ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,23,2016

Question 1

1. “2016 ಪೆಟಾ (People for the Ethnical Treatment of Animals (PETA))” ವರ್ಷದ ವ್ಯಕ್ತಿ ಪ್ರಶಸ್ತಿ ಯಾರಿಗೆ ಲಭಿಸಿದೆ?

A
ಕರೀನಾ ಕಪೂರ್
B
ಸನ್ನಿ ಲಿಯೊನ್
C
ಅಕ್ಷಯಕ್ ಕುಮಾರ್
D
ಕತ್ರೀನಾ ಕೈಫ್
Question 1 Explanation: 
ಸನ್ನಿ ಲಿಯೊನ್:

ನಟಿ ಸನ್ನಿ ಲಿಯೊನ್ ರವರಿಗೆ 2016 ಪೆಟಾ (People for the Ethnical Treatment of Animals (PETA)) ವರ್ಷದ ವ್ಯಕ್ತಿ ಪ್ರಶಸ್ತಿ ಲಭಿಸಿದೆ. ಬೀದಿ ನಾಯಿಗಳು ಮತ್ತು ಬೆಕ್ಕುಗಳ ರಕ್ಷಣೆಯನ್ನು ಪ್ರೋತ್ಸಾಹಿಸುವುದು ಹಾಗೂ ಪ್ರಾಣಿಗಳನ್ನು ಚರ್ಮಕ್ಕಾಗಿ ಕಳ್ಳಭೇಟೆ ಆಡುವುದರ ವಿರುದ್ದ ಧ್ವನಿಗೂಡಿಸಿರುವುದನ್ನು ಗಮನಿಸಿ ಲಿಯೊನ್ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ವರ್ಷದ ಪ್ರಾರಂಭದಲ್ಲಿ ಸನ್ನಿ ಲಿಯೊನ್ ರವರು ಸಾರ್ವಜನಿಕರು ಬೀದಿ ನಾಯಿಯನ್ನು ದತ್ತು ಪಡೆದು ಸಾಕುವಂತೆ ಪ್ರೋತ್ಸಾಹಿಸುವ ಜಾಹೀರಾತು ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು.

Question 2

2. ಈ ಕೆಳಗಿನ ಯಾವ ದೇಶ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು?

A
ಭಾರತ
B
ಶ್ರೀಲಂಕಾ
C
ಬಾಂಗ್ಲದೇಶ
D
ಪಾಕಿಸ್ತಾನ
Question 2 Explanation: 

ಭಾರತ ಕ್ರಿಕೆಟ್ ತಂಡ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಭಾರತ ತಂಡವು 34 ರನ್ಗಳಿಂದ ಶ್ರೀಲಂಕಾ ತಂಡದ ಎದುರು ಜಯ ಗಳಿಸಿತು.

Question 3

3. ಈ ಮುಂದಿನ ಭಾರತದ ಯಾವ ದ್ವೀಪ ಪ್ರದೇಶವನ್ನು “ನ್ಯೂ ಡೆನಾರ್ಕ್” ಎಂದು ಕರೆಯಲಾಗುತ್ತಿತ್ತು?

A
ಅಂಡಮಾನ್ ಮತ್ತು ನಿಕೋಬರ್
B
ಲಕ್ಷದ್ವೀಪ
C
ಸೇಂಟ್ ಮೇರಿಸ್
D
ಸಾಲ್ಸೆಟ್ಟೆ ದ್ವೀಪ ಪ್ರದೇಶ
Question 3 Explanation: 
ಅಂಡಮಾನ್ ಮತ್ತು ನಿಕೋಬರ್

ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶ 1759 ರಲ್ಲಿ ಡ್ಯಾನಿಶ್ ಕಾಲೋನಿಯಾದ ಸಂದರ್ಭದಲ್ಲಿ ನ್ಯೂ ಡೆನ್ಮಾರ್ಕ್ ಎನ್ನಲಾಗುತ್ತಿತ್ತು. ಆ ನಂತರ ಫ್ರೆಡೆರಿಕ್ ದ್ವೀಪವೆಂತಲೂ ಕರೆಯಲಾಯಿತು.

Question 4

4. ಯಾವ ರಾಷ್ಟ್ರದಲ್ಲಿ ರಾಷ್ಟ್ರೀಯ ಅಂಚೆ ಸೇವೆಗೆ ವಿಶ್ವದಲ್ಲೆ ಮೊದಲ ಬಾರಿಗೆ ಡ್ರೋನ್ ಗಳನ್ನು ಬಳಕೆಮಾಡಲಾಗುತ್ತಿದೆ?

A
ನೆದರ್ಲ್ಯಾಂಡ್
B
ಆಸ್ಟ್ರೇಲಿಯಾ
C
ಫ್ರಾನ್ಸ್
D
ಕೆನಡಾ
Question 4 Explanation: 
ಫ್ರಾನ್ಸ್:

ಫ್ರಾನ್ಸ್ ನಲ್ಲಿ ವಿಶ್ವದಲ್ಲೆ ಮೊದಲ ಬಾರಿಗೆ ರಾಷ್ಟ್ರೀಯ ಅಂಚೆ ಸೇವೆಗೆ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಪರ್ವತ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಡ್ರೋಣ್ ಗಳು ಸೇವೆಯನ್ನು ಒದಗಿಸಲಿವೆ. ಈ ಡ್ರೋಣ್ ಗಳು 30.5 ಕಿ.ಮೀ/ಗ ವೇಗದಲ್ಲಿ ಚಲಿಸಲಿದ್ದು, 19 ಕಿ.ಮೀ ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿವೆ.

