ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,21,2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,21,2016

Question 1

1. ಈ ಕೆಳಗಿನ ಯಾವುದಕ್ಕೆ “2017 ಇಂಡಿಯನ್ ಕಾರ್ ಆಫ್ ದಿ ಇಯರ್” ಪ್ರಶಸ್ತಿ ಲಭಿಸಿದೆ?

A
Vitara Brezza
B
Hyundai CRETA
C
Toyota Innova Crysta
D
Hyundai Tucson
Question 1 Explanation: 
Vitara Brezza:

ಮಾರುತಿ ಸುಜುಕಿ ಸಂಸ್ಥೆಯ Vitara Brezza ಕಾರು 2017 ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನವಾಗಿದೆ. Vitara Brezza ಕಾರನ್ನು ಮಾರ್ಚ್ 2016 ರಲ್ಲಿ ಪರಿಚಯಿಸಲಾಗಿದ್ದು, 83,000 ಕಾರುಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ. Hyundai Tucson ಮತ್ತು Toyota Innova Crysta ವನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Question 2

2. ಈ ಮುಂದಿನ ಯಾರನ್ನು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?

A
ವಿರಾಟ್ ಕೊಹ್ಲಿ
B
ರವಿಚಂದ್ರನ್ ಅಶ್ವಿನ್
C
ಸುಜಿ ಬೇಟ್ಸ್
D
ಮಿಸ್ಬಾ ಹುಲ್ ಹಕ್
Question 2 Explanation: 
ರವಿಚಂದ್ರನ್ ಅಶ್ವಿನ್:

ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆರ್. ಅಶ್ವಿನ್ ಅವರಿಗೆ ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ಅಶ್ವಿನ್ ರವರು ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೇರಿ ಕಳೆದೊಂದು ವರ್ಷದಲ್ಲಿ ನಡೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದುಬಂದಿದೆ. ಇದೇ ವೇಳೆ ಅಶ್ವಿನ್ಗೆ ಸೋಬರ್ಸ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿರುವುದು ಇನ್ನೊಂದು ವಿಶೇಷವಾಗಿದೆ.

Question 3

3. ಜಾಗತಿಕ ಪವನ ವಿದ್ಯುತ್ ಸ್ಥಾಪಿತ ಸಾಮರ್ಥ್ಯ ಸೂಚ್ಯಂಕ (Global Wind Power Installation Capacity Index)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
ಎರಡು
B
ಮೂರು
C
ನಾಲ್ಕು
D
ಐದು
Question 3 Explanation: 
ನಾಲ್ಕು:

ಜಾಗತಿಕ ಪವನ ವಿದ್ಯುತ್ ಸ್ಥಾಪಿತ ಸಾಮರ್ಥ್ಯ ಸೂಚ್ಯಂಕದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. 2015ರ ಅಂತ್ಯಕ್ಕೆ ಭಾರತದ ಒಟ್ಟಾರೆ ಪವನ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 25,088 ಮೆಗಾ ವ್ಯಾಟ್ ನಷ್ಟಿದೆ. ಸೂಚ್ಯಂಕದಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ ಮತ್ತು ಮೂರನೇ ಸ್ಥಾನದಲ್ಲಿ ಜರ್ಮನಿ

Question 4

4. ಈ ಕೆಳಗಿನ 2016 ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಮತ್ತು ಸಂಬಂಧಿಸಿದ ಭಾಷೆ ತಪ್ಪಾಗಿರುವುದನ್ನು ಗುರುತಿಸಿ:

A
ಬೊಳುವಾರು ಮಹಮ್ಮದ್ ಕುಂಞಿ - ಉರ್ದು
B
ಪಾಪಿನೇನಿ ಶಿವಶಂಕರ್ - ತೆಲುಗು
C
ವನ್ನದಾಸನ್ - ತಮಿಳು
D
ಗೀತಾ ಉಪಾಧ್ಯಯ – ನೇಪಾಳಿ
Question 4 Explanation: 
ಬೊಳುವಾರು ಮಹಮ್ಮದ್ ಕುಂಞಿ – ಉರ್ದು:

ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ‘ಸ್ವಾತಂತ್ರ್ಯ ಓಟ’ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಶಸ್ತಿ ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಮುಂದಿನ ಪೆಬ್ರುವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Question 5

5. 2016 ಭಾರತ-ನೇಪಾಳ ಜಾನಪದ ಕರಕುಶಲ ಮೇಳ (India-Nepal Folk Crafts Festival) ಯಾವ ನಗರದಲ್ಲಿ ಆರಂಭಗೊಂಡಿದೆ?

