ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-31 ಸಂವಿಧಾನ

Question 1

1. ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಇವರನ್ನು ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ

II) ಸಿಎಜಿ ರವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ

III) ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ

IV) ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ.

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
I, II & III
C
II, III & IV
D
ಮೇಲಿನ ಎಲ್ಲವೂ
Question 1 Explanation: 
I, II & III

ಮೇಲಿನ ಒಂದು, ಎರಡು ಮತ್ತು ಮೂರನೇ ಹೇಳಿಕೆಗಳು ಸರಿಯಾಗಿವೆ. ಹೇಳಿಕೆ ನಾಲ್ಕು ತಪ್ಪಾಗಿದೆ. ಸಿಎಜಿ ರವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅನರ್ಹರಾಗಿರುತ್ತಾರೆ.

Question 2

2. ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ (Pro-term) ಸ್ಪೀಕರ್ ಆಗಿ ನೇಮಕ ಮಾಡುವವರು ಯಾರು?

A
ಕೇಂದ್ರ ಸಚಿವ ಸಂಪುಟ
B
ರಾಷ್ಟ್ರಪತಿಗಳು
C
ನಿಕಟಪೂರ್ವ ಸ್ಪೀಕರ್
D
ನೂತನ ಸದಸ್ಯರು
Question 2 Explanation: 
ರಾಷ್ಟ್ರಪತಿಗಳು

ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ (Pro-term) ಸ್ಪೀಕರ್ ಸಚಿವ ಸಂಪುಟದ ವ್ಯವಹಾರ ಸಮಿತಿ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

Question 3

3. ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?

A

ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ

B

ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ

C

ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ

D

ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ

Question 3 Explanation: 

ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ

Question 4

4. ಭಾರತದ ಈ ಕೆಳಕಂಡ ಸಂಸ್ಥೆಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಿಂದ ಹೊರತಾಗಿದೆ

A
ಕೇಂದ್ರ ಹಣಕಾಸು ಆಯೋಗ
B
ವಲಯ ಮಂಡಳಿಗಳು (Zonal Councils)
C
ಕೇಂದ್ರ ಚುನಾವಣಾ ಆಯೋಗ
D
ಕೇಂದ್ರ ಹಿಂದುಳಿದ ವರ್ಗಗಳ ಆಯೋಗ
Question 4 Explanation: 
ವಲಯ ಮಂಡಳಿಗಳು (Zonal Councils)

ವಲಯ ಮಂಡಳಿಗಳನ್ನು ಸಂಸತ್ತಿನಿಂದ ರೂಪಿಸಲಾದ ರಾಜ್ಯ ಪುನರ್ವಿಗಂಡಣಾ ಕಾಯಿದೆ 1956ರ ಮೂಲಕ ಸ್ಥಾಪಿಸಲಾಗಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ಮತ್ತು ಅಂತರರಾಜ್ಯ ಸಂಬಂಧಗಳನ್ನು ಸುಧಾರಿಸಲು ವಲಯ ಮಂಡಳಿಗಳನ್ನು ಸ್ಥಾಪಿಸಲಾಗಿದೆ.

Question 5

5. ಭಾರತದ ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಗಮನಿಸಿ

I) ಈ ಆಯೋಗ 1993 ರ ನಂತರ ಬಹು ಸದಸ್ಯ ಸಮಿತಿಯಾಗಿ ಮಾರ್ಪಟ್ಟಿತು

II) ಈ ಆಯೋಗದ ಮೊದಲ ಅಧ್ಯಕ್ಷರು ಕೆ.ವಿ.ಕೆ.ಸುಂದರಂ

III) ಚುನಾವಣಾ ಆಯೋಗದ ಅಧ್ಯಕ್ಷರ ಅವಧಿ 6 ವರ್ಷಗಳು

IV) ರಾಜ್ಯ ವಿಧಾನ ಪರಿಷತ್ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಕೇಂದ್ರ ಚುನಾವಣಾ ಆಯೋಗದ್ದಾಗಿದೆ

ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಸಂಕೇತಾಕ್ಷರಗಳಿಂದ ಗುರುತಿಸಿ:

A
I, II & III
B
I & III
C
I, II & III
D
ಮೇಲಿನ ಎಲ್ಲವೂ
Question 5 Explanation: 
I & III

ಚುನಾವಣಾ ಆಯುಕ್ತರು ತಿದ್ದುಪಡಿ ಕಾಯಿದೆ-1993ರ ಪ್ರಕಾರ ಚುನಾವಣಾ ಆಯೋಗ ಬಹು ಸದಸ್ಯ ಆಯೋಗವಾಗಿ ಮಾರ್ಪಟ್ಟಿದೆ. ಅಂದರೆ ಒಬ್ಬ ಮುಖ್ಯಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ. ಸುಕುಮಾರ್ ಸೇನ್ ಚುನಾವಣಾ ಆಯೋಗದ ಮೊದಲ ಆಯುಕ್ತರು.

