್ ಬುಡಕಟ್ಟು ಕಾಲೋನಿ ಎಂಬ ಗೌರವಕ್ಕೆ ಪಾತ್ರವಾದ “ನೆಡುಂಕಾಯಂ” ಯಾವ ರಾಜ್ಯದಲ್ಲಿದೆ?

A
ಕೇರಳ
B
ಜಾರ್ಖಂಡ್
C
ಪಶ್ಚಿಮ ಬಂಗಾಳ
D
ತಮಿಳುನಾಡು
Question 4 Explanation: 
ಕೇರಳ

ಕೇರಳದ ಮಲ್ಲಾಪುರಂ ಜಿಲ್ಲೆಯ ನಿಲಂಬುರ್ ನ ನೆಡುಂಕಾಯಂ ಕಾಲೋನಿ ದೇಶದ ಮೊದಲ ನಗದು ರಹಿತ ಮತ್ತು ಡಿಜಿಟಲ್ ಬುಡಕಟ್ಟು ಕಾಲೋನಿ ಎಂಬ ಗೌರವಕ್ಕೆ ಪಾತ್ರವಾಗಿದೆ. ಮಾವೊವಾದಿಗಳ ಬೆದರಿಕೆ ಇದ್ದರು ಇಲ್ಲಿನ ಜನ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ.

Question 5

5. 2016 ರಾಷ್ಟ್ರೀ ಮಕ್ಕಳ ಸೈನ್ಸ್ ಕಾಂಗ್ರೆಸ್ (National Children Science Congress) ಕಾರ್ಯಕ್ರಮ ಯಾವ ನಗರದಲ್ಲಿ ಆರಂಭಗೊಂಡಿತು?

A
ಪುಣೆ
B
ಹೈದ್ರಾಬಾದ್
C
ಮೈಸೂರು
D
ಭುಬನೇಶ್ವರ್
Question 5 Explanation: 
ಪುಣೆ:

2016 ರಾಷ್ಟ್ರೀ ಮಕ್ಕಳ ಸೈನ್ಸ್ ಕಾಂಗ್ರೆಸ್ (National Children Science Congress) ಕಾರ್ಯಕ್ರಮ ವಿದ್ಯಾಪ್ರತಿಷ್ಠಾನ ಇನ್ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಶನ್ ಟೆಕ್ನಾಲಜಿಯ, ಬರಮತಿ, ಪುಣೆಯಲ್ಲಿ ಆರಂಭಗೊಂಡಿತು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

Question 6

6. ಯಾವ ರಾಜ್ಯ ಸರ್ಕಾರ ವಿಮುಕ್ತ ಜಾತಿ, ಅಲೆಮಾರಿ ಪಂಗಡಗಳಿಗೆ, ಒಬಿಸಿ ಮತ್ತು SBCsಗಳಿಗೆ ಹೊಸ ಸಚಿವಾಲಯವನ್ನು ಸ್ಥಾಪಿಸಲಿದೆ?

A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ತೆಲಂಗಣ
D
ಆಂಧ್ರ ಪ್ರದೇಶ
Question 6 Explanation: 
ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ ವಿಮುಕ್ತ ಜಾತಿ, ಅಲೆಮಾರಿ ಪಂಗಡಗಳಿಗೆ, ಒಬಿಸಿ ಮತ್ತು SBCsಗಳಿಗೆ ಹೊಸ ಸಚಿವಾಲಯವನ್ನು ಸ್ಥಾಪಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ಸಚಿವರು ಇರಲಿದ್ದಾರೆ.

Question 7

7. ಈ ಕೆಳಗಿನ ಯಾರು ಭಾರತೀಯ ರಿಸರ್ವ್ ಬ್ಯಾಂಕ್ನ ನೂತನ ಉಪ ಗವರ್ನರ್ ಆಗಿ ನೇಮಕಗೊಂಡಿದ್ದಾರೆ?

A
ಮುಖೇಶ್ ಭಾಟಿಯಾ
B
ವಿರಳ್ ಆಚಾರ್ಯ
C
ಸುಧೀಂದ್ರ ಚಟರ್ಜಿ
D
ಅಗರವಾಲ್
Question 7 Explanation: 
ವಿರಳ್ ಆಚಾರ್ಯ

ನ್ಯೂಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ವಿರಳ್ ಆಚಾರ್ಯ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪ ಗವರ್ನರ್ ಆಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಆರ್ ಬಿ ಐ ನ ನಾಲ್ಕು ಉಪ ಗವರ್ನರ್ ಗಳಲ್ಲಿ ವಿರಳ್ ಆಚಾರ್ಯ ಕೂಡ ಒಬ್ಬರಾಗಿದ್ದು, ಮೂರು ವರ್ಷ ಇವರ ಅಧಿಕಾರ ಅವಧಿ ಇರುತ್ತದೆ. ಊರ್ಜಿತ್ ಪಟೇಲ್ ಆರ್ ಬಿ ಐ ಗವರ್ನರ್ ಆಗಿ ಬಡ್ತಿ ಹೊಂದಿದ ನಂತರ ತೆರವಾಗಿದ್ದ ಉಪ ಗವರ್ನರ್ ಹುದ್ದೆಗೆ ವಿರಳ್ ಆಚಾರ್ಯರನ್ನು ನೇಮಿಸಲಾಗಿದೆ.