A
ನವದೆಹಲಿ
B
ಕಠ್ಮಂಡು
C
ಕೊಲ್ಕತ್ತ
D
ಗುವಾಹಟಿ
Question 5 Explanation: 
ಕಠ್ಮಂಡು:

ಐದು ದಿನಗಳ ಭಾರತ-ನೇಪಾಳ ಜಾನಪದ ಕರಕುಶಲ ಮೇಳ ನೇಪಾಳದ ಕಠ್ಮಂಡುವಿನಲ್ಲಿ ಡಿಸೆಂಬರ್ 19 ರಂದು ಆರಂಭಗೊಂಡಿದೆ. ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಈ ಮೇಳದ ಉದ್ದೇಶ.

Question 6

6. ವಿಶ್ವಸಂಸ್ಥೆಯ ಎಕಾನಮಿಕ್ ಅಂಡ್ ಸೋಶಿಯಲ್ ಕಮೀಷನ್ ಫಾರ್ ಏಷ್ಯಾ ಅಂಡ್ ದಿ ಫೆಸಿಫಿಕ್ ಕೇಂದ್ರ ಕಚೇರಿ ಎಲ್ಲಿದೆ?

A
ನವದೆಹಲಿ
B
ಬ್ಯಾಂಕಾಕ್
C
ಡಾಕಾ
D
ಟೊಕಿಯೊ
Question 6 Explanation: 
ಬ್ಯಾಂಕಾಕ್:

ವಿಶ್ವಸಂಸ್ಥೆಯ ಎಕಾನಮಿಕ್ ಅಂಡ್ ಸೋಶಿಯಲ್ ಕಮೀಷನ್ ಫಾರ್ ಏಷ್ಯಾ ಅಂಡ್ ದಿ ಫೆಸಿಫಿಕ್ ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿದೆ. 1947ರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಸದಸ್ಯ ರಾಷ್ಟ್ರಗಳ ಪೈಕಿ ಆರ್ಥಿಕ ಸಹಕಾರವನ್ನು ಪ್ರೋತ್ಸಾಹಿಸಲು ಸ್ಥಾಪಿಸಲಾಗಿದೆ.

Question 7

7. ಈ ಕೆಳಗಿನ ಯಾವ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದ 5ನೇ ಬೃಹತ್ ಜಿಡಿಪಿ ಆರ್ಥಿಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ?

A
ಯುಕೆ
B
ಜರ್ಮನಿ
C
ಚೀನಾ
D
ಜಪಾನ್
Question 7 Explanation: 
ಯುಕೆ:

ನೂರು ವರ್ಷಗಳಲ್ಲೇ ಮೊದಲ ಬಾರಿಗೆ ಭಾರತವು ಯುಕೆ ಅನ್ನು ಹಿಂದಿಕ್ಕಿ ಅಮೆರಿಕ, ಚೀನ, ಜಪಾನ್ ಮತ್ತು ಜರ್ಮನಿಯ ಬಳಿಕ ವಿಶ್ವದ 5ನೇ ಬೃಹತ್ ಜಿಡಿಪಿ ಆರ್ಥಿಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 25 ವರ್ಷಗಳಲ್ಲಿ ಭಾರತವು ತೀವ್ರ ಹಾಗೂ ಅತಿ ವೇಗದ ಆರ್ಥಿಕಾಭಿವೃದ್ಧಿಯನ್ನು ಸಾಧಿಸಿರುವುದು ಮತ್ತು ಬ್ರಿಟನ್ ಈಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದು, ಮುಖ್ಯವಾಗಿ ಬ್ರೆಕ್ಸಿಟ್, ಇದಕ್ಕೆ ಕಾರಣವಾಗಿದೆ ಎಂದು ವರದಿಯು ಹೇಳಿದೆ.

Question 8

8. ಈ ಕೆಳಗಿನ ಯಾವ ತಂಡ “2016 ಇಂಡಿಯನ್ ಸೂಪರ್ ಲೀಗ್” ಪ್ರಶಸ್ತಿಯನ್ನು ಗೆದ್ದುಕೊಂಡಿದೆ?

