ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,17, 2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,17,2016

Question 1

1. ವಿಶ್ವಸಂಸ್ಥೆಯ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅಮಿನ ಮೊಹಮ್ಮದ್ ರವರು ಯಾವ ದೇಶದವರು?

A
ನೈಜೀರಿಯಾ
B
ಇಥೋಪಿಯ
C
ಸೌದಿ ಅರೇಬಿಯಾ
D
ಮಂಗೋಲಿಯ
Question 1 Explanation: 
ನೈಜೀರಿಯಾದ

ಪರಿಸರ ಸಚಿವ ಅಮಿನ ಮೊಹಮ್ಮದ್ ರವರು ವಿಶ್ವಸಂಸ್ಥೆಯ ಉಪ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ರವರು ಅಮಿನ ಅವರನ್ನು ಈ ಹುದ್ದೆಗೆ ನೇಮಕ ಮಾಡಿದ್ದಾರೆ.

Question 2

2. ಈ ಮುಂದಿನ ಯಾವುದು ದೇಶದ ಮೊದಲ ಕಾರ್ಬನ್ ನ್ಯೂಟ್ರಲ್ ಜಿಲ್ಲೆ ಎನಿಸಲಿದೆ?

A
ಪಣಜಿ
B
ಮಜುಲಿ
C
ಗ್ಯಾಂಟಕ್
D
ಶಿಮ್ಲಾ
Question 2 Explanation: 
ಮಜುಲಿ:

ವಿಶ್ವ ಪ್ರಸಿದ್ದ ನದಿ ದ್ವೀಪ ಜಿಲ್ಲೆ “ಮಜುಲಿ” ಭಾರತದ ಮೊದಲ ಕಾರ್ಬನ್ ನ್ಯೂಟ್ರಲ್ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಲು ಸಿದ್ದವಾಗಿದೆ. 2020 ರ ವೇಳೆಗೆ ಮಜುಲಿ ಕಾರ್ಬನ್ ನ್ಯೂಟ್ರಲ್ ಜಿಲ್ಲೆಯಾಗಿ ಹೊರಹೊಮ್ಮಲಿದೆ. ಇದಕ್ಕಾಗಿ ಹವಾಮಾನ ಬದಲಾವಣೆ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಡೆಯಲು ಅಸ್ಸಾಂ ಸರ್ಕಾರ “ಸಸ್ಟೈನೆಬಲ್ ಆಕ್ಷನ್ ಫಾರ್ ಕ್ಲೈಮೆಟ್ ರಿಸೈಲೆಂಟ್ ಡೆಮಲಪ್ ಮೆಂಟ್ ಇನ್ ಮಜುಲಿ” ಯೋಜನೆ ಜಾರಿಗೊಳಿಸಿದೆ.

Question 3

3. ಭಾರತೀಯ ಜೀವ ವಿಮಾ ನಿಗಮ (LIC)ದ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?

A
ವಿ ಕೆ ಶರ್ಮಾ
B
ಉಷಾ ಷಣ್ಮುಗಂ
C
ಎಂ. ಕೆ. ರಾಯ್
D
ರಮಣಿ ಶಂಕರ್
Question 3 Explanation: 
ವಿ ಕೆ ಶರ್ಮಾ:

ಭಾರತೀಯ ಜೀವ ವಿಮಾ ನಿಗಮ (LIC)ದ ನೂತನ ಮುಖ್ಯಸ್ಥರಾಗಿ ವಿ ಕೆ ಶರ್ಮಾ ನೇಮಕಗೊಂಡಿದ್ದಾರೆ. ಶರ್ಮಾ ರವರು ಇದುವರೆಗೂ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂದಿನ ಐದು ವರ್ಷಗಳ ಕಾಲ ಇವರು ಅಧ್ಯಕ್ಷರಾಗಿ ಇರಲಿದ್ದಾರೆ.