Question 6

6. ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು

A
ಜೂನ್ 18, 1951
B
ಜನವರಿ 26, 1950
C
ನವೆಂಬರ್ 26, 1952
D
ಜುಲೈ 1, 1951
Question 6 Explanation: 
ಜೂನ್ 18, 1951
Question 7

7. ಭಾರತದಲ್ಲಿ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು

A
ಸಂವಿಧಾನದ ತಿದ್ದುಪಡಿ 72, 1990
B
ಸಂವಿಧಾನದ ತಿದ್ದುಪಡಿ 61, 1989
C
ಸಂವಿಧಾನದ ತಿದ್ದುಪಡಿ 81, 1985
D
ಸಂವಿಧಾನದ ತಿದ್ದುಪಡಿ 75, 1991
Question 7 Explanation: 
ಸಂವಿಧಾನದ ತಿದ್ದುಪಡಿ 61, 1989
Question 8

8. ರಾಷ್ಟ್ರೀಯ ಏಕತಾ ಮಂಡಲಿಯ (National Integration Council) ಅಧ್ಯಕ್ಷರು ಯಾರಾಗಿರುತ್ತಾರೆ?

A
ರಾಷ್ಟ್ರಪತಿ
B
ಕೇಂದ್ರ ಗೃಹ ಮಂತ್ರಿಗಳು
C
ಪ್ರಧಾನಮಂತ್ರಿ
D
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
Question 8 Explanation: 
ಪ್ರಧಾನಮಂತ್ರಿ
Question 9

9. ಸಂವಿಧಾನದ ತಿದ್ದುಪಡಿ 95, 2010 ರ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಯಾವ ವರ್ಷದವರೆಗೆ ವಿಸ್ತರಿಸಲಾಯಿತು

A
2025
B
2030
C
2015
D
2020
Question 9 Explanation: 
2020
Question 10

10. ಅಸ್ಸಾಂ, ನಾಗಲ್ಯಾಂಡ್, ಮಿಜೋರಾಂ ಮತ್ತು ಗೋವಾ ರಾಜ್ಯಗಳನ್ನು ಸ್ಥಾಪಿಸಿದ ಸರಿಯಾದ ಕಾಲಾನುಕ್ರಮ ಗುರುತಿಸಿ:

A
ಅಸ್ಸಾಂ, ನಾಗಲ್ಯಾಂಡ್, ಮಿಜೋರಾಂ, ಗೋವಾ
B
ಅಸ್ಸಾಂ, ಮಿಜೋರಾಂ, ಗೋವಾ, ನಾಗಲ್ಯಾಂಡ್
C
ಮಿಜೋರಾಂ, ಅಸ್ಸಾಂ, ಗೋವಾ, ನಾಗಲ್ಯಾಂಡ್
D
ಅಸ್ಸಾಂ, ಮಿಜೋರಾಂ, ನಾಗಲ್ಯಾಂಡ್, ಗೋವಾ
Question 10 Explanation: 
ಅಸ್ಸಾಂ, ನಾಗಲ್ಯಾಂಡ್, ಮಿಜೋರಾಂ, ಗೋವಾ

ಅಸ್ಸಾಂ (15ನೇ ಆಗಸ್ಟ್ 1947), ನಾಗಲ್ಯಾಂಡ್ (1ನೇ ಡಿಸೆಂಬರ್, 1963), ಮಿಜೋರಾಂ (20ನೇ ಫೆಬ್ರವರಿ 1987) ಮತ್ತು ಗೋವಾ (30ನೇ ಮೇ, 1987).

There are 10 questions to complete.

[button link=”http://www.karunaduexams.com/wp-content/uploads/2016/12/ಕ್ವಿಜ್-31-ಸಂವಿಧಾನ.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಕ್ವೀಜ್ 29-ಸಂವಿಧಾನ”

  1. mahantesh

    Are are b also useful

Leave a Comment

This site uses Akismet to reduce spam. Learn how your comment data is processed.