ಮಾನವರಹಿತ ಯುದ್ದ ವಿಮಾನ “ರುಸ್ತಮ್-2” ಪರೀಕ್ಷಾರ್ಥ ಹಾರಾಟ ಯಶಸ್ವಿ

ಸ್ವದೇಶಿ ನಿರ್ಮಿತ ಮಾನವರಹಿತ ಯುದ್ಧ ವಿಮಾನ ‘ರುಸ್ತುಮ್‌–2 (ತಪಸ್-201)’ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ. ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಪರೀಕ್ಷಾರ್ಥ ಹಾರಾಟವನ್ನು ನಡೆಸಲಾಯಿತು. ಮಾನವ ರಹಿತ ಮತ್ತು ಮಾನವ ಸಹಿತ ಯುದ್ದ ವಿಮಾನ ಹಾರಾಟ ನಡೆಸಲು ಈ ಟೆಸ್ಟ್ ರೇಂಜ್ ಅನ್ನು ಚಿತ್ರದುರ್ಗದ ಬಳಿ ನೂತನವಾಗಿ ನಿರ್ಮಿಸಲಾಗಿದೆ. ಪರೀಕ್ಷಾರ್ಥ ಹಾರಾಟದ ವೇಳೆ ವಿಮಾನದ ಟೇಕಾಫ್‌, ಲ್ಯಾಂಡಿಂಗ್‌ ಮತ್ತು ಹಾರಾಟದ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ರುಸ್ತುಂ-2 ಬಗ್ಗೆ:

  • ರುಸ್ತುಂ-2 “ಮಧ್ಯಮ ಎತ್ತರದ ದೀರ್ಘ ತಾಳಿಕೆ (Medium Altitude Long Endurance)” ಮಾನವ ರಹಿತ ಯುದ್ದ ವಿಮಾನ. ಸತತವಾಗಿ 24 ಗಂಟೆ ಕಾಲ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ತೂಕ 2 ಟನ್.
  • ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ಮಾನವರಹಿತ ವಿಮಾನ ಕಣ್ಗಾವಲು ಮತ್ತು ಶತ್ರುವಿನ ನೆಲೆ ಪತ್ತೆಹಚ್ಚುವ ಕೆಲಸದ ಜತೆಗೆ ಯುದ್ಧ ವಿಮಾನದ ರೀತಿಯಲ್ಲಿ ದಾಳಿ ನಡೆಸಲೂ ಈ ವಿಮಾನವನ್ನು ಬಳಸಲು ಸಾಧ್ಯವಿದೆ.
  • ಈ ವಿಮಾನ ಸೇನೆಗೆ ಸೇರ್ಪಡೆ ಯಾದರೆ ಭಾರತದ ರಕ್ಷಣಾ ವ್ಯವಸ್ಥೆಯ ಬಲ ಹೆಚ್ಚಲಿದೆ. ಅಮೆರಿಕದ ‘ಪ್ರೆಡೇಟರ್‌’ ಡ್ರೋನ್‌ ಗಳಿಗೆ ಸಾಟಿಯಾಗಬಲ್ಲದಾಗಿದೆ.
  • ಡಿಆರ್‌ಡಿಒದ ಅಂಗಸಂಸ್ಥೆಯಾದ ಬೆಂಗಳೂರು ಮೂಲಕ ಏರೋನಾಟಿಕಲ್ ಡೆವಲೆಪ್ಮೆಂಟ್ ಎಸ್ಟಬ್ಲಿಷ್ಮೆಂಟ್ (ADE) ಅಭಿವೃದ್ದಿಪಡಿಸಿದೆ. ಬಿಇಎಲ್ ಮತ್ತು ಹೆಚ್ಎಎಲ್ ಉತ್ಪಾದನಾ ಪಾಲುದಾರಿಕೆ ಸಂಸ್ಥೆಗಳಾಗಿವೆ.

ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮಹಿಳಾ ಕಮಾಂಡೊಗಳನ್ನು ನಿಯೋಜಿಸಿದ ಸಿಆರ್ಪಿಎಫ್

ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಇದೇ ಮೊದಲ ಬಾರಿಗೆ ಜಾರ್ಖಂಡ್‌ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮಹಿಳಾ ಕಮಾಂಡೊಗಳನ್ನು ನಿಯೋಜಿಸಿದೆ. ಸಿಆರ್‌ಪಿಎಫ್‌ನ 232ನೇ ಬೆಟಾಲಿಯನ್‌ನ 135 ಮಹಿಳಾ ಕಮಾಂಡೊಗಳು ರಾಂಚಿಯ ಖೂಂಟಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಮಹಿಳಾ ಕಮಾಂಡೊಗಳಿಗೆ ಇದು ಮೊದಲ ಅನುಭವವಾಗಿದ್ದು, ರಾಂಚಿಯ ಹೊರವಲಯದ ಕಾಡುಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರಿಗೆ ಸಿಆರ್‌ಪಿಎಫ್‌ ಅಕಾಡೆಮಿಗಳಲ್ಲಿ ಹೆಚ್ಚಿನ ತರಬೇತಿ ನೀಡಲಾಗಿದೆ.
  • ‘ಮಹಿಳಾ ಕಮಾಂಡೊಗಳನ್ನು ನಿಯೋಜಿಸಿದ ನಂತರ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸಹಕಾರಿಯಾಗಲಿದೆ.

ಸಿಆರ್ಪಿಎಫ್:

  • ದೇಶದ ಅತಿ ದೊಡ್ಡ ಪ್ಯಾರಾಮಿಲಿಟರಿ ಪಡೆ. ಕೇಂದ್ರ ಗೃಹ ಸಚಿವಾಲಯದಡಿ ಇದು ಕಾರ್ಯನಿರ್ವಹಿಸುತ್ತದೆ.
  • ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೆರವಾಗುವುದು ಮತ್ತು ಅಂತರಿಕ ದಾಳಿಯನ್ನು ಹತ್ತಿಕ್ಕುವುದು ಇದರ ಪ್ರಮುಖ ಕಾರ್ಯ.
  • 1939 ರಲ್ಲಿ ಕ್ರೌನ್ ರೆಪ್ರೆಸೆಂಟೇಟಿವ್ ಪೊಲೀಸ್ ಆಗಿ ಸ್ಥಾಪಿಸಲಾಗಿದ್ದು, ಸ್ವಾತಂತ್ರ್ಯ ನಂತರ 1949 ಸಿಆರ್ಪಿಎಫ್ ಕಾಯಿದೆಯಡಿ ಶಾಸನಬದ್ದ ಸ್ಥಾನ ನೀಡಲಾಗಿದೆ.
  • 228 ಬ್ಯಾಟಲಿಯನ್ ಹಾಗೂ 3 ಲಕ್ಷ ಸಿಬ್ಬಂದಿ ಹೊಂದಿರುವ ಮೂಲಕ ಸಿಆರ್ಪಿಎಫ್ ವಿಶ್ವದ ಅತಿ ದೊಡ್ಡ ಪ್ಯಾರಾಮಿಲಿಟರಿ ಪಡೆಯಾಗಿದೆ.

 

One Thought to “ಪ್ರಚಲಿತ ವಿದ್ಯಮಾನಗಳು- ನವೆಂಬರ್-21, 2016”

  1. GOURISH

    ಇದೊಂದು ಅತ್ತ್ಯುತ್ತಮವಾದ ಅಂತರ್ಜಾಲವಾಗಿದ್ದು. ಬಡ ಪ್ರತಿಭೆಗಳಿಗೆ ಬಹಳಷ್ಟು ಉಪಯೋಗವಾಗಿದ್ದು. ನಿಮ್ಮ ಕಾರ್ಯ ಶ್ಲಾಘನೀಯ

Leave a Comment

This site uses Akismet to reduce spam. Learn how your comment data is processed.