Question 4

4. “ತಾಲ್ ಫವಂಗ್ ಕುಟ್ ಉತ್ಸವ (Tal Favang Kut Festival)” ಯಾವ ರಾಜ್ಯದಲ್ಲಿ ಪ್ರಸಿದ್ದ ಸುಗ್ಗಿ ಹಬ್ಬ?

A
ಅಸ್ಸಾಂ
B
ನಾಗಲ್ಯಾಂಡ್
C
ಮಿಜೋರಾಂ
D
ಸಿಕ್ಕಿಂ
Question 4 Explanation: 
ಮಿಜೋರಾಂ:

ವಿಜೋರಾಂನ ಪ್ರಸಿದ್ದ ಸುಗ್ಗಿ ಹಬ್ಬ ತಾಲ್ ಫವಂಗ್ ಕುಟ್ ಉತ್ಸವ ಮಿಜೋರಾಂನ ಐಜ್ವಲ್ ನಲ್ಲಿ ಆರಂಭಗೊಂಡಿದೆ. ಮಿಜೋರಾಂನ ಪ್ರವಾಸೋದ್ಯಮ ಇಲಾಖೆ ಮತ್ತು ಮಿಜೋರಾಂ ಸರ್ಕಾರ ಈ ಹಬ್ಬವನ್ನು ಆಯೋಜಿಸುತ್ತಿದೆ. ತಾಲ್ ಫವಂಗ್ ಕುಟ್ ಉತ್ಸವ ಸುಗ್ಗಿ ಉತ್ಸವವಾಗಿದ್ದು ಭತ್ತದ ಬೆಳೆಯನ್ನು ಕಟಾವು ಮಾಡಿದ ನಂತರ ಆಚರಿಸಲಾಗುವುದು.

Question 5

5. 6ನೇ ಬ್ರಿಕ್ಸ್ ಆರೋಗ್ಯ ಸಚಿವರ ಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯಿತು?

A
ಬೀಜಿಂಗ್
B
ನವದೆಹಲಿ
C
ಕೇಪ್ ಟೌನ್
D
ಮಾಸ್ಕೋ
Question 5 Explanation: 
ನವದೆಹಲಿ:

ನವದೆಹಲಿಯಲ್ಲಿ 6ನೇ ಬ್ರಿಕ್ಸ್ ಆರೋಗ್ಯ ಸಚಿವರ ಸಭೆಯನ್ನು ಆಯೋಜಿಸಲಾಗಿತ್ತು. ಬ್ರಿಕ್ಸ್ ರಾಷ್ಟ್ರಗಳ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಸಾಧಿಸುವುದು ಮತ್ತು ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಮಾಡಲಾದ ಘೋಷಣೆಯನ್ನು ಅಂಗೀಕರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 7ನೇ ಬ್ರಿಕ್ಸ್ ಆರೋಗ್ಯ ಸಚಿವರ ಸಭೆ 2017ರಲ್ಲಿ ಚೀನಾದಲ್ಲಿ ನಡೆಯಲಿದೆ.

Question 6

6. ಈ ಕೆಳಗಿನ ಯಾವ ಕೇಂದ್ರ ಸಚಿವಾಲಯ “ಸ್ವಸ್ಥ್ಯ ರಕ್ಷಾ ಕಾರ್ಯಕ್ರಮ (Swasthya Raksha Programme)” ಕ್ಕೆ ಚಾಲನೆ ನೀಡಿದೆ?

A
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
B
ಆಯುಷ್ ಸಚಿವಾಲಯ
C
ಪರಿಸರ ಸಚಿವಾಲಯ
D
ಕುಡಿಯುವ ನೀರು ಮತ್ತು ನೈಮರ್ಲ್ಯ ಸಚಿವಾಲಯ
Question 6 Explanation: 
ಆಯುಷ್ ಸಚಿವಾಲಯ:

ಹಳ್ಳಿಗಳಲ್ಲಿ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಆಯುಷ್ ಸಚಿವಾಲಯ ಸ್ವಸ್ಥ್ಯ ರಕ್ಷಾ ಕಾರ್ಯಕ್ರಮವನ್ನು ಆರಂಭಿಸಿದೆ. ಸ್ವಸ್ಥ್ಯ ಪರೀಕ್ಷಣಾ ಕ್ಯಾಂಪ್ ಆಯೋಜಿಸುವುದು ಮತ್ತು ಆರೋಗ್ಯ/ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.