Question 8

8. 2016 ಬಿಹಾರಿ ಪುರಸ್ಕಾರ ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆಮಾಡಲಾಗಿದೆ?

A
ರವೀಂದ್ರ ತಿವಾರಿ
B
ಸತ್ಯ ನಾರಾಯಣ್
C
ವಾಸುದೇವ ಲಾಲ್
D
ಈಶ್ವರ ಖಂಡ್ರೆ
Question 8 Explanation: 
ಸತ್ಯ ನಾರಾಯಣ್:

ರಾಜಸ್ತಾನದ ಪ್ರಖ್ಯಾತ ಸಾಹಿತಿ ಡಾ. ಸತ್ಯ ನಾರಾಯಣ್ ರವರನ್ನು ಕೆ.ಕೆ.ಬಿರ್ಲಾ ಪೌಂಡೇಶನ್ ನೀಡುವ 26ನೇ ಬಿಹಾರಿ 2016 ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ. ಸತ್ಯನಾರಾಯಣ್ ರವರ “ಯೆಹ್ ಏಕ್ ದುನಿಯಾ” ಹಿಂದಿ ಪುಸ್ತಕಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. 2010 ರಲ್ಲಿ ಈ ಪುಸ್ತಕ ಪ್ರಕಟಣೆಗೊಂಡಿದೆ.

Question 9

9. ಇತ್ತೀಚೆಗೆ ನಿಧನರಾದ “ರತ್ನಸಿರಿ ವಿಕ್ರಮನಾಯಕೆ” ಯಾವ ದೇಶದ ಮಾಜಿ ಪ್ರಧಾನಿ?

A
ಸಿಂಗಾಪುರ
B
ಮ್ಯಾನ್ಮಾರ್
C
ಶ್ರೀಲಂಕಾ
D
ಭೂತಾನ್
Question 9 Explanation: 
ಶ್ರೀಲಂಕಾ:

ಶ್ರೀಲಂಕಾ ಮಾಜಿ ಪ್ರಧಾನಮಂತ್ರಿ ರತ್ನಸಿರಿ ವಿಕ್ರಮನಾಯಕೆ ವಿಧಿವಶರಾಗಿದ್ದಾರೆ. ವಿಕ್ರಮನಾಯಕೆ 2000 ದಿಂದ 2001 ಹಾಗು 2005 ರಿಂದ 2010 ರ ಮಧ್ಯೆ ಶ್ರೀಲಂಕಾದ ಪ್ರಧಾನಿಯಾಗಿದ್ದರು. 1960ರಲ್ಲಿ ರಾಜಕೀಯಕ್ಕೆ ಧುಮುಕಿದ್ದ ಅವರು 1970 ರಲ್ಲಿ ನ್ಯಾಯ ಸಚಿವಾಲಯದ ಉಪ ಸಚಿವರಾಗಿ ನೇಮಕರಾಗಿದ್ದರು. 1994 ರಲ್ಲಿ ಶ್ರೀಲಂಕಾದ ಲೋಕಸಭೆಗೆ ಗೆದ್ದು, ಗೃಹ ವ್ಯವಹಾರಗಳ, ನಾಗರಿಕ ಆಡಳಿತ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

Question 10

10. ಸಾಂಗ್ಮೊ (Tsongmo) ಅಥವಾ ಚಂಗು ಸರೋವರ ಎಲ್ಲಿದೆ?

A
ಜಮ್ಮು ಮತ್ತು ಕಾಶ್ಮೀರ
B
ಸಿಕ್ಕಿಂ
C
ಉತ್ತರಖಂಡ
D
ಹಿಮಾಚಲ ಪ್ರದೇಶ
Question 10 Explanation: 
ಸಿಕ್ಕಿಂ
There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,28,2016”

 1. vijayashree says:

  Very useful for all exams

 2. Puneethgowda k n says:

  Supper sir

 3. Manju says:

  We want daily updates sir..

 4. Karibasapa m says:

  Thankful to all those who are make this plan about this web really best and very useful to all.

Leave a Reply to Karibasapa m Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.