ಎಐಬಿಎ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಸಚಿನ್ ಸಿಂಗ್ ಗೆ ಚಿನ್ನ

ಭಾರತದ ಯುವ ಬಾಕ್ಸರ್ ಸಚಿನ್ ಸಿಂಗ್, ಎಐಬಿಎ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌’ಶಿಪ್‌ನ ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಸಚಿನ್ 5-0 ಅಂಕಗಳಿಂದ ಕ್ಯೂಬಾದ ಜಾರ್ಜ್ ಗ್ರಿನಾನ್ ರವರನ್ನು ಮಣಸಿ ಪದಕಕ್ಕೆ ಕೊರಳೊಡ್ಡಿದರು.

  • ಎಐಬಿಯ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಸಚಿನ್ ಸಿಂಗ್. 2008 ರಲ್ಲಿ ಟಿ ನಾನೊ ಸಿಂಗ್ ಮತ್ತು 2010 ರಲ್ಲಿ ವಿಕಾಸ್ ಕೃಷ್ಣ ಪ್ರಶಸ್ತಿಯನ್ನು ಗೆದ್ದಿದ್ದರು.
  • ಈ ಬಾರಿಯ ಚಾಂಪಿಯನ್ ಷಿಪ್ ನಲ್ಲಿ ಭಾರತ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆಲ್ಲಲು ಶಕ್ತವಾಯಿತು.
  • 91 ಕೆ.ಜಿ ವಿಭಾಗದಲ್ಲಿ ಭಾರತದ ನಮನ್ ತನ್ವರ್ ರವರು ಬೆಳ್ಳಿ ಪದಕವನ್ನು ಗೆದ್ದುಕೊಂಡರು.

No Responses to “ಎಐಬಿಎ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಸಚಿನ್ ಸಿಂಗ್ ಗೆ ಚಿನ್ನ”

Leave a Reply

Your email address will not be published. Required fields are marked *