ರಿಸೋರ್ಸ್ ಸ್ಯಾಟ್-2ಎ (Resourcesat-2A) ಉಪಗ್ರಹ ಉಡಾವಣೆ ಯಶಸ್ವಿ

satelite_upದೂರ ಸಂವೇದಿ ಉಪಗ್ರಹ ರಿಸೋರ್ಸ್ ಸ್ಯಾಟ್-2ಎಯನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ  ಯಶಸ್ವಿಯಾಗಿದೆ. ಈ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)-ಸಿ36 ಬಳಸಿ ಶ್ರೀಹರಿಕೋಟ ಬಾಹ್ಯಕಾಶ ಕೇಂದ್ರದಲ್ಲಿ ಉಡಾಯಿಸಲಾಯಿತು.  ಇದರೊಂದಿಗೆ ಪಿಎಸ್‌ಎಲ್‌ವಿ ಉಡ್ಡಯನ ವಾಹನವು 38 ನೇ ಉಡಾವಣಾ ಹೆಗ್ಗಳಿಕೆಗೂ ಪಾತ್ರವಾಯಿತು.

ರಿಸೋರ್ಸ್ ಸ್ಯಾಟ್-2ಎ:

  • 2003 ಮತ್ತು 2011 ರಲ್ಲಿ ಉಡಾಯಿಸಲಾದ ರಿಸೋರ್ಸ್ ಸ್ಯಾಟ್-1 ಮತ್ತು ರಿಸೋರ್ಸ್ ಸ್ಯಾಟ್-2 ಉಪಗ್ರಹಗಳ ಮುಂದುವರೆದ ಮಿಷನ್ ರಿಸೋರ್ಸ್ ಸ್ಯಾಟ್-2ಎ. ಈ ಎರಡು ಉಪಗ್ರಹಗಳ ಜೊತೆಗೆ ಜಾಗತಿಕ ಬಳಕೆದಾರರಿಗೆ ದೂರ ಸಂವೇದಿ ಸೇವೆಯನ್ನು ನೀಡುವ ಸಲುವಾಗಿ ಈ ಉಪಗ್ರಹವನ್ನು ಉಡಾಯಿಸಲಾಗಿದೆ.
  • ರಿಸೋರ್ಸ್ ಸ್ಯಾಟ್-2ಎ ಉಪಗ್ರಹದ ತೂಕ 1235 ಕೆ.ಜಿ ಹಾಗೂ ಈ ಉಪಗ್ರಹವನ್ನು 817 ಕಿ.ಮೀ ಎತ್ತರದಲ್ಲಿರುವ ಧ್ರುವೀಯ ಸೂರ್ಯಸ್ಥಾಯಿ ಕಕ್ಷೆ(Polar Sun synchronous orbit)ಗೆ ಸೇರಿಸಲಾಗಿದೆ.
  • ರಿಸೋರ್ಸ್ ಸ್ಯಾಟ್-2ಎ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಪೇಲೋಡ್ ಗಳನ್ನು ಹೊಂದಿದೆ. ಅವುಗಳೆಂದರೆ ಹೈ ರೆಸಲ್ಯೂಶನ್ ಲೀನಿಯರ್ ಇಮೇಜಿಂಗ್ ಸೆಲ್ಫ್ ಸ್ಕ್ಯಾನರ್ (LISS-4), ಮೀಡಿಯಂ ರೆಸಲ್ಯೂಶನ್ LISS-3 ಕ್ಯಾಮೆರಾ ಮತ್ತು ಅಡ್ವಾನ್ಸಡ್ ವೈಡ್ ಫೀಲ್ಡ್ ಸೆನ್ಸರ್ ಕ್ಯಾಮೆರಾ.
  • ರಿಸೋರ್ಸ್‌ ಸ್ಯಾಟ್‌ –2 ಎ ಕಳುಹಿಸುವ ಮಾಹಿತಿ ಮತ್ತು ಚಿತ್ರಗಳು ವಿಶೇಷವಾಗಿ ರೈತರಿಗೆ ಪ್ರಯೋಜನವಾಗಲಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ.  ವಿವಿಧ ಬೆಳೆಗಳ ಪ್ರದೇಶದ ವ್ಯಾಪ್ತಿ, ಕೃಷಿ ಉತ್ಪಾದನೆಯಲ್ಲಿ ಅಂದಾಜು, ಬರ ಪ್ರದೇಶದ ಮಾಹಿತಿ, ಸಾಯಿಲ್‌ ಮ್ಯಾಪಿಂಗ್‌, ಇಳುವರಿ ವ್ಯವಸ್ಥೆಯ ವಿಶ್ಲೇಷಣೆಗೆ ಮತ್ತು ತೋಟದ ಬೆಳೆಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ.

ಪಿಎಸ್ಎಲ್ವಿ:

ಪಿಎಸ್‌ಎಲ್‌ವಿ ನಾಲ್ಕು ಹಂತದ, ಸ್ವದೇಶಿ ಎಂಜಿನ್ ಒಳಗೊಂಡಿರುವ ರಾಕೆಟ್‌. ಘನ ಮತ್ತು ದ್ರವ ಇಂಧನ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 1994 ಮತ್ತು 2016ರ ನಡುವೆ ಪಿಎಸ್ಎಲ್ವಿ 122 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಭಾರತೀಯ ಉಪಗ್ರಹಗಳ ಸಂಖ್ಯೆ 43 ಮತ್ತು ವಿದೇಶಿ ಉಪಗ್ರಹಗಳ ಸಂಖ್ಯೆ 79.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.