ಮ್ಯಾಗ್ನಸ್ ಕಾರ್ಲ್ಸನ್ಗೆ ಒಲಿದ 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ಕಿರೀಟ

chess_upನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು 2016 ವಿಶ್ವ ಚೆಸ್‌ ಚಾಂಪಿಯನ್‌ ಷಿಪ್‌ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ  ಕಾರ್ಲ್‌ಸನ್‌ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
ರೋಚಕ ಹಣಾಹಣಿಯಲ್ಲಿ ನಾರ್ವೆಯ ಆಟಗಾರ, ರಷ್ಯಾದ ಸರ್ಜಿ ಕರ್ಜಾಕಿನ್‌ ಅವರನ್ನು ಪರಾಭವಗೊಳಿಸಿದರು. ನಾಲ್ಕು ಸುತ್ತುಗಳ ರ್‍ಯಾಪಿಡ್‌  ಪ್ಲೇ ಆಫ್‌ನ ಮೊದಲ ಎರಡು ಸುತ್ತುಗಳು ಡ್ರಾದಲ್ಲಿ ಅಂತ್ಯ ಕಂಡಿದ್ದವು. ಹೀಗಾಗಿ ಮೂರನೇ ಹಾಗೂ ನಾಲ್ಕನೇ ಸುತ್ತಿನ ಹೋರಾಟ ಕುತೂಹಲ ಕೆರಳಿಸಿತ್ತು. ಈ ಸುತ್ತುಗಳಲ್ಲಿ ಜಾಣ್ಮೆಯಿಂದ ಕಾಯಿಗಳನ್ನು ಪ್ರಶಸ್ತಿಗೆ ಮುತ್ತಿಟ್ಟರು.

ಮ್ಯಾಗ್ನಸ್ ಕಾರ್ಲ್‌ಸನ್‌ ಬಗ್ಗೆ:

  • ಮ್ಯಾಗ್ನಸ್ ಕಾರ್ಲ್‌ಸನ್‌ ನಾರ್ವೆಯ ಚೆಸ್ ಗ್ರಾಂಡ್ ಮಾಸ್ಟರ್. ಪ್ರಸ್ತುತ ಇವರು ವಿಶ್ವದ ನಂ.1 ಶ್ರೇಯಾಂಕಿತ ಚೆಸ್ ಆಟಗಾರ.
  • 2004 ರಲ್ಲಿ ತಮ್ಮ 13ವರ್ಷ ವರ್ಷದಲ್ಲಿಯೇ ಗ್ರಾಂಡ್ ಮಾಸ್ಟರ್ ಪಟ್ಟವನ್ನು ಕಾರ್ಲ್‌ಸನ್‌ ಪಡೆದುಕೊಂಡರು.
  • ಜನವರಿ 1, 2010 ರಲ್ಲಿ ಕಾರ್ಲ್‌ಸನ್‌ ಅವರು ವಿಶ್ವ ನಂ.1 ಚೆಸ್ ಆಟಗಾರನಾಗಿ ಹೊರಹೊಮ್ಮಿದರು. ಆಗ ಅವರ ವಯಸ್ಸು 19 ವರ್ಷ 32 ದಿನ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶ್ವದ ನಂ.1 ಪಟ್ಟವನ್ನು ಪಡೆದುಕೊಂಡ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
  • ನವೆಂಬರ್ 2013 ರಲ್ಲಿ, ಭಾರತದ ವಿಶ್ವನಾಥನ್ ಆನಂದ್ ಅವರನ್ನು ಮಣಿಸಿ ಮತ್ತೊಮ್ಮೆ ವಿಶ್ವ ಚೆಸ್ ಚಾಂಪಿಯನ್ ಷಿಪ್ ಅನ್ನು ಗೆದ್ದುಕೊಂಡರು.
  • 2013 ರ ಟೈಮ್ಸ್ ನಿಯತಕಾಲಿಕೆಯ ಜಗತ್ತಿನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾರ್ಲ್‌ಸನ್‌ ಸ್ಥಾನಪಡೆದುಕೊಂಡು ಸುದ್ದಿಯಲ್ಲಿದ್ದರು.

Leave a Reply

Your email address will not be published. Required fields are marked *