ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,25,26,2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,25,26,2016

Question 1

1. ಅಗ್ನಿ-5 ಕ್ಷಿಪಣಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಅಗ್ನಿ-5 ಖಂಡಾಂತರ ಕ್ಷಿಪಣಿಯಾಗಿದ್ದು, ಹೆಚ್ಎಎಲ್ ಇದನ್ನು ಅಭಿವೃದ್ದಿಪಡಿಸಿದೆ

II) ಈ ಕ್ಷಿಪಣಿಯ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚು

III) ಏಷ್ಯಾ ಖಂಡ ಸೇರಿದಂತೆ ಆಫ್ರಿಕಾ ಮತ್ತು ಯುರೋಪ್ ನ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I & II
B
II & III
C
I & III
D
I, II & III
Question 1 Explanation: 
II & III:

ಹೇಳಿಕೆ ಒಂದು ತಪ್ಪು. ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಅಭಿವೃದ್ದಿಪಡಿಸಿದೆ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚಿದೆ. ಆ ಮೂಲಕ ಈ ಕ್ಷಿಪಣಿ ಚೀನಾದ ಪ್ರತೀ ಸ್ಥಳವೂ ಸೆರಿದಂತೆ ಏಷ್ಯಾ, ಆಫ್ರಿಕಾ ಮತ್ತು ಯರೋಪ್ ಖಂಡದ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.

Question 2

2. ದೇಶದ ಮೊದಲ ಎರಡನೇ ತಲೆಮಾರಿನ “ಎಥನಾಲ್ ಜೈವಿಕ ಶುದ್ದೀಕರಣ” ಘಟಕ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಕರ್ನಾಟಕ
B
ಪಂಜಾಬ್
C
ರಾಜಸ್ತಾನ
D
ಹರಿಯಾಣ
Question 2 Explanation: 
ಪಂಜಾಬ್:

ದೇಶದ ಮೊದಲ ಎರಡನೇ ತಲೆಮಾರಿನ ಎಥನಾಲ್ ಜೈವಿಕ ಶುದ್ದೀಕರಣ ಘಟಕ ಪಂಜಾಬ್ ನ ಬಥಿಂದ ಜಿಲ್ಲೆಯ ಟರ್ಕನ್ವಾಲ ಹಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ಈ ಘಟಕದ ಶಂಕುಸ್ಥಾಪನೆಯನ್ನು ಇತ್ತೀಚೆಗೆ ನೆರವೇರಿಸಲಾಯಿತು. ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ (CPSU), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್, ರೂ 600 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

Question 3

3. ಯಾವ ರಾಜ್ಯ “ದಮನ್ (DAMAN)” ಎಂಬ ನೂತನ ಮಲೇರಿಯಾ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೊಳಿಸಲಿದೆ?

A
ಒಡಿಶಾ
B
ಪಶ್ಚಿಮ ಬಂಗಾಳ
C
ಅಸ್ಸಾಂ
D
ಕೇರಳ
Question 3 Explanation: 

ಒಡಿಶಾ ಸರ್ಕಾರ ನೂತನ ಮಲೇರಿಯಾ ನಿಯಂತ್ರಣ ಕಾರ್ಯಕ್ರಮ “ದಮನ್” (ದುರ್ಗಮ ಅಂಚಲರೆ ಮಲೇರಿಯಾ ನಿರಾಕರಣ್) ಐದು ವರ್ಷಗಳ ಅವಧಿಗೆ ಜಾರಿಗೊಳಿಸಲಿದೆ. ಈ ಕಾರ್ಯಕ್ರಮವನ್ನು ರಾಜ್ಯದ ತೀವ್ರ ಮಲೇರಿಯಾ ಬಾಧಿತ ಎಂಟು ಜಿಲ್ಲೆಗಳ 79 ಬ್ಲಾಕ್ ನ 8,000 ಹಳ್ಳಿಗಳಲ್ಲಿ ಅನುಷ್ಟಾನಗೊಳಿಸಲಾಗುವುದು.

Question 4

4. “ಉತ್ತಮ ಆಡಳಿತ ದಿನ (Good Governance Day)” ಯಾವ ದಿನದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 24
B
ಡಿಸೆಂಬರ್ 25
C
ಡಿಸೆಂಬರ್ 20
D
ಡಿಸೆಂಬರ್ 21
Question 4 Explanation: 
ಡಿಸೆಂಬರ್ 25:

ಉತ್ತಮ ಆಡಳಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ದೇಶದಲ್ಲಿ 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತಿದೆ. ಇದು ಮೂರನೇ ವರ್ಷದ ಆಚರಣೆ. ದೇಶದಾದ್ಯಂತ ಈ ದಿನದ ನೆನಪಿಗೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Question 5

5. ಈ ಕೆಳಗಿನ ಯಾವುದು ಭಾರತದಲ್ಲಿ “ಡಿಜಿಟಲಿ ಸುರಕ್ಷಿತ ಗ್ರಾಹಕ” ಅಭಿಯಾನವನ್ನು ಆರಂಭಿಸಲಿದೆ?

