ಉಸೇನ್ ಬೋಲ್ಟ್ ಮತ್ತು ಅಲಮಜ್ ಅಯಾನಗೆ ಐಎಎಎಫ್ ವಿಶ್ವ ಅಥ್ಲೆಟಿಕ್ ಪ್ರಶಸ್ತಿ

ಜಮೈಕಾದ ಉಸೇನ್‌ ಬೋಲ್ಟ್‌ ಅವರಿಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ (ಐಎಎಎಫ್‌) ನೀಡುವ ವರ್ಷದ ಶ್ರೇಷ್ಠ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೋಲ್ಟ್‌ ಆರನೇ ಬಾರಿ ಈ ಪ್ರಶಸ್ತಿ ಪಡೆ ಅಥ್ಲೀಟ್‌ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2008, 2009, 2011, 2012 ಮತ್ತು 2013ರಲ್ಲಿ ಬೋಲ್ಟ್ ರವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 2016 ರಲ್ಲಿ ಬೋಲ್ಟ್ ರವರ ಶ್ರೇಷ್ಠ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಉಸೇನ್ ಬೋಲ್ಟ್ ರವರು ರಿಯೋ ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು..

ಅಲಮಜ್ ಅಯಾನ:

bolt_upಇಥಿಯೋಪಿಯಾದ ಅಲಮಜ್ ಅಯಾನ ರವರಿಗೆ ವರ್ಷದ ಶ್ರೇಷ್ಠ ಮಹಿಳಾ ಅಥ್ಲೀಟ್‌’ ಗೌರವ ಲಭಿಸಿದೆ. ಅಯಾನ ರವರು ಒಲಿಂಪಿಕ್ಸ್‌ನ 10,000 ಮೀಟರ್ಸ್‌ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅಯಾನ ಅವರು ಈ ಪ್ರಶಸ್ತಿಯನ್ನು ಗೆದ್ದುಕೊಂಡ ಇಥಿಯೋಪಿಯಾದ ಮೂರನೇಯವರು.

ಇತರೆ ಪ್ರಶಸ್ತಿಗಳು:

  • ಉದಯೋನ್ಮಖ ಆಟಗಾರ: ಅಂಡ್ರೆ ಡೆ ಗ್ರಾಸೆ (ಕೆನಡಾ)
  • ಉದಯೋನ್ಮಖ ಆಟಗಾರ್ತಿ: ನಫಿಸ್ಸಟೊ ಥಿಯಂ (ಬೆಲ್ಜಿಯಂ)
  • ತರುಭೇತದಾರ: ಹ್ಯಾರಿ ಮರ್ರ (ಯುಎಸ್)
  • ಅಧ್ಯಕ್ಷೀಯ ಪ್ರಶಸ್ತಿ: ಟೆಗ್ಲ ಲೊರೌಪೆ

Leave a Reply

Your email address will not be published. Required fields are marked *