Question 7

7. ಬಡವರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ಪೂರೈಸುವ “ಅನ್ನಪೂರ್ಣ ರಸೊಯಿ” ಯೋಜನೆಯನ್ನು ಯಾವ ರಾಜ್ಯ ಇತ್ತೀಚೆಗೆ ಜಾರಿಗೆ ತಂದಿದೆ?

A
ಗುಜರಾತ್
B
ರಾಜಸ್ತಾನ
C
ಮಧ್ಯ ಪ್ರದೇಶ
D
ಹರಿಯಾಣ
Question 7 Explanation: 
ರಾಜಸ್ತಾನ:

ಬಡವರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ಪೂರೈಸುವ ಸಲುವಾಗಿ ರಾಜಸ್ತಾನ ಸರ್ಕಾರ ಅನ್ನಪೂರ್ಣ ರಸೊಯಿ ಯೋಜನೆಯನ್ನು ಜಾರಿಗೆ ತಂದಿದೆ. ಜೈಪುರದ ಮುನಿಸಿಪಾಲ್ ಕಾರ್ಪೋರೇಶನ್ ಕ್ಯಾಂಪಸ್ ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾರಂಭಿಕ ಹಂತದಲ್ಲಿ 12 ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಆ ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಯೋಜನೆಯಡಿ ಬಡ ಜನರಿಗೆ ರೂ 5ಕ್ಕೆ ಉಪಹಾರವನ್ನು ಮತ್ತು ರೂ 8ಕ್ಕೆ ಊಟವನ್ನು ನೀಡಲಾಗುವುದು. ರಾಜಸ್ತಾನದ ಸಾಂಪ್ರದಾಯಿಕ ಆಹಾರಗಳಾದ ದಾಲ್ ಬಾತಿ, ಕೂರ್ಮ, ಬಾಜ್ರ ರೊಟ್ಟಿ ಮತ್ತು ಕಿಚಡಿ ದೊರೆಯಲಿದೆ.

Question 8

8. ಕೇಂದ್ರ ಕಡಲ ಮೀನುಗಳ ಸಂಶೋಧನಾ ಸಂಸ್ಥೆ (Central Marine Fisheries Research Institute) ಎಲ್ಲಿದೆ?

A
ಕೊಲ್ಕತ್ತಾ
B
ಮಂಗಳೂರು
C
ಕೊಚ್ಚಿ
D
ಚೆನ್ನೈ
Question 8 Explanation: 
ಕೊಚ್ಚಿ:

ಕೇಂದ್ರ ಕಡಲ ಮೀನುಗಳ ಸಂಶೋಧನಾ ಸಂಸ್ಥೆ ಕೇರಳದ ಕೊಚ್ಚಿಯಲ್ಲಿದೆ. 1947 ರಲ್ಲಿ ಕೃಷಿ ಸಚಿವಾಲಯದಡಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆನಂತರ 1967 ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ವರ್ಗಾವಣೆ ಮಾಡಲಾಯಿತು.

Question 9

9. ಈ ಕೆಳಗಿನ ಗ್ರಹಗಳನ್ನು ಗಮನಿಸಿ:

I) ಗುರು

II) ಮಂಗಳ

III) ಶುಕ್ರ

IV) ಭೂಮಿ

ಈ ಮೇಲಿನ ಯಾವ ಗ್ರಹಗಳು ಟ್ರೋಜನ್ ಕ್ಷುದ್ರಗ್ರಹಗಳನ್ನು ಹೊಂದಿವೆ?