A
ಫೇಸ್ ಬುಕ್
B
ಗೂಗಲ್
C
ಮೈಕ್ರೋಸಾಫ್ಟ್
D
ಟ್ವಿಟ್ಟರ್
Question 5 Explanation: 
ಗೂಗಲ್:

ಗ್ರಾಹಕರಲ್ಲಿ ಆನ್ ಲೈನ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆನ್ ಲೈನ್ ಗ್ರಾಹಕರ ಹಿತಾಸಕ್ತಿ ಕಾಪಾಡಲು ರಾಷ್ಟ್ರವ್ಯಾಪ್ತಿ “ಡಿಜಿಟಲಿ ಸುರಕ್ಷತೆ ಗ್ರಾಹಕ ಪ್ರಚಾರ (Digitally Safe Consumer Campaign)” ಕಾರ್ಯಕ್ರಮವನ್ನು ಆರಂಭಿಸಲು ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ಮತ್ತು ಗೂಗಲ್ ಇಂಡಿಯಾ ಒಪ್ಪಂದಕ್ಕೆ ಸಹಿಹಾಕಿವೆ. ಜನವರಿ 2017 ರಲ್ಲಿ ಈ ಪ್ರಚಾರ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆ ಇದೆ.

Question 6

6. ಯಾವ ಬಾಲಿವುಡ್ ನಟ ಟಾಟಾ ಮೋಟಾರ್ಸ್ ಸಂಸ್ಥೆಯ ಕಮರ್ಷಿಯಲ್ ವೆಹಿಕಲ್ ಬಿಸಿನೆಸ್ ಘಟಕದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?

A
ಅಕ್ಷಯ್ ಕುಮಾರ್
B
ರಣವೀರ್ ಸಿಂಗ್
C
ಸಲ್ಮಾನ್ ಖಾನ್
D
ಅಮೀರ್ ಖಾನ್
Question 6 Explanation: 
ಅಕ್ಷಯ್ ಕುಮಾರ್:

ಟಾಟಾ ಮೋಟಾರ್ಸ್ ಸಂಸ್ಥೆ ಬಾಲಿವುಡ್ ನಟ ಅಕ್ಷಯ ಕುಮಾರ್ ಅವರನ್ನು ತನ್ನ ಕಮರ್ಷಿಯಲ್ ವೆಹಿಕಲ್(CV) ಬಿಸಿನೆಸ್ ಘಟಕದ ರಾಯಬಾರಿಯನ್ನಾಗಿ ಆಯ್ಕೆ ಮಾಡಿದೆ. 2017ರಲ್ಲಿ ಟಾಟಾ ಮೋಟಾರ್ಸ್ ಪ್ರಚಾರ ರಾಯಬಾರಿಯಾಗಿ ಭಾರತೀಯ ಚಲನಚಿತ್ರ ರಂಗದ ನಿಜವಾದ ಖಿಲಾಡಿ ಎಂದೇ ಖ್ಯಾತರಾಗಿರುವ ಅಕ್ಷಯ ಕುಮಾರ್ ಈ ಹೊಸ ಪಾತ್ರದ ಮೂಲಕ ಬ್ಲಾಕ್ ಬಸ್ಟರ್ ಎಂಟ್ರಿ ಕೊಡಲಿದ್ದಾರೆ ಎಂದು ಕಂಪನಿ ಹೇಳಿದೆ.

Question 7

7. ಇತ್ತೀಚೆಗೆ ನಿಧನರಾದ ಪಾಪ್ ಗಾಯಕ “ಜಾರ್ಜ್ ಮೈಕಲ್” ಯಾವ ದೇಶದವರು?

A
ಫ್ರಾನ್ಸ್
B
ಅಮೆರಿಕ
C
ಇಂಗ್ಲೆಂಡ್
D
ರಷ್ಯಾ
Question 7 Explanation: 
ಇಂಗ್ಲೆಂಡ್:

ವ್ಯಾಮ್!' ಎಂಬ ಬ್ಯಾಂಡ್ ಮೂಲಕ ಖ್ಯಾತಿ ಗಳಿಸಿದ್ದ ಬ್ರಿಟನ್ನ ಪಾಪ್ ಗಾಯಕ ಜಾರ್ಜ್ ಮೈಕೆಲ್ (53) ನಿಧನರಾದರು. 1963 ರಲ್ಲಿ ಲಂಡನ್ನಲ್ಲಿ ಜನಿಸಿದ್ದ ಜಾರ್ಜ್ ಅವರು ಶಾಲಾ ಗೆಳೆಯ ಆಂಡ್ರ್ಯೂ ರಿಡ್ಗೆಲ್ ಜೊತೆ ಸೇರಿಕೊಂಡು 1981ರಲ್ಲಿ 'ವ್ಯಾಮ್!' ಎಂಬ ಹೆಸರಿನ ಬ್ಯಾಂಡ್ ಸ್ಥಾಪಿಸಿದ್ದರು. 'ಕ್ಲಬ್ ಟ್ರಾಪಿಕಾನಾ', 'ಲಾಸ್ಟ್ ಕ್ರಿಸ್ಮಸ್', 'ಕೇರ್ಲೆಸ್ ವಿಸ್ಪರ್' ಮತ್ತು 'ಫೇತ್' ಅವರ ಕೆಲವು ಜನಪ್ರಿಯ ಆಲ್ಬಮ್ಗಳು.