Question 5

5. ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ (CPEC) ಪಾಕಿಸ್ತಾನದ ಗ್ವದಾರ್ ಬಂದರನ್ನು ಚೀನಾದ ಈ ಕೆಳಗಿನ ಯಾವ ಪ್ರಾಂತ್ಯದೊಂದಿಗೆ ಸಂಪರ್ಕಿಸುತ್ತದೆ?

A
ಶಾಂಕ್ಸಿ
B
ಕ್ವಿಂಘೈ
C
ಕ್ಸಿನ್ಜಿಯಾಂಗ್
D
ಜಿಯಾಂಗ್
Question 5 Explanation: 
ಕ್ಸಿನ್ಜಿಯಾಂಗ್

ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ (CPEC) ಪಾಕಿಸ್ತಾನದ ಗ್ವದಾರ್ ಬಂದರನ್ನು ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಕಶ್ಗರ್ ನಗರವನ್ನು ಸಂಪರ್ಕಿಸುತ್ತದೆ.

Question 6

6. “ವಿತ್ತೀಯ ಸಾಕ್ಷರತ ಅಭಿಯಾನ (Vittiya Saksharata Abhiyan)” ಈ ಕೆಳಗಿನ ಯಾವ ಸಚಿವಾಲಯದ ಅಭಿಯಾನವಾಗಿದೆ?

A
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
B
ಗೃಹ ಸಚಿವಾಲಯ
C
ಹಣಕಾಸು ಸಚಿವಾಲಯ
D
ವಿದೇಶಾಂಗ ವ್ಯವಹಾರ ಸಚಿವಾಲಯ
Question 6 Explanation: 
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ

ವಿತ್ತೀಯ ಸಾಕ್ಷರತ ಅಭಿಯಾನವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಆರಂಭಿಸಿದೆ. ನಗದು ರಹಿತ ಆರ್ಥಿಕತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಅಭಿಯಾನವನ್ನು ಆರಂಭಿಸಲಾಗಿದೆ.

Question 7

7. “ಇರುಲರ್ (Irular)” ಸಮುದಾಯ ಈ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪರಿಶಿಷ್ಠ ಪಂಗಡ ಸ್ಥಾನಮಾನ ಪಡೆದ ಮೊದಲ ಸಮುದಾಯ?

A
ಅಂಡಮಾನ್ ಮತ್ತು ನಿಕೋಬರ್
B
ತಮಿಳುನಾಡು
C
ಪುದುಚೇರಿ
D
ಕೇರಳ
Question 7 Explanation: 
ಪುದುಚೇರಿ:

ಪುದುಚೇರಿಯ ಇರುಲರ್ ಸಮುದಾಯಕ್ಕೆ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ರವರು ಡಿಸೆಂಬರ್ 23, 2016 ರಂದು ಪರಿಶಿಷ್ಠ ಪಂಗಡಕ್ಕೆ ಪಟ್ಟಿಗೆ ಸೇರ್ಪಡೆಗೊಳಿಸಲು ಅನುಮೋದನೆ ನೀಡಿದ್ದಾರೆ. ಆ ಮೂಲಕ ಪರಿಶಿಷ್ಠ ಪಂಗಡ ಸ್ಥಾನವನ್ನು ಪಡೆದ ಪುದುಚೇರಿಯ ಮೊದಲ ಸಮುದಾಯವಾಗಿದೆ.

Question 8

8. ಭಾರತದ ಶಿವ ಕೇಶವನ್ ಯಾವ ಕ್ರೀಡಿಗೆ ಸಂಬಂಧಿಸಿದ್ದಾರೆ?

A
ಗಾಲ್ಫ್
B
ಟೆನ್ನಿಸ್
C
ಲ್ಯೂಜ್
D
ಈಜು
Question 8 Explanation: 
ಲ್ಯೂಜ್:

ಶಿವ ಕೇಶವನ್ ರವರು 2016 ಏಷ್ಯಾ ಲ್ಯೂಜ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಜಪಾನಿನ ನಗೋಯದಲ್ಲಿ ಈ ಚಾಂಪಿಯನ್ ಷಿಪ್ ಅನ್ನು ಆಯೋಜಿಸಲಾಗಿತ್ತು.

Question 9

9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ

II) ಮಾಜಿ ಪ್ರಧಾನಿ ಅಟಲ್ ಬಿಹಾರಿರವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುವುದು

ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ ಯಾವುದು?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 9 Explanation: 
ಹೇಳಿಕೆ ಒಂದು ಮಾತ್ರ:

ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ.

Question 10

10. ಈ ಕೆಳಗಿನ ಯಾವ ರಾಜ್ಯದಲ್ಲಿ ಗುರು ಶಿಖರ ಶ್ರೇಣಿ ಕಂಡುಬರುತ್ತದೆ?

A
ಮಧ್ಯ ಪ್ರದೇಶ
B
ರಾಜಸ್ತಾನ
C
ಗುಜರಾತ್
D
ಮಹಾರಾಷ್ಟ್ರ
Question 10 Explanation: 
ರಾಜಸ್ತಾನ:

ಗುರು ಶಿಖರ ರಾಜಸ್ತಾನದ ಅರ್ಬುಡ ಪರ್ವತದಲ್ಲಿರು ಶಿಖರ. ಗುರು ಶಿಖರ ಅರಾವಳಿ ಪರ್ವತ ಶ್ರೇಣಿಯ ಅತ್ಯಂತ ಎತ್ತರದ ಶಿಖರ. ಇದರ ಎತ್ತರ 1,722 ಮೀಟರ್.

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-23.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.