A
I, II & III
B
II, III & IV
C
I, II & IV
D
I, II, III & IV
Question 9 Explanation: 
I, II, III & IV:

ಯಾವುದೇ ಕ್ಷುದ್ರಗ್ರಹ ಒಂದು ಗ್ರಹದ ಜೊತೆಯಲ್ಲಿ ಒಂದೇ ಕಕ್ಷೆಯಲ್ಲಿ ಪರಿಭ್ರಮಿಸಿದರೆ ಅದನ್ನು ಟ್ರೋಜನ್ ಕ್ಷುದ್ರಗ್ರಹ ಎನ್ನಲಾಗುತ್ತದೆ. ಆದರೆ ಈ ಕ್ಷುದ್ರಗ್ರಹಗಳು ಯಾವುದೇ ಸಮಯದಲ್ಲೂ ಗ್ರಹಕ್ಕೆ ಅಪ್ಪಳಿಸುವುದಿಲ್ಲ. ನಮ್ಮ ಸೌರವ್ಯೂಹದಲ್ಲಿ ಆರು ಗ್ರಹಗಳು ಅಂದರೆ ಗುರು, ನೆಪ್ಚೂನ್, ಮಂಗಳ, ಶುಕ್ರ, ಯುರೇನಸ್ ಮತ್ತು ಭೂಮಿ ಟ್ರೋಜನ್ ಕ್ಷುದ್ರಗ್ರಹಗಳನ್ನು ಹೊಂದಿವೆ. 2010TK7 ಭೂಮಿಯ ಏಕೈಕ ಟ್ರೋಜನ್

Question 10

10. “ಡೆಕ್ಕನ್ ಒಡಿಸಿ (Deccan Odyssey)” ಯಾವ ರಾಜ್ಯದ ವಿಲಾಸಿ ಪ್ರವಾಸಿ ರೈಲು?

A
ಕರ್ನಾಟಕ
B
ಆಂಧ್ರ ಪ್ರದೇಶ
C
ಮಹಾರಾಷ್ಟ್ರ
D
ತಮಿಳುನಾಡು
Question 10 Explanation: 
ಮಹಾರಾಷ್ಟ್ರ:

ಡೆಕ್ಕನ್ ಒಡಿಸಿ ಮಹಾರಾಷ್ಟ್ರ ರಾಜ್ಯದ ವಿಲಾಸಿ ಪ್ರವಾಸಿ ರೈಲು. ಮಹಾರಾಷ್ಟ್ರ ಸರ್ಕಾರ ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ರೈಲನ್ನು ಆರಂಭಿಸಿದೆ. ರಾಜಸ್ತಾನದ “ಪ್ಯಾಲೇಸ್ ಆನ್ ವೀಲ್” ಮಾದರಿಯಲ್ಲೇ ಈ ರೈಲನ್ನು ಆರಂಭಿಸಲಾಗಿದ್ದು, 2004 ರಿಂದ ಈ ರೈಲು ಸಂಚರಿಸುತ್ತಿದೆ. 21 ಭೋಗಿ ಹೊಂದಿರುವ ಈ ರೈಲು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಾದ್ಯಂತ ಸಂಚರಿಸುತ್ತಿದೆ. ಇತ್ತೀಚೆಗೆ ಈ ರೈಲು ಕರ್ನಾಟಕದ ವಿಜಯಪುರಕ್ಕೆ ಆಗಮಿಸಿತ್ತು. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸಹ “ಗೋಲ್ಡನ್ ಚಾರಿಯಟ್” ರೈಲನ್ನು ಆರಂಭಿಸಿದೆ.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Responses to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,17, 2016”

  1. Nice Inge tet app madri ellarigu anakulavagutte

  2. #39I would agree that the war and the FISA issue should ordinarily tend to push libertarians toward Mr. O, but he is a disaster on taxation, so that is why they won’t vote for him.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.