Question 8

8. ಇತ್ತೀಚೆಗೆ ಈ ಕೆಳಗಿನ ಯಾವ ರಾಜ್ಯ “ನಗರ ಉದಯ್ ಅಭಿಯಾನ”ವನ್ನು ಆರಂಭಿಸಿದೆ?

A
ಮಧ್ಯ ಪ್ರದೇಶ
B
ಆಂಧ್ರ ಪ್ರದೇಶ
C
ಹರಿಯಾಣ
D
ತಮಿಳುನಾಡು
Question 8 Explanation: 
ಮಧ್ಯ ಪ್ರದೇಶ:

ಮಧ್ಯ ಪ್ರದೇಶ ಸರ್ಕಾರ ಡಿಸೆಂಬರ್ 25, 2016 ರಂದು ರಾಜ್ಯದ 378 ಸ್ಥಳೀಯ ನಗರ ಸಂಸ್ಥೆಗಳಲ್ಲಿ “ನಗರ ಉದಯ್ ಅಭಿಯಾನ”ವನ್ನು ಅನುಷ್ಟಾನಗೊಳಿಸಿದೆ. ನಾಗರಿಕರಿಗೆ ಒದಗಿಸಲಾದ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸುವುದು, ಗುಣಮಟ್ಟದ ಜೀವನವನ್ನು ರೂಪಿಸುವುದು, ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಅರಿವು ಮೂಡಿಸುವುದು ಅಭಿಯಾನದ ಅಂಗವಾಗಿದೆ.

Question 9

9. ಈ ಮುಂದಿನ ಯಾವುದನ್ನು “ನಿಟ್ ವೇರ್ ಕ್ಯಾಪಿಟಲ್ ಆಫ್ ಇಂಡಿಯಾ (Knit wear Capital of the India)”ಎಂದು ಪ್ರಸಿದ್ದಿ ಹೊಂದಿದೆ?

A
ಸೂರತ್
B
ತಿರುಪುರ್
C
ಅಹಮದಾಬಾದ್
D
ಲೂಧಿಯಾನ
Question 9 Explanation: 
ತಿರುಪುರ್:

ತಮಿಳುನಾಡಿನ ಕೊಂಗುನಾಡು ಪ್ರದೇಶದ ತಿರುಪುರ್ ನಗರವನ್ನು “ನಿಟ್ ವೇರ್ ಕ್ಯಾಪಿಟಲ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತದೆ. ತಿರುಪುರ್ ದೇಶದ ಪ್ರಮುಖ ಜವಳಿ ಮತ್ತು ನಿಟ್ ವೇರ್ ಕೇಂದ್ರವಾಗಿದ್ದು, ದೇಶದ ಶೇ 90% ಹತ್ತಿ ಬಟ್ಟೆ ರಫ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜವಳಿ ಕೈಗಾರಿಕೆಗಳಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

Question 10

10. ಈ ಕೆಳಗಿನವುಗಳಲ್ಲಿ ತಪ್ಪು ಹೊಂದಾಣಿಕೆಯಾಗಿರುವುದನ್ನು ಗುರುತಿಸಿ:

A
ಅಗ್ನಿ-1 --- 700 ಕಿ.ಮೀ
B
ಅಗ್ನಿ-2 --- 2000 ಕಿ.ಮೀ
C
ಅಗ್ನಿ-3 --- 2500 ಕಿ.ಮೀ
D
ಅಗ್ನಿ-4 --- 4000 ಕಿ.ಮೀ
Question 10 Explanation: 
ಅಗ್ನಿ-4 --- 4000 ಕಿ.ಮೀ:

ಅಗ್ನಿ-1 (700 ಕಿ.ಮೀ ವ್ಯಾಪ್ತಿ), ಅಗ್ನಿ-2 (2000 ಕಿ.ಮೀ ವ್ಯಾಪ್ತಿ), ಅಗ್ನಿ-3 (2500 ಕಿ.ಮೀ ವ್ಯಾಪ್ತಿ) ಮತ್ತು ಅಗ್ನಿ-4 (3,500 ಕಿ.ಮೀ ವ್ಯಾಪ್ತಿಯನ್ನು).

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,25,26,2016”

  1. babu says:

    awesome work……….thank u …….keep going

  2. basu says:

    its a good knowledge

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.