A
ಅಟ್ಲೆಟಿಕೊ ಡಿ ಕೋಲ್ಕತ್ತ
B
ಕೇರಳ ಬ್ಲಾಸ್ಟರ್ಸ್
C
ಚೆನ್ನೈಯಿನ್
D
ಡೆಲ್ಲಿ ಡೈನೋಮಸ್
Question 8 Explanation: 
ಅಟ್ಲೆಟಿಕೊ ಡಿ ಕೋಲ್ಕತ್ತ:

ಅಟ್ಲೆಟಿಕೊ ಡಿ ಕೋಲ್ಕತ್ತ ತಂಡವು ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪ್ರಶಸ್ತಿ ಗೆದ್ದುಕೊಂಡಿತು. ಪೆನಾಲ್ಟಿ ಶೂಟೌಟ್ನಲ್ಲಿ ಅಟ್ಲೆಟಿಕೊ ತಂಡವು 4–3 ಗೋಲುಗಳಿಂದ ಕೇರಳ ತಂಡವನ್ನು ಸೋಲಿಸಿತು. ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸಹಮಾಲೀಕತ್ವದ ಅಟ್ಲೆಟಿಕೊ ತಂಡವು ಎರಡನೇ ಬಾರಿ ಪ್ರಶಸ್ತಿಯನ್ನು ತನ್ನ ದಾಗಿಸಿಕೊಂಡಿತು. 2014ರಲ್ಲಿ ಮುಂಬೈನಲ್ಲಿ ನಡೆದಿದ್ದ ಫೈನಲ್ನಲ್ಲಿಯೂ ಅಟ್ಲೆಟಿಕೊ ತಂಡವು ಬ್ಲಾಸ್ಟರ್ಸ್ ತಂಡವನ್ನು 1–0ಯಿಂದ ಮಣಿಸಿತ್ತು.

Question 9

9. 2016 ಬಿಬಿಸಿ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡವರು __________?

A
ಉಸೇನ್ ಬೋಲ್ಟ್
B
ಆಂಡಿ ಮುರೆ
C
ರೋಜರ್ ಫೆಡರರ್
D
ಮೈಕಲ್ ಫೆಲ್ಫ್
Question 9 Explanation: 
ಆಂಡಿ ಮುರೆ

ವಿಶ್ವದ ನಂ.1 ಟೆನ್ನಿಸ್ ಆಟಗಾರ ಬ್ರಿಟನ್ ನ ಆಂಡಿ ಮುರೆ ರವರು 2016 ಬಿಬಿಸಿ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Question 10

10. ಈ ಕೆಳಗಿನ ಯಾರನ್ನು ಮಣಿಸುವ ಮೂಲಕ ಭಾರತದ ವಿಜೇಂದರ್ ಸಿಂಗ್ ರವರು ಡಬ್ಲ್ಯುಬಿಒ ಸೂಪರ್ ಮಿಡ್ಲ್ವೇಟ್ ಏಷ್ಯಾ ಪೆಸಿಫಿಕ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡರು?

A
ಕೆರ್ರಿ ಹೋಪ್
B
ಫ್ರಾನ್ಸಿಸ್ ಚೆಕಾ
C
ಜಾನಿ ಜೇಮ್ಸ್
D
ಸುತ್ರಿಯೊನೊ ಬಾನ್ಸ್
Question 10 Explanation: 
ಫ್ರಾನ್ಸಿಸ್ ಚೆಕಾ:

ಭಾರತದ ವಿಜೇಂದರ್ ಸಿಂಗ್ ಅವರು 39–37, 37–38, 39–37ರಿಂದ ಫ್ರಾನ್ಸಿಸ್ ಚೆಕಾ ಅವರನ್ನು ಸೋಲಿಸುವ ಮೂಲಕ ಡಬ್ಲ್ಯುಬಿಒ ಸೂಪರ್ ಮಿಡ್ಲ್ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿಯನ್ನು ಗೆದ್ದುಕೊಂಡರು.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,21,2016”

  1. pradeep m katram says:

    Idu thumba help agatte

  2. Ravi Mirchi says:

    Frnds plz inform to ur all frnds.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.